ಶಾಂತಕುಮಾರಿ ಹಲವು ಕ್ಷೇತ್ರಗಳಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಬಹುಮುಖಿ ಪ್ರತಿಭೆ.

ಫೆಬ್ರುವರಿ 18 ಶಾಂತಕುಮಾರಿ ಅವರ ಜನ್ಮದಿನ. ಅವರು ಹುಟ್ಟಿ ಬೆಳೆದದ್ದು ಸಾಗರದಲ್ಲಿ. ಸಾಗರ ಮತ್ತು ಶಿವಮೊಗ್ಗಗಳಲ್ಲಿ ಅವರ ವಿದ್ಯಾಭ್ಯಾಸ ನೆರವೇರಿತು. ಶೈಕ್ಷಣಿಕವಾಗಿ ಅವರದ್ದು ಎಂಎ ಕನ್ನಡ ಸಾಹಿತ್ಯ( ಪಿಎಚ್ಡಿ) ಸಾಧನೆ. ಇವರದ್ದು ಅಂತರಜಾತೀಯ ಪ್ರೇಮ ವಿವಾಹ. ಪತಿ ಎಂ. ನಾಗೇಂದ್ರ ಸ್ವಾಮಿ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಗಿದ್ದವರು. ಈ ದಂಪತಿಗಳಿಗೆ ಇಬ್ಬರು ಪುತ್ರರು.
ಶಾಂತಕುಮಾರಿ ಅವರು ಶಾಲಾ ಕಾಲೇಜುಗಳಲ್ಲಿ ಅಭಿನಯಿಸಿದ್ದರು. ನೃತ್ಯ ಸಂಗೀತ ಸಾಹಿತ್ಯಗಳಲ್ಲಿ ಅವರಿಗೆ ಅಪರಿಮಿತ ಆಸಕ್ತಿ. ಅಭಿನಯದಲ್ಲಿ ತುಂಬಾ ಆಸಕ್ತಿ ಇದ್ದರೂ ಮನೆಯ ಸಾಂಪ್ರದಾಯಿಕ ವಾತಾವರಣದಿಂದಾಗಿ ಅಭಿನಯ ಕ್ಷೇತ್ರವನ್ನು ಆಯ್ದುಕೊಳ್ಳಲಾಗಲಿಲ್ಲ. ಕೆಲವು ವರ್ಷಗಳ ಹಿಂದೆ ಅವಕಾಶ ಸಿಕ್ಕಿದ್ದರಿಂದ ಮತ್ತು ಮನೆಯವರ ಪ್ರೋತ್ಸಾಹವೂ ಇದ್ದದ್ದರಿಂದ ‘ಬಬ್ಲೂಷ’ ಚಿತ್ರದಲ್ಲಿ ನಾಯಕನ ತಾಯಿಯಾಗಿ ಅಭಿನಯಿಸಿದ್ದರು. ಆ ಸಿನಿಮಾಕ್ಕೆ ಇವರು ಹಾಡುಗಳನ್ನೂ ಬರೆದರು. ಹಂಪಿ ಉತ್ಸವದಲ್ಲಿ ಕೃಷ್ಣದೇವರಾಯ ನಾಟಕದಲ್ಲಿ ಚಿನ್ನಾಂಬೆಯಾಗಿ ಅಭಿನಯಿಸಿದರು.ಶಾಂತಕುಮಾರಿ ಅವರು ಹೈಸ್ಕೂಲಿನಲ್ಲಿ ಓದುವ ದಿನಗಳಿಂದಲೇ ಬರೆಯಲು ಆರಂಭಿಸಿದರು. ನಾಡಿನ ಎಲ್ಲಾ ಪ್ರಸಿದ್ಧ ಪತ್ರಿಕೆಗಳಲ್ಲೂ ಇವರ ಕವಿತೆ, ಲೇಖನ, ಕತೆಗಳು ಪ್ರಕಟಗೊಂಡವು. ವಿಶೇಷಾಂಕಗಳಲ್ಲಿ ಆಹ್ವಾನಿತರಾಗಿ ಬರೆದರು.ಶಾಂತಕುಮಾರಿ ಅವರು ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕಿಯಾಗಿ ಹಾಗೂ ವಿದ್ಯಾವರ್ಧಕ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದರು. ಚಂದನದಲ್ಲಿ ‘ಬೆಳಗು’ ಕಾರ್ಯಕ್ರಮ ನಿರ್ವಹಿಸಿದರು. ಶಾಂತಕುಮಾರಿ ಅವರು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಎರಡು ಅವಧಿಗಳಲ್ಲಿ ಕೆಲಸ ಮಾಡಿದರು.
ಶಿವರಾಮ ಕಾರಂತ ವೇದಿಕೆಯಲ್ಲಿ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದರು.ಶಾಂತಕುಮಾರಿ ಅವರ ಅಂಕಣ ಬರಹ ‘ಸೂರಂಚಿನ ನೀರು’ ಪ್ರಕಟಗೊಂಡಿತು. ಪ್ರಕಟಣೆಗೆ ಸಿದ್ಧಗೊಂಡಿರುವುದು ಸುಮಾರು ಹತ್ತು ಪುಸ್ತಕಗಳಾಗುವಷ್ಟಿದೆ. ಆದರೆ, ಆದ್ಯತೆ ಬೇರೆ ಇದ್ದಿದ್ದರಿಂದ ಆ ಕಡೆಗೆ ಗಮನ ಹರಿಸಲಿಲ್ಲ. ಇನಿಯನ ಪದಗಳು ಮತ್ತು ದಹನ ಇವರ ಕವಿತಾ ಸಂಕಲನಗಳು.’ದಹನ’ ಸಂಕಲನ ಕರಾವಳಿ ಪ್ರತಿಷ್ಠಾನ ಪ್ರಶಸ್ತಿ ಹಾಗೂ ಇನ್ನೊಂದೆರಡು ಪ್ರಶಸ್ತಿ ಪಡೆದುಕೊಂಡಿತು, ಇವರ ‘ಮುಟ್ಟು’ ಕಥಾಸಂಕಲನ ಮುಂಬೈನ ಸುಶೀಲಾಶೆಟ್ಟಿ ಪ್ರಶಸ್ತಿ ಮಾಸ್ತಿ ಪುರಸ್ಕಾರ, ಪಾಟೀಲಪುಟ್ಟಪ್ಪ ಪುರಸ್ಕಾರ ಪಡೆದುಕೊಂಡಿತು. ಇವೆಲ್ಲ ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ಆದರೂ ಇಂದಿಗೂ ಬರಹ ಅವರಲ್ಲಿ ಉಸಿರು ಎನ್ನುವಷ್ಟು ಸೇರಿಕೊಂಡಿದೆ. ಅದು ಅವರಿಗೆ ಹವ್ಯಾಸವಲ್ಲ. ಸಹ ಜೀವನದ ಅನುಭವಗಳನ್ನು ವಿಶ್ಲೇಷಿಸಿ ನೋಡುವ ಗುಣವಿರುವ ಅವರಿಗೆ, ಬರಹ ತಮ್ಮ ಅಸ್ತಿತ್ವ ಪ್ರಜ್ಞೆ ಎನಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧೂಳು ಸಂಗ್ರಹಿಸುವ 25 ಯಂತ್ರ ಖರೀದಿಗೆ ಬಿಬಿಎಂಪಿ ಸಜ್ಜು

Mon Feb 20 , 2023
  ಬೆಂಗಳೂರು, ಫೆಬ್ರವರಿ 20: ಸಿಲಿಕಾನ್ ಸಿಟಿಯಲ್ಲಿ ಕಸ ಗುಡಿಸುವುದು, ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಸ್ವೀಪಿಂಗ್ ಯಂತ್ರಗಳ ತೀವ್ರ ಕೊರತೆ ಎದುರಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ರಸ್ತೆಗಳಲ್ಲಿ ಧೂಳು ಮತ್ತು ಉದುರಿದ ಎಲೆಗಳನ್ನು ಸಂಗ್ರಹಿಸಲು ಹೆಚ್ಚುವರಿ ಯಂತ್ರಗಳ ಖರೀದಿಗೆ ಚಿಂತನೆ ನಡೆಸಿದೆ. ಇದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಬೆಂಗಳೂರು ತೀವ್ರಗತಿಯಲ್ಲಿ ಬೆಳೆಯುತ್ತಿದೆ. ನಗರೀಕರಣದಿಂದ ತೀವ್ರವಾಗಿ ಕುಸಿಯುತ್ತಿರುವ ನಗರದ ವಾಯು […]

Advertisement

Wordpress Social Share Plugin powered by Ultimatelysocial