ಪಟ್ನಾ: ಊಟ ಇಲ್ಲದೇ ವಲಸೆ ಕಾರ್ಮಿಕರು ಸತ್ತ ಸುದ್ದಿಗಳು ಸದ್ದು ಮಾಡುತ್ತಿರುವಾಗಲೇ ಬಿಹಾರದ ಕ್ವಾರಂಟೈನ್ ಕೇಂದ್ರದಲ್ಲಿ23 ವರ್ಷದ ಕಾರ್ಮಿಕನೊಬ್ಬ ಪ್ರತಿ ದಿನ ಬೆಳಗಿನ ಉಪಾಹಾರಕ್ಕೆ 40 ರೋಟಿ ಮತ್ತು ಮಧ್ಯಾಹ್ನ ಬರೋಬ್ಬರಿ 10 ಪ್ಲೇಟ್ ಅನ್ನ ಊಟ ಮಾಡುತ್ತಿರುವ ಸೋಜಿಗದ ಪ್ರಕರಣ ವರದಿಯಾಗಿದೆ. ರಾಜಸ್ಥಾನದಿಂದ ಮರು ವಲಸೆ ಬಂದು ಬಿಹಾರದ ಬಕ್ಸರ್‌ನ ಮಂಝ್ವಾರಿ ಕ್ವಾರಂಟೇನ್ ಕೇಂದ್ರದಲ್ಲಿಇರುವ ಅನುಪ್ ಓಝಾ ಅಧಿಕಾರಿಗಳನ್ನು ದಿಕ್ಕೆಡಿಸಿರುವ ಕಾರ್ಮಿಕ. ಓಝಾ ತಿನ್ನುವ ದೈತ್ಯ ಸ್ವರೂಪದ ಬಗ್ಗೆ ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳು ತಿಳಿಸಿದಾಗ ಮೊದಲು ನಮಗೆ ನಂಬಿಕೆಯೇ ಬರಲಿಲ್ಲ. ಖುದ್ದು ನೋಡೋಣ ಎಂದು ಕೇಂದ್ರಕ್ಕೆ ಬಂದಾಗ ಆ ದಿನ ಒಂದೇ ಊಟಕ್ಕೆ 85 ರೋಟಿ ತಿಂದು ಮುಗಿಸಿದ. ಆಗ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಾಗಲಿಲ್ಲ. ಒಬ್ಬ ವ್ಯಕ್ತಿಗೆ ಅಷ್ಟೊಂದು ಸಂಖ್ಯೆಯ ರೊಟ್ಟಿ ಲಟ್ಟಿಸುವ ಶ್ರಮದಿಂದ ಅಡುಗೆ ಭಟ್ಟರು ಕೂಡ ಬಸವಳಿದಿದ್ದಾರೆ ಎಂದು ಬಿಡಿಒ ಎಕೆ ಸಿಂಗ್ ಹೇಳಿದ್ದಾರೆ.
ಹತ್ತು ಕಾರ್ಮಿಕರು ತಿನ್ನವ ಅನ್ನವನ್ನು ಒಬ್ಬನೇ ತಿನ್ನುತ್ತಿದ್ದ

Please follow and like us: