೮.೯ ಕೋಟಿ ಕಳಪೆ ಮಾಸ್ಕ್ಗಳು ಮುಟ್ಟುಗೋಲು

ಚೀನಾ: ಚೀನಾ ಸರ್ಕಾರವು ಸುಮಾರು ೮.೯ ಕೋಟಿ ಕಳಪೆ ಮಾಸ್ಕ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾದ ಮಾರುಕಟ್ಟೆ ಗುಣಮಟ್ಟ ನಿಯಂತ್ರಕರು ಶುಕ್ರವಾರದ ಹೊತ್ತಿಗೆ ಸುಮಾರ ೮.೯ ಕೋಟಿ ಮಾಸ್ಕ್ಗಳು, ೪ಲಕ್ಷಕ್ಕೂ ಹೆಚ್ಚಿನ ಕಳಪೆ ಗುಣಮಟ್ಟದ ರಕ್ಷಣಾ ಸಾಧನಗಳು ಹಾಗೂ ೭ಕೋಟಿಗೂ ಹೆಚ್ಚಿನ ಮೌಲ್ಯದ ನಿಷ್ಪçಯೋಜನಕಾರಿ ಸೋಂಕು ನಿವಾರಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಣ ವಿಭಾಗದ ಉಪ ನಿರ್ದೇಶಕ ಗ್ಯಾನ್‌ಲಿನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಚೀನಾ ರಪ್ತು ಮಾಡಿರುವ ಮಾಸ್ಕ್ಗಳು ಹಾಗೂ ರಕ್ಷಣಾತ್ಮಕ ಉತ್ಪನ್ನಗಳು ದೋಷಮುಕ್ತವಾಗಿವೆ ಎಂದು ಹಲವು ದೇಶಗಳು ಆರೋಪಿಸಿವೆ. ಇದರ ಬೆನ್ನಲ್ಲೇ ಚೀನಾ ಮಾಸ್ಕ್ ಮತ್ತು ರಕ್ಷಣಾ ಸಾಧನಗಳ ತಯಾರಿಕೆಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಹೊಂದಿರಬೇಕು ಎಂದು ಹೊಸ ನಿಯಮ ಜಾರಿಗೆ ತಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾಗೆ ಮೊದಲ ರಾಜಕೀಯ ಮುಖಂಡನ ಬಲಿ

Mon Apr 27 , 2020
ಕೊರೋನಾ ವೈರಸ್​​ನಿಂದ ಗುಜರಾತ್​ನ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಖ್ ಮೃತಪಟ್ಟಿದ್ದಾರೆ. ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವುದರಿಂದ ಅನೇಕರಿಗೆ ಆಹಾರಇಲ್ಲದೆ ಪರದಾಡುತ್ತಿದ್ದಾರೆ. ಅಂಥವರಿಗೆ ಆಹಾರ ವಿತರಿಸಲು ಹೋಗಿದ್ದ ಬದ್ರುದ್ದೀನ್ ಶೇಖ್ ರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿತ್ತು. ಬಡವರಿಗೆ ಆಹಾರ ವಿತರಿಸುವಾಗಲೇ ಯಾರಿಂದಲೋ ಬದ್ರುದ್ದೀನ್ ಶೇಖ್​ಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಗುಜರಾತ್​ನ ಅಹಮದಾಬಾದ್​ನಲ್ಲಿರುವ ಎಸ್​ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. […]

Advertisement

Wordpress Social Share Plugin powered by Ultimatelysocial