ʼDBoss

 

DBoss Darshan : ಸ್ಯಾಂಡಲ್‌ವುಡ್‌ನ ಬಾಕ್ಸ್‌ ಆಫೀಸ್‌ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದ ಘಟನೆಗೆ ಕನ್ನಡ ನಟ, ನಟಿಯರು ಭಾರಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ಡಿಬಾಸ್‌ ಬೆಂಬಲಿಸಿ ಜಪ್ಪಲಿ ಎಸೆದವರ ವಿರುದ್ಧ ಗುಡುಗಿರುವ ನಟಿ ನಿಶ್ವಿಕಾ ನಾಯ್ಡು ಈ ರೀತಿಯಾಗಿ ದರ್ಶನ್‌ ಅವರು ಕುಗ್ಗಿಸಲು ಸಾಧ್ಯವಿಲ್ಲ, ಇಂತಹ ನೂರಾರು ಕಷ್ಟಗಳ ನಡುವೆ ಅವರು ಬೆಳೆದು ಬಂದಿದ್ದಾರೆ ಎಂದು ಹೇಳಿದ್ದಾರೆ.ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ಕ್ರಾಂತಿ ಸಿನಿಮಾದ ʼಬೊಂಬೆ ಬೊಂಬೆʼ ಹಾಡು ಬಿಡುಗಡೆ ಕಾರ್ಯಕ್ರಮದ ವೇದಿಕೆಯ ಮೇಲೆದರ್ಶನ್‌ ಅವರ ಮೇಲೆ ಚಪ್ಪಲಿಏಸೆಯಲಾಗಿತ್ತು. ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಈ ಕುರಿತು ನಟ ಧನ್ವೀರ್​ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ʼಕರ್ಮ ರಿಟರ್ಸ್‌ʼ ಅಂತ ಬರೆದುಕೊಂಡು ಚಪ್ಪಲಿ ಎಸೆದವರ ವಿರುದ್ಧ ಗುಡುಗಿದ್ದರು.ಇದೀಗ ಈ ಘಟನೆಗೆ ಭಾರಿ ವಿರೋಧ ವ್ಯಕ್ತ ಪಡಿಸಿರುವ ನಟಿ ನಿಶ್ವಿಕಾ ನಾಯ್ಡು, ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ, ವಿಡಿಯೋ ನೋಡಿ ನನಗೆ ಕೋಪ ಬಂತು. ಉದ್ದೇಶ ಪೂರ್ವಕವಾಗಿರಲಿ, ದುರುದ್ದೇಶದಿಂದಲೇ ಮಾಡಿರಲಿ, ಇದು ತಪ್ಪು ಅಲ್ವಾ…! ನೀವು ಅವರನ್ನು ಒಬ್ಬ ನಟನಾಗಿ, ಸ್ಟಾರ್‌ ಆಗಿ ಇಷ್ಟ ಪಡಲ್ಲ ಅಂದ್ರೆ ಬಿಡಿ, ಆದ್ರೆ ಒಬ್ಬ ಮನುಷ್ಯನನ್ನಾಗಿ ನೋಡಿ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ ಅಷ್ಟೇ. ಒಂದು ಮಾತು.. ಸೋಷಿಯಲ್‌ ಮೀಡಿಯಾದಲ್ಲಿ ಮತ್ತು ದೈಹಿಕವಾಗಿ ದರ್ಶನ್‌ ಅವರನ್ನು ಅವಮಾನ ಮಾಡುವುದರಿಂದ ಅವರನ್ನು ಕುಗ್ಗಿಸಲು ಸಾಧ್ಯವಿಲ್ಲ. ಅವರು ಇಂತಹ ಅನೇಕ ನೋವುಗಳನ್ನು ಅನುಭವಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆ.ಅಲ್ಲದೆ, ದರ್ಶನ್‌ ಅವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಜನತೆ ಹಾಗೂ ಅವರ ಅಭಿಮಾನಿಗಳು, ನಾವು ಅವರ ಜೊತೆ ನಿಲ್ಲಬೇಕು ಎಂದು ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ದರ್ಶನ್‌ ಅವರ ಮೇಲೆ ನಡೆದ ಈ ಘಟನೆಯಿಂದ ಸ್ಯಾಂಡಲ್‌ವುಡ್‌ ನಟ, ನಟಿಯರು ಬೇಸರಗೊಂಡಿದ್ದಾರೆ. ಅಭಿಮಾನಿಗಳಿಗೂ ಸಹ ಈ ಸಂಗತಿಯಿಂದ ಭಾರಿ ನೋವುಂಟಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುಂಡ್ಲುಪೇಟೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ರೈತ ಹಾಗೂ ಜಾನುವಾರುಗಳ ಬದುಕನ್ನು ನಾಶ ಮಾಡಿದ ಮಳೆ.

Mon Dec 19 , 2022
ಸಾಲ ಮಾಡಿ ಬಿತನೆ ಮಾಡಿದ ನಂತರ ಸತತವಾಗಿ ಸುರಿದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಯಿತು ಸುರಿದ ಮಳೆಯನ್ನು ಮನಗಂಡು ರಾಜ್ಯ ಸರ್ಕಾರ ಪರಿಹಾರ ನೀಡಲು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿತು ಅದರಂತೆ ರೈತರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ GPS ಫೋಟೋ ಮತ್ತು RTC ಗಳನು ರೈತ ಸಂಪರ್ಕ ಅಧಿಕಾರಿಗಳಿಗೆ ನೀಡಿದೇವು 4 ಹೆಕ್ಟೇರ್ ಗೇ ಬರಬೇಕಿತ್ತು ನೀಡಿರುವುದು ಕೇವಲ 1 ಹೆಕ್ಟೇರ್ ಮಾತ್ರ RI ಮಾತು VA […]

Advertisement

Wordpress Social Share Plugin powered by Ultimatelysocial