ಅಪಘಾತಕ್ಕೀಡಾದ ‘ಸುಖೋಯಿ-೨೦’ ವಿಮಾನ

ಅಪಘಾತಕ್ಕೀಡಾದ ‘ಸುಖೋಯಿ-೨೦’ ವಿಮಾನ’ಮಧ್ಯಪ್ರದೇಶದ ಮುರೈನಾದಲ್ಲಿ ಜನವರಿ ೨೮ ರಂದು ಬೆಳಗ್ಗೆ ಬಹುದೊಡ್ಡ ದುರ್ಘಟನೆಯಾಯಿತು. ಭಾರತೀಯ ವಾಯುಪಡೆಯ ‘ಸುಖೋಯಿ-೨೦ ಮತ್ತು ‘ಮಿರಾಜ್-೨೦೦೦ ಈ ಯುದ್ಧ ವಿಮಾನಗಳು ಅಪಘಾತಕ್ಕೀಡಾದವು.

ಈ ಘಟನೆಯ ವರದಿ ಸಿಕ್ಕಿದಾಕ್ಷಣ ಸಹಾಯ ಮತ್ತು ರಕ್ಷಣಾ ತಂಡಗಳು ಘಟನಾಸ್ಥಳಕ್ಕೆ ಧಾವಿಸಿದವು. ಇವೆರಡೂ ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಉಡ್ಡಾಣ ಮಾಡಿದ್ದವು. ಅಪಘಾತದ ಕಾರಣ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಪೊಲೀಸರು ನೀಡಿದ ಮಾಹಿತಿಗನುಸಾರ ಈ ದುರ್ಘಟನೆಯಲ್ಲಿ ಓರ್ವ ವೈಮಾನಿಕನು ಮೃತಪಟ್ಟಿದ್ದಾನೆ.

ವಿಮಾನ ಅಪಘಾತಕ್ಕೆ ಸಂಭಾವ್ಯ ಕಾರಣಗಳು

ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಇಂತಹ ವಿಮಾನ ಅಪಘಾತಗಳಾದಾಗ ಅದಕ್ಕೆ ಮುಖ್ಯವಾಗಿ ೪ ದೊಡ್ಡ ಕಾರಣಗಳಿರಬಹುದು.

೧. ಪ್ರತಿಕೂಲ ಹವಾಮಾನ : ಇಬ್ಬನಿ ಅಥವಾ ಮೋಡಗಳಿದ್ದರೆ ಸರಿಯಾಗಿ ಕಾಣಿಸುವುದಿಲ್ಲ.

೨. ತಾಂತ್ರಿಕ ವೈಫಲ್ಯ : ವಿಮಾನದ ಇಂಜಿನ್‌ನಲ್ಲಿರುವ ತಾಂತ್ರಿಕ ದೋಷದಿಂದಾಗಿ ಅದು ಸ್ಥಗಿತಗೊಳ್ಳುತ್ತದೆ.

೩. ಪ್ರಾಸಂಗಿಕ : ರಣಹದ್ದಿನಂತಹ ಯಾವುದಾದರೊಂದು ಪಕ್ಷಿ ಹಾರುತ್ತಿರುವಾಗ ಅದು ವಿಮಾನ ಮಾರ್ಗದ ನಡುವೆ ಬರುವುದು.

೪. ವೈಮಾನಿಕನ ತಪ್ಪು : ವಿಮಾನ ಹಾರಿಸುವಾಗ ವೈಮಾನಿಕನಿಂದ ಏನಾದರೂ ತಪ್ಪಾಗಬಹುದು. ಈ ರೀತಿ ಅಪಘಾತಗಳಾಗಲು ವಿವಿಧ ಕಾರಣಗಳಿರಬಹುದು; ಆದರೆ ಈ ಅಪಘಾತಕ್ಕೆ ನಿರ್ದಿಷ್ಟವಾದ ಕಾರಣವೇನು ? ಎಂದು ವಾಯುದಳದ ‘ಕೋರ್ಟ್ ಆಫ್ ಎನ್‌ಕ್ವೈರಿ (ನ್ಯಾಯಾಂಗದ ತನಿಖೆ) ಪೂರ್ಣಗೊಂಡ ನಂತರವೇ ನಮಗೆ ತಿಳಿಯುತ್ತದೆ. ವಿಮಾನದ ‘ಬ್ಲ್ಯಾಕ್ ಬಾಕ್ಸ್ (ವಿಮಾನದಲ್ಲಿ ಸಂಭವಿಸುತ್ತಿರುವ ಘಟನಾವಳಿಗಳನ್ನು ದಾಖಲಿಸುವ ಒಂದು ಯಂತ್ರ) ಅನ್ನು ಪತ್ತೆ ಹಚ್ಚುತ್ತಾರೆ. ಅನಂತರ ವಿಮಾನ ನಿರ್ದಿಷ್ಟವಾಗಿ ಎಷ್ಟು ಎತ್ತರದಲ್ಲಿ ಹಾರುತ್ತಿತ್ತು ? ಅದು ಯಾವಾಗ ಕೆಳಗೆ ಬಂದಿತು ? ಮತ್ತು ಯಾವಾಗ ಬಿದ್ದಿತು ? ಈ ಎಲ್ಲ ಮಾಹಿತಿ ಆ ‘ಬ್ಲ್ಯಾಕ್ ಬಾಕ್ಸ್‌ನಲ್ಲಿ ನೋಂದಣಿಯಾಗುತ್ತದೆ. ಅನಂತರ ಎಲ್ಲವೂ ಸ್ಪಷ್ಟವಾಗುತ್ತದೆ. ಸುಖೋಯಿಯನ್ನು ಒಂದು ಆಧುನಿಕ ವಿಮಾನವೆಂದು ಪರಿಗಣಿಸಲಾಗಿದೆ ಎಂಬುದು ನಿಶ್ಚಿತವಿದೆ. ಆದುದರಿಂದ ಈ ವಿಮಾನ ಅಪಘಾತಕ್ಕೀಡಾಗುವುದು, ಇದು ದೇಶಕ್ಕಾಗಿ ದೊಡ್ಡ ಹಾನಿಯಾಗಿದೆ. ಈ ವಿಮಾನದ ಬೆಲೆ ೫೦೦ ರಿಂದ ೬೦೦ ಕೋಟಿ ರೂಪಾಯಿಗಳಷ್ಟಿರುತ್ತದೆ. ಭಾರತವು ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್ನಲ್ಲಿ ‘ಮಿರಾಜ್ ಯುದ್ಧ ವಿಮಾನಗಳ ಪಾಲು ಬಹುದೊಡ್ಡದಾಗಿತ್ತು. ಭಾರತದಲ್ಲಿ ಅದರ ೧೦ ಸ್ಕ್ವಾಡ್ರನ್ (ತುಕಡಿಗಳು) ಇವೆ. ಇದರಲ್ಲಿ ನಾವು ವೈಮಾನಿಕನನ್ನು ಕಳೆದುಕೊಳ್ಳಬೇಕಾಗುತ್ತದೆ. ಆದುದರಿಂದ ಈ ರೀತಿಯ ಅಪಘಾತವಾಗುವುದು ದೇಶಕ್ಕೆ ದುರದೃಷ್ಟಕರ ವಿಷಯವಾಗಿದೆ. ಈ ದುರ್ಘಟನೆಯ ತನಿಖೆಯಾಗಿ ಆದಷ್ಟು ಬೇಗನೆ ವರದಿ ಬಹಿರಂಗವಾಗುವುದು, ಎಂಬುದು ನನಗೆ ಖಾತ್ರಿ ಇದೆ.

– (ನಿವೃತ್ತ) ಬ್ರಿಗೆಡಿಯರ್ ಹೇಮಂತ ಮಹಾಜನ, ಪುಣೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿಟಿ ರವಿ, ಅಶ್ವಥ್ ನಾರಾಯಣ ಇವರದು ಎಲುಬಿಲ್ಲದ ನಾಲಿಗೆ; ಸಲೀಂ ಅಹಮ್ಮದ್ ಗರಂ

Thu Feb 16 , 2023
ಸಿಟಿ ರವಿ, ಅಶ್ವಥ್ ನಾರಾಯಣ ಇವರದು ಎಲುಬಿಲ್ಲದ ನಾಲಿಗೆ; ಸಲೀಂ ಅಹಮ್ಮದ್ ಗರಂ ಹುಬ್ಬಳ್ಳಿ: ಅಶ್ವಥ್ ನಾರಾಯಣ ರನ್ನು ಕೂಡಲೇ ಅರೆಸ್ಟ್ ಮಾಡಬೇಕು. ಅವರಿಗೆ ನಾಚಿಕೆಯಾಗಬೇಕು, ಸಂವಿಧಾನದ ಮೇಲೆ ವೋಟ್ ತಗೋತಾರೆ‌. ಒಬ್ಬ ಮಂತ್ರಿಯಾಗಿ ಈ ರೀತಿ ಮಾತಾಡೋದು ಅವರ ಬದ್ದತೆ ತೋರಸತ್ತೆ. ಹೊಡಿ ಬಡಿ ಸರ್ಕಾರ ಬಿಜೆಪಿದು ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಸರ್ಕಾರದ ಆಯಸ್ಸು […]

Advertisement

Wordpress Social Share Plugin powered by Ultimatelysocial