ʼಒಣದ್ರಾಕ್ಷಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಒಣದ್ರಾಕ್ಷಿಯಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಮ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಮಾಡುತ್ತದೆ.

 

ಒಣ ದ್ರಾಕ್ಷಿ ನೀರು ಸೇವನೆಯಿಂದ ಮೂತ್ರಪಿಂಡವು ಸಕ್ರಿಯವಾಗಿ ಕೆಲಸ ಮಾಡುತ್ತದೆ.

ಇದು ಶರೀರದಲ್ಲಿ ಇರುವ ಟ್ಯಾಕ್ಸಿನ್ ಅನ್ನು ಹೊರ ತರುತ್ತದೆ. ಇದರಿಂದ ಯಕೃತ್ ಸಮಸ್ಯೆ ನಿವಾರಣೆ ಆಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಅಲರ್ಜಿ ಮತ್ತು ರೋಗಗಳ ಭಯ ಇರುವುದಿಲ್ಲ. ಒಣ ದ್ರಾಕ್ಷಿ ಸೇವನೆ ಮಾಡುತ್ತಾ ಬಂದರೆ ಜೀರ್ಣಕ್ರಿಯೆ ಸಕ್ರಿಯವಾಗಿ ನಡೆಯುತ್ತದೆ. ಮಲಬದ್ಧತೆ, ಅಸಿಡಿಟಿ ನಿವಾರಣೆ ಆಗುತ್ತದೆ. ರಕ್ತ ಶುದ್ಧಿ ಆಗಿ ಇದರಿಂದ ಮುಖದ ಮೇಲೆ ಮೊಡವೆಗಳು ಮೂಡುವುದು ನಿಲ್ಲುತ್ತದೆ.

ಒಣ ದ್ರಾಕ್ಷಿಯಲ್ಲಿ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಫಂಗಲ್ ಅಂಶ ಹೆಚ್ಚಾಗಿರುವುದರಿಂದ ಕೆರೆತ ಮೊದಲಾದ ಚರ್ಮ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

ಒಣ ದ್ರಾಕ್ಷಿ ನೀರು, ಕೆಟ್ಟ ಕೊಬ್ಬನ್ನು ಇಳಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋ ಹೈಡ್ರೇಟ್ ಇರುವುದರಿಂದ ತೂಕ ಹೆಚ್ಚಿಸಿಕೊಳ್ಳಲು ಸಹಕಾರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೊಂದು ಕೋವಿಡ್ ಅಲೆ.? ಕೆಲ ದೇಶಗಳಲ್ಲಿ ಕೇಸ್ ಹೆಚ್ಚಾಗ್ತಿದ್ದಂತೆ ಕೇಂದ್ರದಿಂದ ಮಹತ್ವದ ಸೂಚನೆ

Sat Mar 19 , 2022
ನವದೆಹಲಿ: ಶುಕ್ರವಾರ ಕೇವಲ 2,500 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ, ಭಾರತವು ಓಮಿಕ್ರಾನ್ ಹೆಚ್ಚಾಗಿದ್ದ ಮೂರನೇ ಅಲೆಯಿಂದ ಸುರಕ್ಷಿತವಾಗಿದೆ ಎಂದು ಹೇಳಬಹುದು. ದೇಶದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮತ್ತು ಸಮಯೋಚಿತ ಕೋವಿಡ್ -19 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಸೋಂಕು ಇಳಿಮುಖವಾಗಿದ್ದು, ಈಗ ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಸೋಂಕುಗಳ ಹೆಚ್ಚಳ ದೇಶದಲ್ಲಿ ಮತ್ತೊಂದು ಅಲೆ ಬರಬಹುದೆನ್ನುವ ಚರ್ಚೆಗೆ ಕಾರಣವಾಗಿದೆ.ಹಬ್ಬ ಹರಿದಿನಗಳ ಮಧ್ಯೆ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, […]

Advertisement

Wordpress Social Share Plugin powered by Ultimatelysocial