ಅಲ್ಲಾ ಕೊರೊನಾದಿಂದ ದೇಶವನ್ನ ಕಾಪಾಡು‌ – ಸರ್ಕಾರದ ಮಾರ್ಗಸೂಚಿಯಂತೆ ಸಚಿವರ ಪ್ರಾರ್ಥನೆ

ತ್ಯಾಗ ಬಲಿದಾನದ ಸಂದೇಶದ ಪ್ರತಿಕವೆ ಈದ್ ಹಬ್ಬ. ಮುಸಲ್ಮಾನ ರ ಪವಿತ್ರ ಹಬ್ಬಕ್ಕೂ ಕೋರೊನಾ ಅಡ್ಡಿಯಾಗಿದೆ. ಗಡಿನಾಡು ಬೀದರ್ ಜಿಲ್ಲೆಯಲ್ಲಿ ಈದ್,ರಂಜಾನ್ ಬಕ್ರಿದ್ ಹಬ್ಬ ಬಂತೆಂದರೆ ಸಾಕು ಈಡಿ ಬೀದರ್ ಜಿಲ್ಲೆಯಲ್ಲಿ ಕಳೆ ಕಟ್ಟುತ್ತಿತ್ತು, ಆದರೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೊಂಕಿತರ ಸಂಖ್ಯೆ ಎರಿಕೆಯಾಗುತ್ತಲೆ ಇರೊದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದ್ದು, ಇಂದು ಪವಿತ್ರ ಈದ್ ಹಬ್ಬದ ಮೇಲೂ  ಕರೋನಾ ವಕ್ಕರಿಸಿದೆ..ನಗರದ ಈದ್ಗಾ ಮೈದಾನದಲ್ಲಿ ಕೆವಲ ಬೆರಳೆಣಿಕೆಯಷ್ಟು ಜನ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಂಡು ಸಾಮೂಹಿಕ ಪ್ರಾಥನೆ ಸಲ್ಲಿಸಿದರು..

ಮಾಜಿ ಕ್ರೀಡಾ ಸಚಿವ ರಹೀಂ ಖಾನ್ ಸೇರಿದಂತೆ ಇತರರು ಸಾಮೂಹಿಕ ಪ್ರಾಥನೆಯಲ್ಲಿ ಭಾಗಿಯಾಗಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಕೋರೊನಾ ಭೀತಿ ಆದಷ್ಟು ಬೇಗ ನಿವಾರಣೆ‌ಮಾಡಲಿ ಎಂದು ಆ ಅಲ್ಲಾನ ಬಳಿ ಪ್ರಾಥನೆ‌ ಮಾಡಿದೆವೆ. ಆ ಅಲ್ಲಾನ ಕೃಪೆ ಎಲ್ಲಾರ ಮೇಲಿದೆ, ಆದಷ್ಟು ಬೇಗ ನಮ್ಮನ್ನ ಈ ಸಂಕಷ್ಟದಿಂದ ಪಾರು ಮಾಡುತ್ತಾರೆ ಎನ್ನುವ ನಂಬಿಕೆ ನಮಗಿದೆ‌ ಎಂದು ಮಾಜಿ ಕ್ರೀಡಾಸಚಿವ ರಹೀಂ ಖಾನ್ ಹೇಳಿದರು.. ಇನಾವು ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ‌ಮಾಡಿದ್ದೆವೆ.  ನಗರದ ಜನತೆ ಅನಾವಶ್ಯಕವಾಗಿ ಮನೆ ಬಿಟ್ಟು ಹೊರಬರಬೇಡಿ, ಎಂದು ಜನತೆಯಲ್ಲಿ‌ಮನವಿ ಮಾಡಿದರು.

 

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಮಕ್ಕಳ ಮಿಡ್-ಡೇ ಮೀಲ್ಸ್ ಹೆಸರಿನಲ್ಲಿ ದೇಣಿಗೆ ಸಂಗ್ರಹ

Sun Aug 2 , 2020
ಭಾರತದ ಸರ್ಕಾರೇತರ ಸಂಸ್ಥೆಯ ಅಕ್ಷಯ ಪಾತ್ರ ಫೌಂಢೇಶನ್‌ಗೆ ಮಿಡ್ ಡೇ ಮೀಲ್ಸ್ ಹೆಸರಿನಲ್ಲಿ ಅಮೆರಿಕಾದಲ್ಲಿ ೯.೫ ಲಕ್ಷ ಡಾಲರ್ ಸಂಗ್ರಹಿಸಲಾಗಿ ಭಾರತದ ರೂಪಾಯಿಲ್ಲಿ ೭.೧೨ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಅಕ್ಷಯ ಪಾತ್ರದ ಟೆಕ್ಸಾಸ್ ಘಟಕದ ವರ್ಚುವಲ್ ಗಾಲಾ ಟೆಕ್ನಾಲಜಿ ಫಾರ್ ಚೇಂಜ್ ಕಾರ್ಯಕ್ರಮ ಆಯೋಜಿಸಿ ಅದರ ಮೂಲಕ ಈ ಹಣವನ್ನು ಸಂಗ್ರಹಿಸಿದೆ ಈ ಕಾರ್ಯಕ್ರಮದಲ್ಲಿ ಜಗತ್ತಿನ ನಾನಾ ಭಾಗಗಳ ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಭಾಗಿಯಾಗಿದ್ದರು. ಭಾರತದಲ್ಲಿ ಮಕ್ಕಳ ಹಸಿವು ನೀಗಿಸುವುದು ಅವರಿಗೆ […]

Advertisement

Wordpress Social Share Plugin powered by Ultimatelysocial