ಆಯುರ್ವೇದದ ಪ್ರಕಾರ ಮಲಗುವ ಮುನ್ನ ಹಾಲು ಕುಡಿಯಬಾರದು: ಯಾಕೆ ಗೊತ್ತಾ?

 

ನಾವು ‘ಯಾವಾಗ ತಿನ್ನುತ್ತೇವೆ’ ಎಂಬುದು ನಾವು ‘ಏನು ತಿನ್ನುತ್ತೇವೆ’ ಎನ್ನುವಷ್ಟೇ ಮಹತ್ವದ ವಿಚಾರ. ಯಾವ ತರಹದ ಆಹಾರಗಳನ್ನು ಜೊತೆಗೂಡಿಸಿ ತಿನ್ನಬೇಕು? ಮತ್ತು ಯಾವುದನ್ನು ಯಾವ ಸಮಯದಲ್ಲಿ ತಿನ್ನಬೇಕು ಎನ್ನುವುದು ನಮ್ಮ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಮತ್ತು ದೇಹದೊಳಗೆ ಹೋಗುವ ಪೋಷಕಾಂಶಗಳು ಈ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ನಮ್ಮ ದೇಹ ಯಾವಾಗಲೂ ಕಾರ್ಯ ನಿರ್ವಹಿಸುತ್ತಾ ಇರುತ್ತದೆ. ಅದಕ್ಕೆ ತಡೆ ಒಡ್ಡದಂತೆ ಇರಲು ನಾವು ದಿನ ಪೂರ್ತಿ ತಿನ್ನುವ ಆಹಾರಗಳ ಕಡೆ ವಿಶೇಷ ಗಮನ ಕೊಡುತ್ತಿರಬೇಕು. ಇದರಿಂದ ಸರಿಯಾದ ಸಮಯದಲ್ಲಿ ಸರಿಯಾದ ಪೋಷಕಾಂಶಗಳು ನಮ್ಮ ದೇಹ ಸೇರುತ್ತದೆ.

ಸಾಮಾನ್ಯವಾಗಿ ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ನಾವು ಅಂದುಕೊಂಡಿದ್ದೇವೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆದಲ್ಲ ಎಂದು ತಿಳಿದುಬಂದಿದೆ. ‘ಹಾಲು ಕೂಡ ಒಂದು ತರಹದ ಊಟ, ಇದನ್ನು ರಾತ್ರಿ ಮಲಗುವ ಮೊದಲು ಸೇವಿಸುವುದರಿಂದ ನಾವು ಇನ್ನೊಂದು ಊಟ ಮಾಡಿದ ಹಾಗಿರುತ್ತದೆ ಮತ್ತು ಇದರಿಂದ ಜೀರ್ಣಕ್ರೀಯೆ ನಿಧಾನವಾಗಬಹುದು ಮತ್ತು ಕೆಲವರಲ್ಲಿ ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡಬಹುದು.’ ಎಂದು ದೆಹಲಿ ಮೂಲದ ತೂಕ ನಿರ್ವಹಣಾಧಿಕಾರಿ ಅನ್ಶುಲ್ ಜೈಭಾರತ್ ಹೇಳುತ್ತಾರೆ. ಹಾಗಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುದು ಒಳ್ಳೆಯದೇ? ಬನ್ನಿ ತಿಳಿದುಕೊಳ್ಳೋಣ.

ಹಲವರಿಗೆಹಾಲುದಿನದಮೊದಲಆಹಾರ:

ಹಾಲು ಒಂದು ಸಂಪೂರ್ಣ ಊಟ. ಸಾಂಪ್ರದಾಯಿಕವಾಗಿ ನಾವು ಮೊದಲಿನಿಂದಲೂ ನಮ್ಮ ದಿನವನ್ನು ಒಂದು ಲೋಟ ಹಾಲಿನಿಂದ ಪ್ರಾರಂಭ ಮಾಡುತ್ತೇವೆ. ಲ್ಯಾಕ್ಟೋಸ್ (ಹಾಲಿನಲ್ಲಿರುವ ಗ್ಲೂಕೊಸ್ ಮತ್ತು ಗೆಲ್ಯಾಕ್ಟೋಸ್ ಗಳ ಸಂಯೋಗದಿಂದ ಆದ ಒಂದು ದ್ವಶರ್ಕರ) ಸಮಸ್ಯೆ ಇಲ್ಲದೆ ಇರುವವರು ಬೆಳಗ್ಗೆ ಹಾಲು ಕುಡಿಯುವುದರಿಂದ ಅದರಲ್ಲಿರುವ ಅವಶ್ಯಕ ಪೋಷಕಾಂಶಗಳು ದಿನದ ಪ್ರಾರಂಭದಲ್ಲಿಯೇ ದೇಹ ಸೇರುತ್ತದೆ. ‘ನಿಮಗೆ ಲ್ಯಾಕ್ಟೋಸ್ ತೊಂದರೆ ಇಲ್ಲದಿದ್ದರೆ, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲವಾದರೆ ಖಾಲಿ ಹೊಟ್ಟೆಯಲ್ಲಿ ಹಾಲು ಸೇವಿಸುವುದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

ಖಾಲಿ ಹೊಟ್ಟೆಯಲ್ಲಿ ಹಾಲು ಸೇವಿಸುವುದು ಅಷ್ಟು ಒಳ್ಳೆಯದಲ್ಲ. ನಿಂಬು ನೀರು ಅಥವಾ ಆಯಪಲ್ ವಿನೆಗರ್ ದಿನದ ಪ್ರಾರಂಭದಲ್ಲಿ ಸೇವಿಸುವುದು ಉತ್ತಮ. ಇದರ ನಂತರ ನೀವು ಯಾವುದಾದರೂ ಇತರ ಆಹಾರದ ಜೊತೆಗೆ ಸೇರಿಸಿ ಹಾಲು ಕುಡಿಯುವುದು ಅತ್ಯುತ್ತಮ ಉದಾ: ಓಟ್ಸ್ ಅಥವಾ ಕಾರ್ನ್ ಫ್ಲೇಕ್ಸ್ ಜೊತೆಗೆ.ನನ್ನ ಅಭಿಪ್ರಾಯದಲ್ಲಿ, ನಿಮ್ಮ ದಿನದ ಪ್ರಾರಂಭ ಯಾವುದಾದರೂ ಲಘು ಆಹಾರದಿಂದ ಆಗಬೇಕು, ಇದರಿಂದ ಹೊಟ್ಟೆ ಶುದ್ಧಿಯಾಗುತ್ತದೆ.’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಶಿಲ್ಪಾ ಅರೋರಾ.

ಆಯುರ್ವೇದಏನುಹೇಳುತ್ತದೆ?

‘ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಎಲ್ಲರ ಆರೋಗ್ಯಕ್ಕೂ ಅಷ್ಟು ಒಳ್ಳೆಯದಲ್ಲ.ನೀವು ಯಾವ ರೀತಿಯ ದೇಹ ಪ್ರಕೃತಿಯನ್ನು ಹೊಂದಿರುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.ನೀವು ವಾತ ಅಥವಾ ಕಫದ ಸಮಸ್ಯೆ ಇರುವವರಾದರೆ, ಖಾಲಿ ಹೊಟ್ಟೆಯಲ್ಲಿ ಮತ್ತು ಬೆಳಗ್ಗಿನ ಹೊತ್ತು ಹಾಲು ಕುಡಿಯಲೇಬಾರದು.ಇದು ಕೆಮ್ಮು, ಜ್ವರಕ್ಕೆ ದಾರಿ ಮಾಡಿಕೊಡುತ್ತದೆ.

ನೀವು ಅಸಿಡಿಟಿ ಸಮಸ್ಯೆಯಿಂದ ಬಳಲುವವರಾಗಿದ್ದರೆ, ತಣ್ಣಗಿನ ಹಾಲು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ. ಯಾಕೆಂದರೆ ಹಾಲಿನಲ್ಲಿರುವ ಕ್ಯಾಲ್ಶಿಯಂ ದೇಹದ ಆಮ್ಲೀಯ ಅಂಶದೊಂದಿಗೆ ಸಂಯೋಗಗೊಂಡಾಗ ಅದು ಉಪ್ಪು ಆಗಿ ಪರಿವರ್ತನೆಗೊಂಡು ಅಸಿಡಿಟಿಯನ್ನು ಹೋಗಲಾಡಿಸುತ್ತದೆ.ವಾತ ಸಮಸ್ಯೆ ಇರುವವರು ಬೆಳಗ್ಗಿನ ಹೊತ್ತು ಬಿಟ್ಟು ಬೇರೆ ಯಾವ ಸಮಯದಲ್ಲಾದರೂ ಹಾಲು ಸೇವಿಸುವುದು ಒಳ್ಳೆಯದು, ಅದೂ ಬೆಲ್ಲ ಸೇರಿಸಿ ಕುಡಿದರೆ ಇನ್ನೂ ಉತ್ತಮ’

ಒಟ್ಟಾಗಿ ಹೇಳುವುದಾದರೆ, ಹಾಲು ಕುಡಿಯುವುದು ಅವರವರ ಹೇಹ ಪ್ರಕೃತಿಯ ಮೇಲೆ ಅವಲಂಬಿತವಾಗಿರುತ್ತದೆ. ಆಹಾರದ ಅಲರ್ಜಿ ಇರುವವರು ಹಾಲು ಸೇವಿಸುವಾಗ ಹೆಚ್ಚು ಎಚ್ಚರದಿಂದಿರಬೇಕು. ‘ನಿಮ್ಮ ದೇಹ ಏನು ಬಯಸುತ್ತದೋ ಅದನ್ನು ಮಾಡಿ. ಆಗ ಖಾಲಿ ಹೊಟ್ಟೆಯಲ್ಲಿ ನೀವು ಸೇವಿಸುವ ಆಹಾರ ನಿಮಗೆ ಉತ್ತಮ ಶಕ್ತಿಯನ್ನು ನೀಡುತ್ತದೋ, ಭಾರ ಎನಿಸುತ್ತದೋ ಅಥವಾ ನಿಮಗೆ ಸಮಸ್ಯೆಯೆನಿಸುತ್ತದೋ ಎಂದು ನಿಮ್ಮ ಅರಿವಿಗೆ ಬರುತ್ತದೆ’.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಂಧನೂರು ಸಿದ್ದರಾಮಯ್ಯ ಆಗಮನ.

Sun Feb 12 , 2023
ಸಿಂಧನೂರು ಸಿದ್ದರಾಮಯ್ಯ ಆಗಮನ ಕಾಂಗ್ರೆಸ್ ಮಾಜಿ ಶಾಸಕ ಹಂಪನಗೌಡ ಅವರ ಮೊಮ್ಮಗನ ಮದುವೆಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಆಗಮಿಸಿದರು ಸರ್ಕಿಟ್ ಹೌಸ್ ನಲ್ಲಿ ಮಾತನಾಡಿದರು ಅವರು ನಮ್ಮ ಪಕ್ಕ 130ರಿಂದ 150ಸೀಟು ಗೆಲುವು ವಿಶ್ವಾಸವಿದೆ ಎಂದರು. ಬಿಜೆಪಿ 40ರಿಂದ 50 ಗೆಲ್ಲುತ್ತದೆ ನನ್ನ ಮೇಲೆ ಬಿಜೆಪಿ ಪಕ್ಷದವರಿಗೆ ಭಯವಿದೆ ಅದಕ್ಕೆ ಕಾಳಜಿ ವಹಿಸುತ್ತಿದ್ದಾರೆ. ಬಾದಾಮಿ ಜನ ಎಲೆಕ್ಯಾಪ್ಟರ್ ಕೊಡುತ್ತೇವೆ, ನೀವೆ ನಿಂತುಕೊಳ್ಳಿ, ಎನ್ನುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial