BOLLYWOOD:ಅಯ್ಯಪ್ಪನ ದರ್ಶನ ಪಡೆದ ಬಾಲಿವುಡ್ ನಟ ಅಜಯ್​ ದೇವಗನ್;

ಇತ್ತೀಚೆಗೆ ಬಾಲಿವುಡ್(Bollywood) ನಟ ಅಜಯ್ ದೇವಗನ್ಕಾ ವಿ ಬಟ್ಟೆಯಲ್ಲಿ ಮಾಲಾಧಾರಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಬಹಳಷ್ಟು ಜನರು ನಟನ ಸಿನಿಮಾ ಲುಕ್ ಎಂದೇ ಹೇಳುತ್ತಿದ್ದರು.

ಆದರೆ ನಟ ನಿಜವಾಗಿಯೂ ಪ್ರಸಿದ್ಧ ತೀರ್ಥಯಾತ್ರಾ ಸ್ಥಳ ಶಬರಿಮೆಲೆಗೆ ಭೇಟಿ ಕೊಟ್ಟು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಬಂದಿದ್ದಾರೆ. ಶಬರಿ ಮಲೆಯತ್ತ ಈಗಾಗಲೇ ಯಾತ್ರಿಗಳ ದಂಡು ಸಾಗುತ್ತಿದ್ದು ಮಕರ ಸಂಕ್ರಮಣದಂದು ಜನಸಂದಣಿ ಹೆಚ್ಚಿರುತ್ತದೆ. ಬಹಳಷ್ಟು ಜನರು ಅದಕ್ಕೂ ಮೊದಲೇ ದೇವರ ದರ್ಶನ ಮಾಡಿ ಬರುತ್ತಾರೆ. ಇದೀಗ ನಟ ಅಜಯ್ ದೇವಗನ್ ಕೂಡಾ ಹೋಗಿ ಬಂದಿದ್ದಾರೆ. ತಮ್ಮ ಸ್ಟಾರ್​ಡಂ ಪಕ್ಕಕ್ಕೆ ಇಟ್ಟು, ಜನಸಾಮನ್ಯರಂತೆ ಮಾಲಾ ಧರಿಸಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಲು ಅನುಸರಿಸಬೇಕಾದ ಎಲ್ಲವನ್ನೂ ನಟ ಅಜಯ್​ ದೇವಗನ್ ದೃಢವಾಗಿ ಪಾಲಿಸುತ್ತಿದ್ದರು ಎನ್ನಲಾಗಿದೆ. ಮಾಲಾಧಾರಿಯಾದ ಬಳಿಕವೂ ಕಟ್ಟುನಿಟ್ಟಾಗಿ ವಿಧಿ ವಿಧಾನಗಳನ್ನು ಅಜಯ್​ ದೇವಗನ್​ ಪಾಲಿಸಿದ್ದರಂತೆ. ಅಜಯ್ ದೇವಗನ್ ಮಾಲಾಧಾರಿಯಾಗಿರುವ ಚಿತ್ರಗಳು ಇದೀಗ ವೈರಲ್ ಆಗಿದ್ದು, ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಎಲ್ಲಾ ಯಾತ್ರಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾಗಿರುವ ನಿಯಮಗಳನ್ನು ಅಜಯ್ ಕೂಡ ಪಾಲಿಸಿದ್ದಾರೆ. ಶಬರಿ ಮಲೆ ದೇಗಲಕ್ಕೂ ತೆರಳುವ ಮುನ್ನ ಮುಂಬೈನ ಸ್ಟುಡಿಯೋ ಎದುರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ತೊಡುವ ಕಪ್ಪು ಬಣ್ಣದ ದಿರಿಸಿನಲ್ಲೇ ಅಜಯ್ ಕಾಣಿಸಿಕೊಂಡಿದ್ದರು.

41 ದಿನ ನೆಲದಮೇಲೆ ಮಲಗಿದ್ದ ಅಜಯ್​ ದೇವಗನ್​!

ವ್ರತಾಚರಣೆಯಲ್ಲಿ ಸಾತ್ವಿಕ ಆಹಾರವನ್ನಷ್ಟೇ ಸೇವಿಸಲಾಗುತ್ತದೆ. ಚಪ್ಪಲಿ ಧರಿಸುವುದಿಲ್ಲ. ಮದ್ಯಪಾನ ಮೊದಲಾದವುಗಳಿಂದ ದೂರವಿರಬೇಕು.. ಈ ನಿಯಮಗಳು ಸೇರಿದಂತೆ ವ್ರತಾಚರಣೆಯಲ್ಲಿ ಪಾಲಿಸಲಾಗುವ ಎಲ್ಲಾ ನಿಯಮಗಳನ್ನು ಅಜಯ್ ಅನುಸರಿಸಿದ್ದಾರೆ ನಟ 41 ದಿನಗಳ ಕಾಲ ನೆಲದ ಮೇಲೆ ಮಲಗಿ, ಕಪ್ಪು ಬಟ್ಟೆ ಧರಿಸಿ, ದಿನಕ್ಕೆರಡು ಬಾರಿ ಅಯ್ಯಪ್ಪನ ಪೂಜೆ, ಬೆಳ್ಳುಳ್ಳಿ/ಈರುಳ್ಳಿ ಇಲ್ಲದೆ ಕೇವಲ ಸಸ್ಯಾಹಾರ ಸೇವಿಸಿ, ಹೋದಲ್ಲೆಲ್ಲಾ ಬರಿಗಾಲಿನಲ್ಲಿ ನಡೆದಿದ್ದಾರೆ. ಸುಗಂಧ ದ್ರವ್ಯ ಬಳಸದೇ ಮಲಗಿದ್ದರು. ಯಾವುದೇ ರೀತಿಯ ಮದ್ಯಪಾನವನ್ನೂ ಕೂಡ ಮಾಡಿಲ್ಲ. ನಟನ ಜೊತೆಯಲ್ಲಿ ಅವರ ಸೋದರ ಸಂಬಂಧಿಗಳಾದ ವಿಕ್ರಾಂತ್ ಮತ್ತು ಧರ್ಮೇಂದ್ರ ಅವರು ಅಜಯ್ ಅವರಂತೆಯೇ ಅದೇ ಆಚರಣೆಗಳನ್ನು ಅನುಸರಿಸಿದ್ದರು. ಅಜಯ್​ ದೇವಗನ್​ ಈಗ ಅಯ್ಯಪ್ಪ ದರ್ಶನ ಮುಗಿಸಿ ಮನೆಗೆ ಮರಳಿದ್ದಾರೆ.

ದಕ್ಷಿಣ ಭಾರತದಲ್ಲಿ ಭಕ್ತರು ಹೆಚ್ಚಾಗಿ ಮಾಲಾಧಾರಿಯಾಗಿ ಶಬರಿಮಲೆ ಯಾತ್ರೆಗೆ ಹೋಗುತ್ತಾರೆ. ಕನ್ನಡದ ನಟ ರಾಜ್‌ಕುಮಾರ್‌ ಸೇರಿದಂತೆ ಖ್ಯಾತ ತಾರೆಯರು ಕೂಡ ವ್ರತಾಚರಣೆ ಮಾಡಿದ್ದಾರೆ. ಆದರೆ ಬಾಲಿವುಡ್ ತಾರೆಯರು ಶಬರಿಮಲೆ ಯಾತ್ರೆಗೆ ತೆರಳಿದ್ದು ಕಡಿಮೆ. ಇದೀಗ ಅಜಯ್ ದೇವಗನ್ ವ್ರತಾಚರಣೆ ಮಾಡಿದ್ದು, ಎಲ್ಲರ ಗಮನಸೆಳೆದಿದೆ. ಸದ್ಯ ಅಜಯ್‌ ದೇವಗನ್‌ ರಾಜಮೌಳಿ ನಿರ್ದೇಶನದ ‘ಆರ್​ಆರ್​​ಆರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ‘ಗಂಗೂಬಾಯಿ ಕಾಠಿಯಾವಾಡಿ’, ‘ರನ್​ವೇ 34’, ‘ಮೈದಾನ್’, ‘ಸರ್ಕಸ್’, ‘ಥ್ಯಾಂಕ್ ಗಾಡ್’ ಚಿತ್ರಗಳು ಅಜಯ್​ ದೇವಗನ್ ಅವರ ಕೈಯಲ್ಲಿ ಇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

OMICRON:ಇಂದೋರ್‌ನಲ್ಲಿ 6 ಮಕ್ಕಳಿಗೆ ಒಮಿಕ್ರಾನ್‌ನ ಸೋಂಕು ;

Tue Jan 25 , 2022
ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೋಮವಾರ ಕೋವಿಡ್‌ನ ಓಮಿಕ್ರಾನ್ ರೂಪಾಂತರದ ಹೊಸ ತಳಿ ಪತ್ತೆಯಾಗಿದ್ದು, ಜನರಲ್ಲಿ ಹೊಸ ಆತಂಕ ಸೃಷ್ಠಿಮಾಡಿದೆ. ಅಧಿಕೃತ ವರದಿಗಳ ಪ್ರಕಾರ, ನಗರದಲ್ಲಿ ಇಂತಹ 12 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಒಮಿಕ್ರಾನ್‌ನ ಹೊಸ ‘ಆತಂಕಕಾರಿ’ ತಳಿ 6 ಮಕ್ಕಳಿಗೆ ತಗುಲಿದೆ ಎಂದು ವರದಿಯಾಗಿದೆ ಶ್ರೀ ಅರಬಿಂದೋ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (SAIMS) ಸಂಸ್ಥಾಪಕ ಅಧ್ಯಕ್ಷ ವಿನೋದ್ ಭಂಡಾರಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ಜನವರಿ 6 ರಿಂದ, ಒಮಿಕ್ರಾನ್ ರೂಪಾಂತರದ […]

Advertisement

Wordpress Social Share Plugin powered by Ultimatelysocial