ಪ್ರತಿಭಾ ನಂದಕುಮಾರ್ ಕನ್ನಡದ ಪ್ರಸಿದ್ಧ ಬರಹಗಾರ್ತಿ.

ಪ್ರತಿಭಾ ನಂದಕುಮಾರ್ ಬೆಂಗಳೂರಿನವರು. ಅವರು 1955ರ ಡಿಸೆಂಬರ್ 25ರಂದು ಜನಿಸಿದರು. ತಂದೆ ವಿ. ಎಸ್. ರಾಮಚಂದ್ರರಾವ್. ತಾಯಿ ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದರು. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದರು.ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ ಮನೋಧರ್ಮವನ್ನಾಗಿಸಿಕೊಂಡಿರುವ ಕವಿ. ಅವರು ವೈಯಕ್ತಿಕ ಮತ್ತು ವೃತ್ತಿ ಬದುಕುಗಳೆರಡರಲ್ಲೂ ನಿರಂತರ ಸಾಹಸ ಮತ್ತು ಪ್ರಯೋಗಗಳನ್ನು ನಡೆಸಿದವರು. ಉತ್ಕಟವಾಗಿ ಜೀವಿಸುವುದೇ ಬದುಕಿನ ಪರಮ ಸತ್ಯವನ್ನು ತಿಳಿಯಲು ಇರುವ ಏಕೈಕ ದಾರಿ ಎಂದು ನಂಬಿರುವ ಪ್ರತಿಭಾ ಅದೇ ಉತ್ಕಟತೆಯನ್ನು ತಮ್ಮ ಕವಿ ಸಮಯದುದ್ದಕ್ಕೂ ಕಾದುಕೊಂಡಿದ್ದಾರೆ.ಪ್ರತಿಭಾ ನಂದಕುಮಾರ್ ಪ್ರಕಟಿತ ಕಾವ್ಯ ಕೃತಿಗಳಲ್ಲಿ ನಾವು ಹುಡುಗಿಯರೇ ಹೀಗೆ, ಈತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಾಕಾರಂ!, ಅವರು ಪುರಾವೆಗಳನ್ನು ಕೇಳುತ್ತಾರೆ, ಮುನ್ನುಡಿ ಬೆನ್ನುಡಿಗಳ ನಡುವೆ, ಕಾಫಿ ಹೌಸ್, ಮುದುಕಿಯರಿಗಿದು ಕಾಲವಲ್ಲ , ಅವನ ಮುಖ ಮರೆತುಹೋಗಿದೆ ಮುಂತಾದ ಸಂಕಲನಗಳು ಸೇರಿವೆ. ಸಮಗ್ರ ಕಾವ್ಯ ಕೃತಿಯೂ ಪ್ರಕಟಗೊಂಡಿದೆ. ‘ಯಾನ’ ಕಥಾಸಂಕಲನ, ‘ಆಕ್ರಮಣ’ ಅನುವಾದಿತ ಕಥೆಗಳು, ‘ಸೂರ್ಯಕಾಂತಿ’ ಅನುವಾದಿತ ಡೋಗ್ರಿ ಕವನಗಳು. ‘ಮಿರ್ಚ್ ಮಸಾಲ’ ಅವರ ಲೇಖನ ಸಂಗ್ರಹ. ‘ನಿಮ್ಮೀ ಕಾಲಂ’ ಅಂಕಣ ಬರಹ. ಬಿ.ಜಯಶ್ರೀ ಅವರ ಜೊತೆ ಸೇರಿ ‘ಕರಿಮಾಯಿ’ ನಾಟಕವನ್ನು ರಚಿಸಿದ್ದಾರೆ.”ನನ್ನ ಕವಿತೆಗಳೇ ನನ್ನ ಆತ್ಮಕಥನ” ಎಂದು ನಂಬಿರುವ ಪ್ರತಿಭಾ ಅವರ ಆತ್ಮಕಥನ ‘ಅನುದಿನದ ಅಂತರಗಂಗೆ’.ಪ್ರತಿಭಾ ನಂದಕುಮಾರ್ ಅವರಿಗೆ ಮಹಾದೇವಿ ವರ್ಮಾ ಕಾವ್ಯ ಸಮ್ಮಾನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮುದ್ದಣ್ಣ ಕಾವ್ಯ ಪ್ರಶಸ್ತಿ, ಡಾ.ಶಿವರಾಮ ಕಾರಂತ ಪ್ರಶಸ್ತಿ, ಪು.ತಿ.ನ ಕಾವ್ಯ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರಶಸ್ತಿ, ಬಿ. ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ, ಹೂಗಾರ ಸ್ಮಾರಕ ಪ್ರಶಸ್ತಿ, ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪಂಕಜಶ್ರೀ ಪ್ರಶಸ್ತಿ, ಖಟ್ಮಂಡುವಿನಲ್ಲಿ ನಡೆದ ಸಾರ್ಕ್ ಸಾಹಿತ್ಯ ಸಮ್ಮೇಳನದ ಗೌರವ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಉಪ್ಪಿನ ಬೆಟಗೇರಿಯಿಂದ ಕಾಂಗ್ರೆಸ್ ಪಾದಯಾತ್ರೆ ಆರಂಭ!

Mon Dec 26 , 2022
ರೈತರ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಧಾರವಾಡ ಗ್ರಾಮೀಣ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ಆರಂಭಿಸಿದ್ದಾರೆ….ಉಪ್ಪಿನ ಬೆಟಗೇರಿ ಗ್ರಾಮದ ವಿರುಪಾಕ್ಷೇಶ್ವರ ದೇವಸ್ಥಾನದಿಂದ ಈ ಪಾದಯಾತ್ರೆ ಆರಂಭವಾಗಿದ್ದು, ಪುಡಕಲಕಟ್ಟಿ, ಕರಡಿಗುಡ್ಡ, ತಿಮ್ಮಾಪುರ, ಮರೇವಾಡ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಸ್ವತಃ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ…ಬಿದ್ದ […]

Advertisement

Wordpress Social Share Plugin powered by Ultimatelysocial