ಉಪ್ಪಿನ ಬೆಟಗೇರಿಯಿಂದ ಕಾಂಗ್ರೆಸ್ ಪಾದಯಾತ್ರೆ ಆರಂಭ!

ರೈತರ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಧಾರವಾಡ ಗ್ರಾಮೀಣ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ಆರಂಭಿಸಿದ್ದಾರೆ….ಉಪ್ಪಿನ ಬೆಟಗೇರಿ ಗ್ರಾಮದ ವಿರುಪಾಕ್ಷೇಶ್ವರ ದೇವಸ್ಥಾನದಿಂದ ಈ ಪಾದಯಾತ್ರೆ ಆರಂಭವಾಗಿದ್ದು, ಪುಡಕಲಕಟ್ಟಿ, ಕರಡಿಗುಡ್ಡ, ತಿಮ್ಮಾಪುರ, ಮರೇವಾಡ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಸ್ವತಃ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ…ಬಿದ್ದ ಮನೆಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡುವುದು, ರೈತರ ಹೊಲಗಳಿಗೆ ರಸ್ತೆ ನಿರ್ಮಾಣ, ಬೆಳೆ ವಿಮೆ, ಬೆಳೆ ಪರಿಹಾರ ನೀಡುವುದು ಸೇರಿದಂತೆ ರೈತರ ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಈ ಪಾದಯಾತ್ರೆ ನಡೆಸಲಾಗುತ್ತಿದೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಅನಸೂಯಾ ರಾಮರೆಡ್ಡಿ ಸುಪ್ರಸಿದ್ಧ ಕಾದಂಬರಿಗಾರ್ತಿ.

Mon Dec 26 , 2022
ಅನಸೂಯಾ ರಾಮರೆಡ್ಡಿ ಚಿತ್ರದುರ್ಗದ ಬಳಿಯ ತುರುವನೂರು ಎಂಬಲ್ಲಿ 1929ರ ಡಿಸೆಂಬರ್‌ 25ರಂದು ಜನಿಸಿದರು. ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಂ. ರಾಮರೆಡ್ಡಿ. ತಾಯಿ ಮಂಗಳಮ್ಮ. ಇವರ ಮನೆತನವೇ ಒಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಯಾವಾಗಲೂ ಮನೆಯಲ್ಲಿ ಕಾಂಗ್ರೆಸ್ ನೇತಾರರು ತುಂಬಿರುತ್ತಿದ್ದರು. ಇದು ಬೆಳೆಯುತ್ತಿದ್ದ ಅನಸೂಯ ಅವರ ಮೇಲೂ ಪ್ರಭಾವ ಬೀರಿತು. ಬದುಕಿನುದ್ದಕ್ಕೂ ಗಾಂಧೀಜಿಯವರ ಆದರ್ಶಗಳನ್ನು ರೂಢಿಸಿಕೊಂಡರು. ತುರುವನೂರು ಊರು ಚಿಕ್ಕದಾಗಿದ್ದರೂ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸರಳ ವಿವಾಹ, ಚರಕದಲ್ಲಿ ನೂಲುವುದು, […]

Advertisement

Wordpress Social Share Plugin powered by Ultimatelysocial