ಇತಿಹಾಸದಲ್ಲೇ ಅತೀ ಹೆಚ್ಚು ಲಾಭ ಗಳಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಕೊಲಂಬೊ: ಪ್ರಸ್ತುತ ಇಡೀ ಶ್ರೀಲಂಕಾ ದೇಶವೇ ಅತ್ಯಂತ ಬಡತನದಲ್ಲಿದೆ. ಇಂತಹ ಹೊತ್ತಿನಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಾತ್ರ ಒಂದು ಸಂತಸದ ಸುದ್ದಿ ಹೇಳಿದೆ. ಆ ಕ್ರಿಕೆಟ್‌ ಮಂಡಳಿ 2022ರಲ್ಲಿ 630 ಕೋಟಿ ರೂ. ಆದಾಯ ಗಳಿಸಿದೆ. ಇದು ಅದರ ಚರಿತ್ರೆಯಲ್ಲೇ ಗರಿಷ್ಠ ನಿವ್ವಳ ಆದಾಯ!

ವಸ್ತುಸ್ಥಿತಿಯಲ್ಲಿ ಕಳೆದವರ್ಷ ಏಷ್ಯಾಕಪ್‌ ನಂತರ ಶ್ರೀಲಂಕಾ ತಂಡ ಕ್ರಿಕೆಟ್‌ನಲ್ಲಿ ಸುಧಾರಿಸಿಕೊಳ್ಳುತ್ತಿದೆ. ಅದು ಪಾಕನ್ನು ಸೋಲಿಸಿ ಏಷ್ಯಾಕಪ್‌ ಟಿ20ಯನ್ನು ಗೆದ್ದುಕೊಂಡಿದೆ. ಅದಾದ ನಂತರ ಸ್ವಲ್ಪಸ್ವಲ್ಪವೇ ಪರಿಸ್ಥಿತಿ ಸುಧಾರಿಸುತ್ತಿದೆ. ಅದಕ್ಕಿಂತ ಮುನ್ನ ತಂಡದ ಪ್ರದರ್ಶನ ಪಾತಾಳಕ್ಕಿಳಿದಿತ್ತು.

ಬರೀ ಅಷ್ಟೇ ಅಲ್ಲ ಮಂಡಳಿ ವಿರುದ್ಧವೇ ಆಟಗಾರರು ದಂಗೆದ್ದಿದ್ದರು. ವೇತನ ಸಾಲುತ್ತಿಲ್ಲ ಎಂದು ಹಲವು ಪ್ರಮುಖ ಆಟಗಾರರು ಕ್ರಿಕೆಟನ್ನು ತ್ಯಜಿಸಿದ್ದರು. ಶ್ರೀಲಂಕಾ ಕ್ರಿಕೆಟ್‌ ಸುಧಾರಿ ಸಲು ಸಾಧ್ಯವೇ ಇಲ್ಲ ಎನ್ನುವ ಹಂತದಲ್ಲಿ ತಂಡದ ಪ್ರದರ್ಶನವೂ ವೃದ್ಧಿಯಾಗಿದೆ. ಲಾಭವೂ ಹೆಚ್ಚಿದೆ. ಈ ಆದಾಯ ನಾಲ್ಕು ಮೂಲಗಳಿಂದ ಹರಿದುಬಂದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಂದ, ದೇಶೀಯ ಕ್ರಿಕೆಟ್‌ನಿಂದ, ಪ್ರಾಯೋಜಕತ್ವ ಒಪ್ಪಂದಗಳಿಂದ, ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ನೀಡುವ ಮೊತ್ತದಿಂದ ಲಂಕಾ ಮಂಡಳಿ ಮೇಲಿನ ಮೊತ್ತವನ್ನು ಗಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಸಿದವನ ಟಾಟಾ ಹೇಳಿ ಪಾಕಿಸ್ತಾನ ಸೇರಿದ ಯುವತಿ.

Sun Feb 26 , 2023
  ಬೆಂಗಳೂರಿನಲ್ಲಿ ಪಾಕಿಸ್ತಾನದ ಯುವತಿ ಪತ್ತೆ ಪ್ರಕರಣ ಪ್ರೀತಿಸಿದವನ ಟಾಟಾ ಹೇಳಿ ಪಾಕಿಸ್ತಾನ ಸೇರಿದ ಯುವತಿ ಯುವತಿಯನ್ನ ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳಿಗೆ ಒಪ್ಪಿಸಿದ ಭಾರತದ ಅಧಿಕಾರಿಗಳು ಪ್ರೀತಿಸಿದವನಿಗಾಗಿ ದೇಶ ಬಿಟ್ಟ ಬಂದ ಹುಡುಗಿ ಟಾಟಾ ಬಾಯ್. ಅಂತರಾಷ್ಟ್ರೀಯ ಲವ್ ಸ್ಟೋರಿಯಲ್ಲಿ ಈಗ ಮತ್ತೊಂದು ಟ್ವಿಸ್ಟ್ ಮುಲಾಯಂ ಸಿಂಗ್ ಯಾದವ್ ಎಂಬಾತ ಪಾಕಿಸ್ತಾನದ ಯುವತಿಯನ್ನ ಭಾರತಕ್ಕೆ ಕರೆದುಕೊಂಡು ಬಂದಿದ್ದ ಇಕ್ರಾ ಜಿವಾನಿ ಎಂಬ ಯುವತಿಯನ್ನ ನೇಪಾಳಿ ಗಡಿ ಮೂಲಕ ಅಕ್ರಮವಾಗಿ ಭಾರತಕ್ಕೆ […]

Advertisement

Wordpress Social Share Plugin powered by Ultimatelysocial