ಇನ್ಸ್ ಪೆಕ್ಟರ್ ನೂತನ ಪ್ರಯೋಗ

ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುಮಾರು 1,500 ಆಟೋಗಳು ಚಾಲನೆಯಲ್ಲಿ ಇದ್ದು ಹೆಚ್ಚು ಅಪರಾಧ ಪ್ರಕರಣಗಳು, ಕಳವು, ಪ್ರಯಾಣಿಕರು ಲಗೇಜ್ ಕಳೆದುಕೊಳ್ಳೋದು ಸಾಮಾನ್ಯವಾಗಿ ಆಟೋಗಳಲ್ಲೇ ಆಗಿದ್ದು. ಆಟೋರಿಕ್ಷಾದ ನೊಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಲು ಬಹುತೇಕ ಮಂದಿಗೆ ಸಾಧ್ಯವಾಗುವುದಿಲ್ಲ. ಆದ್ರೆ ಇನ್ನುಂದೆ ಹಾಗೆ ಆಗಲ್ಲ. ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್​ಪೆಕ್ಟರ್ ಸೋಮಶೇಖರ್ ಅವರು ನೂತನ ಪ್ರಯೋಗ ಮಾಡಿದ್ದು, ಪಟ್ಟಣದ ಎಲ್ಲಾ ಆಟೋಗಳಿಗೆ ಯೂನಿಕ್ ನಂಬರ್ ನೀಡಿದ್ದಾರೆ. ಆಟೋಗಳಲ್ಲಿ ಚಾಲಕರು ಮತ್ತು ಆಟೋ ಮಾಲೀಕರ ವಿವರ ಪ್ರಯಾಣಿಕರಿಗೆ ಕಾಣಿಸುವ ಹಾಗೆ ಅಂಟಿಸುವ ಪ್ರಯತ್ನಕ್ಕಿಂತ ಇದು ಸುಲಭ ಮತ್ತು ಜನರಿಗೆ ಅನುಕೂಲವಾಗುವ ಹೊಸ ಪ್ರಯತ್ನ ಇದಾಗಿದೆ. ಇನ್ಸ್​ಪೆಕ್ಟರ್ ಸೋಮಶೇಖರ್ ಅವರ ಈ ಐಡಿಯಾಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ನಾಳೆ ಫೈನಲ್ ಆಗಲಿದೆ ಪರಿಷತ್ ಚುನಾವಣೆ ಪಟ್ಟಿ

Sun Jun 14 , 2020
ರಾಜ್ಯಸಭೆ ಚುನಾವಣೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿ ಕಚೇರಿ ಬಾಗಿಲು ತಟ್ಟುವವರ ಸಂಖ್ಯೆ ಹೆಚ್ಚಾಗಿದೆ. ಜೂ.29ರಂದು ನಡೆಯುವ ಪರಿಷತ್ ಚುನಾವಣೆಗೆ ಆಕಾಂಕ್ಷಿಗಳು ಮುಗಿಬೀಳುತ್ತಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ 7 ಸ್ಥಾನಗಳ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ ಪಾಲಿನ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಅಂತಿಮಗೊಳಿಸಲಿದೆ. ನಾಳೆ ಪಕ್ಷದ ಪ್ರಮುಖರ ಕೋರ್ ಕಮಿಟಿ ಸಭೆ ನಡೆಯುವ ಸಾಧ್ಯತೆ ಇದ್ದು, ಬಹುತೇಕ ಅಭ್ಯರ್ಥಿಗಳ ಪಟ್ಟಿ, ಅಂತಿಮಗೊಳಿಸುವ ಸಂಭವವಿದೆ ಎಂದು […]

Advertisement

Wordpress Social Share Plugin powered by Ultimatelysocial