ಎಂ. ವೆಂಕಟೇಶ ಆಚಾರ್ ಕರ್ನಾಟಕ ಸಂಗೀತಗಾರ

ಕರ್ನಾಟಕ ಸಂಗೀತದಲ್ಲಿ ಬಳ್ಳಾರಿ ಸಹೋದರರೆಂದು ಖ್ಯಾತರಾದವರು ವಿದ್ವಾನ್ ಎಂ. ಎಂ. ವೆಂಕಟೇಶ ಆಚಾರ್ ಮತ್ತು ಅವರ ತಮ್ಮ ವಿದ್ವಾನ್ ಎಂ. ಶೇಷಗಿರಿ ಆಚಾರ್.ಎಂ. ವೆಂಕಟೇಶ ಆಚಾರ್ 1933ರ ಡಿಸೆಂಬರ್ 30ರಂದು ಜನಿಸಿದರು. ತಂದೆ ಸಂಗೀತ ವಿದ್ವಾಂಸರಾದ ರಾಘವೇಂದ್ರಾಚಾರ್. ತಾಯಿ ಕಮಲಮ್ಮ. ತಂದೆಯಿಂದಲೇ ಇವರಿಗೆ ಸಂಗೀತ ಶಿಕ್ಷಣ ದೊರೆಯಿತು. ಹಾರ್ಮೋನಿಯಂ, ಖಂಜಿರ, ಮೃದಂಗ ವಾದನದಲ್ಲೂ ಪರಿಣತಿ ಗಳಿಸಿದರು.
ಎಂ. ವೆಂಕಟೇಶ ಆಚಾರ್ ಮತ್ತು ಎಂ. ಶೇಷಗಿರಿ ಆಚಾರ್ ಬಳ್ಳಾರಿ ಸಹೋದರರೆಂದು ಹೆಸರಾಗಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಮುಂಬಯಿ ಮುಂತಾದ ನಗರಗಳಲ್ಲೂ ಸೇರಿದಂತೆ ಅನೇಕ ಸ್ಥಳಗಳ ಪ್ರಸಿದ್ಧ ವೇದಿಕೆಗಳಲ್ಲಿ, ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ, ಸಂಗೀತೋತ್ಸವಗಳಲ್ಲಿ, ದೂರದರ್ಶನದ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸೇರಿದಂತೆ ಸಹಸ್ರಾರು ಕಚೇರಿ ಮಾಡಿದ್ದರು. ಅನೇಕ ಶಿಷ್ಯರನ್ನು ತಯಾರು ಮಾಡಿದರು. ವಯೊಲಿನ್ ಮತ್ತು ಮೃದಂಗ ವಾದನದಲ್ಲಿ ಲಾಲ್‌ಗುಡಿ ಜಯರಾಮನ್, ಎಂ.ಎಸ್. ಗೋಪಾಲಕೃಷ್ಣನ್, ಪಾಲ್ಘಾಟ್ ಮಣಿ ಅಯ್ಯರ್ ಮುಂತಾದವರಿಗೆ ಪಕ್ಕವಾದ್ಯ ಸಹಕಾರ ನೀಡಿದ್ದರು. ಅಮೆರಿಕದ ವಾಷಿಂಗ್‌ಟನ್‌ನ ಶಿವ-ವಿಷ್ಣು ದೇವಸ್ಥಾನ, ಬಾಸ್ಟನ್‌, ನ್ಯೂಜೆರ್ಸಿ, ಬರ್ಲಿನ್ ಹಿಂದೂ ದೇವಾಲಯ ಮುಂತಾದೆಡೆಯೂ ಸಂಗೀತ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಎಂ. ವೆಂಕಟೇಶ ಆಚಾರ್ ಅವರಿಗೆ ಮೈಸೂರಿನ ಜೆ.ಎಸ್.ಎಸ್. ಸಂಗೀತ ಸಭಾದಿಂದ ಸಂಗೀತ ವಿದ್ಯಾನಿಧಿ, ಗಣಪತಿ ಸಚ್ಛಿದಾನಂದ ಆಶ್ರಮದ ಅವಧೂತ ಪೀಠದಿಂದ ಆಸ್ಥಾನ ವಿದ್ವಾನ್, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ ಮುಂತಾದ ಅನೇಕ ಗೌರವ ಸನ್ಮಾನಗಳು ಸಂದಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರುಡ್ಯಾರ್ಡ್ ಕಿಪ್ಲಿಂಗ್ ಪ್ರಖ್ಯಾತ ಕತೆಗಾರ

Sun Jan 1 , 2023
ಪ್ರಖ್ಯಾತ ಕತೆಗಾರ, ‘ಜಂಗಲ್ ಬುಕ್’ ಅಂತಹ ಕೃತಿಗಳ ಸೃಷ್ಟಿಕರ್ತ ಮತ್ತು ನೊಬೆಲ್ ಪಾರಿತೋಷಕ ಸಂಮಾನಿತ ರುಡ್ಯಾರ್ಡ್ ಕಿಪ್ಲಿಂಗ್ ಅವರು ನಮ್ಮ ‘ಭಾರತದ ಬ್ಯಾಕ್ಯಾರ್ಡಿ’ನವರು. ಅವರು ಜನಿಸಿದ್ದು ಭಾರತದಲ್ಲಿ. ಬೊಂಬಾಯಿನ ವಿ.ಟಿ. ರೈಲು ನಿಲ್ದಾಣದ ಸಮೀಪದ ‘ಜೆ.ಜೆ.ಸ್ಕೂಲ್ ಆಫ್ ಆರ್ಟ್ ಮಹಾವಿದ್ಯಾಲಯ’ದ ಶಿಕ್ಷಕರ ವಸತಿಗೃಹದಲ್ಲಿ ಅವರು 1865ರ ಡಿಸೆಂಬರ್ 30ರಂದು ಜನಿಸಿದರು. ರುಡ್ಯಾರ್ಡ್ ಕಿಪ್ಲಿಂಗರ ತಂದೆ ಲಾಕ್ ವುಡ್ ಕಿಪ್ಲಿಂಗ್ ಅವರು ಜೆ. ಜೆ. ಸ್ಕೂಲ್ ಆಫ್ ಆರ್ಟ್ ಶಿಕ್ಷಣ ಮಹಾಕಲಾಸಂಸ್ಥೆಯಲ್ಲಿ […]

Advertisement

Wordpress Social Share Plugin powered by Ultimatelysocial