ಎಲ್‌ಐಸಿ ‘ಜೀವನ್ ಆನಂದ್ ಯೋಜನೆ’: ಅರ್ಹತೆ, ಪ್ರಯೋಜನ, ಇತರ ವಿವರ ಇಲ್ಲಿದೆ

 

ಭಾರತದಲ್ಲಿ ಅತೀ ದೊಡ್ಡ ವಿಮಾ ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನಿಮ್ಮ ಹೂಡಿಕೆಗೆ ಆದಾಯವನ್ನು ನೀಡುವುದರ ಜತೆಗೆ ಜೀವ ರಕ್ಷಣೆಯನ್ನು ನೀಡುತ್ತದೆ. ನಾವು ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ಎಲ್‌ಐಸಿ ಅತೀ ಉತ್ತಮ ಆಯ್ಕೆ ಎಂದು ಹಲವಾರು ತಜ್ಞರುಗಳ ಅಭಿಪ್ರಾಯವಾಗಿದೆ.

ಎಲ್‌ಐಸಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಇತ್ತೀಚೆಗೆ ಎಲ್‌ಐಸಿ”ಜೀವನ್ ಆನಂದ್ ಯೋಜನೆ” ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದು ಆ ಯೋಜನೆಯ ವಿವರವನ್ನು ನಾವಿಲ್ಲಿ ನೀಡಿದ್ದೇವೆ.

ಈ ಯೋಜನೆಯೂ ಸಾವಿನ ವಿರುದ್ದದ ರಕ್ಷಣೆಯ ಪ್ರಯೋಜನಗಳನ್ನು ಒದಗಿಸುವುದರ ಜತೆಗೆ ರೈಡರ್ ಬೆನಿಫಿಟ್‌ ಅನ್ನು ಒದಗಿಸುತ್ತದೆ. ಆದರೂ ಪಾಲಿಸಿದಾರರೂ, ಅಪಘಾತದಿಂದ ಮೃತ್ಯು ಮತ್ತು ಅಂಗವೈಕಲ್ಯದ ಬೆನಿಫಿಟ್ ರೈಡರ್ ಅಥವಾ ಆಕ್ಸಿಡೆಂಟ್ ಬೆನಿಫಿಟ್ ರೈಡರ್ ಇವುಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡುವ ಅವಕಾಶ ಹೊಂದಿದ್ದಾರೆ.

ಪಾಲಿಸಿಗೆ ಅಗತ್ಯವಿರುವ ಅರ್ಹತೆ ಮತ್ತು ಷರತ್ತು

1. 1,00,000 ರೂ. ಕನಿಷ್ಟ ಮೂಲ ವಿಮಾ ಮೊತ್ತ ಆಗಿರುತ್ತದೆ.

2. ಗರಿಷ್ಟ ಮೂಲ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ

(ಮೂಲ ವಿಮಾ ಮೊತ್ತಕ್ಕೆ 5000 ಗುಣಿಸಿದಷ್ಟು)

3. ಕನಿಷ್ಟ ವಯೋಮಿತಿ 18 ವರ್ಷಗಳು (ಪೂರ್ಣಗೊಂಡಿರಬೇಕು)

4. ಗರಿಷ್ಟ ವಯಸ್ಸಿನ ಮಿತಿ 50 ವರ್ಷಗಳು (ಜನ್ಮದಿನಕ್ಕೆ ಹತ್ತಿರವಾಗಿರುವಂತೆ)

5. ಗರಿಷ್ಟ ಮೆಚ್ಯೂರಿಟಿ ವಯಸ್ಸು 75 ವರ್ಷ (ಜನ್ಮದಿನಕ್ಕೆ ಹತ್ತಿರವಾಗಿರುವಂತೆ)

6. ಕನಿಷ್ಟ ಪಾಲಿಸಿಯ ಅವಧಿ 15 ವರ್ಷಗಳು

7. ಗರಿಷ್ಟ ಪಾಲಿಸಿಯ ಅವಧಿ 35 ವರ್ಷಗಳು

ಒಂದು ವೇಳೆ ಪಾಲಿಸಿಯ ಮೆಚ್ಯೂರಿಟಿ ಅವಧಿಗೂ ಮುನ್ನ ಪಾಲಿಸಿದಾರರು ಮೃತಪಟ್ಟರೆ ಅವರ ನಾಮಿನಿಯೂ ಶೇಕಡ 12ರವರೆಗೆ ಡೆತ್ ಬೆನಿಫಿಟ್‌ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಪಾಲಿಸಿಯಲ್ಲಿ ಖಚಿತವಾದ ಕನಿಷ್ಟ ವಿಮಾ ಮೊತ್ತ 1 ಲಕ್ಷ ರೂಪಾಯಿ ಆಗಿದ್ದು ಗರಿಷ್ಟ ಮೊತ್ತಕ್ಕೆ ಮಿತಿಯಿಲ್ಲ.

ಇದಲ್ಲದೆ ಅಪಘಾತದಿಂದ ಸಾವು, ಮತ್ತು ಅಂಗವೈಕ್ಯಲ ಮತ್ತು ಅಕ್ಸಿಡೆಂಟ್ ಬೆನಿಫಿಟ್, ನ್ಯೂ ಟರ್ಮ್ ರೈಡರ್ ಮತ್ತು ನ್ಯೂ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್‌ಗಳು ರೈಡರ್ ಪ್ರಯೋಜನ ವ್ಯಾಪ್ತಿಯಲ್ಲಿ ಒಳಗೊಂಡಿರುತ್ತದೆ. “ಜೀವನ್ ಆನಂದ್ ಯೋಜನೆ” ವಿಮೆಯಲ್ಲಿ ಬಹಳಷ್ಟು ಅನುಕೂಲಗಳಿದ್ದರೂ, ಇದು ತೆರಿಗೆ ಪ್ರಯೋಜನ ಒದಗಿಸುವುದಿಲ್ಲ ಎನ್ನುವುದು ನೆನಪಿಡಬೇಕಾದ ಅಂಶವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ರೋಹಿಣಿ ಸಿಂಧೂರಿ ದಿಸೆಯಿಂದ ನನ್ನ ಪತಿ ಮನೆ ಕಡೆ ಗಮನ ಕೊಡೋದಿಲ್ಲ, ಅವ್ರನ್ನ ಬೇರೆಡೆ ವರ್ಗಾಯಿಸಿ ಎಂದು ನಾನೇ ಕೇಳ್ಕೊಂಡಿದ್ದೀನಿ, ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ, ಬುಟ್ಟಿಗೆ ಹಾಕೊಳ್ತಾಳೆ': ಡಿ ರೂಪಾ

Wed Feb 22 , 2023
ಐಪಿಎಸ್ ಅಧಿಕಾರಿ ರೂಪಾ (D Roopa Moudgil) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ನಡುವೆ ನಡೆಯುತ್ತಿದ್ದ ವೈಯಕ್ತಿಕ ಜಗಳಕ್ಕೆ ಸರ್ಕಾರ ಅವರನ್ನು ಸ್ಥಳವನ್ನು ಸೂಚಿಸದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬಾರದು, ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಬಾರದೆಂದು ತಾಕೀತು ಮಾಡುವ ಮೂಲಕ ವಿರಾಮ ಹಾಡಿತು ಎಂದು ಭಾವಿಸುತ್ತಿರುವಾಗಲೇ ಡಿ ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ (D Roopa Moudgil) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ […]

Advertisement

Wordpress Social Share Plugin powered by Ultimatelysocial