ಈಶಾನ್ಯ ರಾಜ್ಯಗಳು ಅಷ್ಟಲಕ್ಷ್ಮೀಯರು:

ದಿಮಾಪುರ್‌: ಕಾಂಗ್ರೆಸ್‌ ಈಶಾನ್ಯ ರಾಜ್ಯಗಳನ್ನು ಎಟಿಎಂ ಆಗಿ ಬಳಸಿ ಕೊಂಡಿತ್ತು. ಆದರೆ ಬಿಜೆಪಿಯು ಈ ಪ್ರದೇಶದ ಎಂಟು ರಾಜ್ಯಗಳನ್ನು ಅಷ್ಟ ಲಕ್ಷ್ಮೀಯರು ಎಂದು ಪರಿಗಣಿಸಿದೆ. ಇಲ್ಲಿನ ಶಾಂತಿ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ನಾಗಾಲ್ಯಾಂಡ್‌ನ‌ ದಿಮಾಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಶುಕ್ರ ವಾರ ಮಾತನಾಡಿದ ಅವರು, “ನಾಗಾ ಲ್ಯಾಂಡ್‌ನ‌ಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಎನ್‌ಡಿಎ ಸರ್ಕಾರ ಶ್ರಮಿಸುತ್ತಿದೆ. ಹೀಗಾಗಿ 1958ರ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ರದ್ದು ಗೊಳಿ ಸಲಾಗಿದೆ,’ ಎಂದರು.“ಕಾಂಗ್ರೆಸ್‌ ಆಳ್ವಿಕೆಯಲ್ಲಿ ನಾಗಾ ಲ್ಯಾಂಡ್‌ನ‌ಲ್ಲಿ ರಾಜಕೀಯ ಅಸ್ಥಿರತೆ ಇತ್ತು. ಕಾಂಗ್ರೆಸ್‌ ದೆಹಲಿಯಿಂದಲೇ ರಿಮೋಟ್‌ ಕಂಟ್ರೋಲ್‌ನಿಂದ ಈಶಾನ್ಯ ರಾಜ್ಯಗಳನ್ನು ಆಳುತ್ತಿತ್ತು. “ಮತ ಪಡೆದು ಮರೆತುಬಿಡಿ’ ಎಂಬುದು ಕಾಂಗ್ರೆಸ್‌ ಮತ್ತು ಅದರ ಪಾಲುದಾರರ ನೀತಿಯಾ ಗಿದೆ,’ ಎಂದು ದೂರಿದರು. ಇನ್ನೊಂದೆಡೆ, ಮೇಘಾಲ ಯದ ಶಿಲ್ಲಾಂಗ್‌ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, “”ಮೋದಿ ತೇರಿ ಕಬ್ರ ಖುದೇಗಿ’ (ಮೋದಿ, ನಿಮಗೆ ಸಮಾಧಿ ತೋಡಲಾ ಗುತ್ತದೆ) ಎಂದು ಮೇಘಾಲಯ ಕಾಂಗ್ರೆಸ್‌ ನಾಯಕರು ಘೋಷಿಸಿದ್ದಾರೆ. ಆದರೆ ದೇಶದ ಜನರು “ಮೋದಿ ತೇರಾ ಕಮಲ್‌ ಖೀಲೇಗಾ'(ಮೋದಿ, ನಿಮ್ಮ ಕಮಲವು ಅರಳಲಿದೆ) ಎಂದು ಹೇಳುತ್ತಿದ್ದಾರೆ,’ ಎಂದರು.ಫೆ.27ರಂದು ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾ.2ರಂದು ಫ‌ಲಿ ತಾಂಶ ಹೊರಬೀಳಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್‌ ಯುದ್ಧ :

Sat Feb 25 , 2023
ನವದೆಹಲಿ: ವರ್ಷ ಪೂರೈಸಿದ ಉಕ್ರೇನ್‌ ಯುದ್ಧ ಕೊನೆಗೊಳಿಸುವ ಸಲುವಾಗಿ ಸೇನೆ ಹಿಂಪಡೆಯಲು ರಷ್ಯಾದ ಮೇಲೆ ಒತ್ತಡ ಹೇರುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಹೊರಗುಳಿಯಿತು. ಉಭಯ ರಾಷ್ಟ್ರಗಳ ಸಂಘರ್ಷದಲ್ಲಿ ಭಾರತ ಮತ್ತೊಮ್ಮೆ ತಟಸ್ಥ ನಿಲುವು ತೆಗೆದುಕೊಂಡಿತು.ಜಾಗತಿಕ ಶಾಂತಿ ಕಾಪಾಡುವಲ್ಲಿ ವಿಶ್ವಸಂಸ್ಥೆಯ ಸಾಮರ್ಥ್ಯವನ್ನೂ ಭಾರತ ಪ್ರಶ್ನಿಸಿತು.ಆದಾಗ್ಯೂ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ‘ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ’ ಆದಷ್ಟು ಶೀಘ್ರ ಸ್ಥಾಪಿಸಬೇಕೆಂದು ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಣಯ ಮಂಡಿಸಿದವು. […]

Advertisement

Wordpress Social Share Plugin powered by Ultimatelysocial