ತೂಕ ಇಳಿಸಲು ಅನುಸರಿಸಿ ಈ ಆಹಾರ ಕ್ರಮ…

ತೂಕ ಇಳಿಸಿಕೊಳ್ಳಲು ನೀವೇನಾದ್ರೂ ಸರ್ಕಸ್‌ ಮಾಡ್ತಾ ಇದ್ರೆ ಆಹಾರದ ಬಗ್ಗೆ ವಿಶೇಷ ಗಮನ ಕೊಡಬೇಕು. ಕೇವಲ ವ್ಯಾಯಾಮದಿಂದ ಮಾತ್ರ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನೀವು ಆಹಾರ ಕ್ರಮವನ್ನು ಬದಲಾಯಿಸಿಕೊಂಡಾಗ ಮಾತ್ರ ಬೇಗನೆ ಫಲಿತಾಂಶ ಸಿಗುತ್ತದೆ.

ಹೆಚ್ಚಿನ ಜನರು ಹಿಂದೆ ಮುಂದೆ ಯೋಚಿಸದೆ ಎಲ್ಲವನ್ನೂ ತಿನ್ನುತ್ತಾರೆ.

ಇದರಿಂದ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ತೂಕ ಇಳಿಸಿಕೊಳ್ಳಲು ಆಹಾರದಲ್ಲಿ ಯಾವೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕು ಅನ್ನೋದನ್ನು ನೋಡೋಣ.

ಸಕ್ಕರೆಯಿಂದ ದೂರವಿರಿ : ಸಿಹಿತಿಂಡಿಗಳನ್ನು ಹೆಚ್ಚು ಸೇವಿಸುವುದರಿಂದ ತೂಕ ಏರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಆದಷ್ಟು ಸಿಹಿ ತಿನಿಸುಗಳನ್ನು ಅವಾಯ್ಡ್‌ ಮಾಡುವುದು ಉತ್ತಮ.ಸಕ್ಕರೆಯಿಂದ ಮಾಡಿದ ತಿಂಡಿಗಳನ್ನು ಹೆಚ್ಚಾಗಿ ಸೇವಿಸಿದ್ರೆ ಇದು ತೂಕ ಹೆಚ್ಚಾಗುವ ಜೊತೆಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶ ಕೂಡ ಜಾಸ್ತಿಯಾಗುವ ಅಪಾಯವಿರುತ್ತದೆ.

ಹಸಿರು ತರಕಾರಿಗಳನ್ನು ಹೆಚ್ಹೆಚ್ಚು ಸೇವಿಸಿ : ಪ್ರತಿನಿತ್ಯ ಊಟ, ಉಪಹಾರಕ್ಕೆ ಹೆಚ್ಚು ತರಕಾರಿಗಳನ್ನು ಸೇವಿಸಬೇಕು. ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ತೂಕ ಕೂಡ ಹೆಚ್ಚಾಗುವುದಿಲ್ಲ. ಪಾಲಕ್ ಸೊಪ್ಪು, ಕ್ಯಾರೆಟ್ ಮತ್ತು ಸೋರೆಕಾಯಿಯಂತಹ ತರಕಾರಿಗಳನ್ನು ಸೇವಿಸಬೇಕು.

ಆರೋಗ್ಯಕರ ಉಪಹಾರ ಸೇವಿಸಿ : ಬೆಳಗಿನ ಉಪಹಾರ ಹೆಲ್ದಿಯಾಗಿರಬೇಕು. ಓಟ್ಸ್ ಅಥವಾ ಮೊಟ್ಟೆಗಳನ್ನು ಬೆಳಗ್ಗೆ ತಿಂಡಿಗೆ ಸೇವನೆ ಮಾಡಬಹುದು. ಬೆಳಗ್ಗೆ ಹಣ್ಣು ಅಥವಾ ಜ್ಯೂಸ್‌ ಸೇವನೆ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಇದು ನಿಮ್ಮನ್ನು ಫಿಟ್‌ ಆಗಿಡಲು ಸಹಾಯ ಮಾಡುತ್ತದೆ.

ಫೈಬರ್ ಭರಿತ ಆಹಾರಗಳನ್ನು ಸೇವಿಸಿ: ಫೈಬರ್ ಹೊಂದಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿದ್ರೆ ತೂಕ ಕಡಿಮೆ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಫೈಬರ್‌ಯುಕ್ತ ಆಹಾರ ತಿಂದರೆ ನಿಮ್ಮ ದೇಹಕ್ಕೆ ಬೇಕಾದ ಜೀವಸತ್ವಗಳು ಸಿಗುತ್ತವೆ. ಬಾದಾಮಿ, ಬ್ರೊಕೊಲಿ ಕೂಡ ಉತ್ತಮ ಫೈಬರ್‌ ಭರಿತ ಆಹಾರ. ಇವೆರಡನ್ನೂ ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆ ಮಂಟಪದಲ್ಲಿ ವರನ ತಲೆಯಿಂದ ಜಾರಿದ ವಿಗ್; ಮದುವೆಯೇ ರದ್ದು.!

Mon May 23 , 2022
ಭಾರತೀಯ ವಿವಾಹಗಳು ಚಲನಚಿತ್ರಕ್ಕಿಂತ ಭಿನ್ನವೇನಿಲ್ಲ. ಏಕೆಂದರೆ ಇದು ನಾಟಕ, ಸಸ್ಪೆನ್ಸ್ ಮತ್ತು ದುರಂತದ ಎಲ್ಲಾ ಅಂಶಗಳನ್ನು ಸಹ ಒಳಗೊಂಡಿದೆ. ಇದೀಗ ಮದುವೆಯ ಸೀಸನ್ ಆಗಿರುವುದರಿಂದ, ವಧು-ವರರ ಬಗ್ಗೆ ಹಲವಾರು ವಿಚಿತ್ರವಾದ ಮತ್ತು ವಿಶಿಷ್ಟವಾದ ಕಥೆಗಳನ್ನು ನೀವು ಕೇಳಿರಬಹುದು. ಇದೀಗ ಹಸೆಮಣೆಯಲ್ಲಿ ಕುಳಿತಿದ್ದ ವಧು, ವಿವಾಹದ ಸಂಪ್ರದಾಯಗಳನ್ನು ನಡೆಸುತ್ತಿರುವಂತೆಯೇ ವರನನ್ನು ಮದುವೆಯಾಗಲು ನಿರಾಕರಿಸಿರೋ ಘಟನೆ ನಡೆದಿದೆ. ಉತ್ತರ ಪ್ರದೇಶದ ಉನ್ನಾವೊದ ವಧು, ವರನ ತಲೆ ಬೋಳಾಗಿದೆ ಎಂದು ತಿಳಿದ ನಂತರ ಆತನನ್ನು […]

Advertisement

Wordpress Social Share Plugin powered by Ultimatelysocial