ಏಷ್ಯಾಕಪ್​ನಲ್ಲಿ ಬಾಂಗ್ಲಾ ವಿರುದ್ಧ ಸೋಲು.. ಟೀಮ್​ ಇಂಡಿಯಾ ಕಳೆದುಕೊಂಡಿದ್ದೇನು?

ಈ ಬದಲಾವಣೆಯಿಂದ ತಂಡಕ್ಕೆ ಹೆಚ್ಚಿನ ಹೊಡೆತ ಆಗಿದೆ ಎಂದು ಹೇಳಲಾಗದು. ಆದರೆ ನಿನ್ನೆ ಪಂದ್ಯವನ್ನು ಗೆದ್ದಿದ್ದರೆ ಭಾರತ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಅಗ್ರಸ್ಥಾನದ ತಂಡವಾಗಿ ಹೊರಹೊಮ್ಮುತ್ತಿತ್ತು. ಈ ಸುವರ್ಣ ಅವಕಾಶ ತಂಡದ ಸೋಲಿನಿಂದಾಗಿ ಕೈತಪ್ಪಿದಂತಾಗಿದೆ. ಅಲ್ಲದೇ ನಿನ್ನೆ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಮಣಿಸಿದ್ದು, ಅಗ್ರಸ್ಥಾನಕ್ಕೇರಲು ಭಾರತಕ್ಕೆ ಸುಲಭ ಮಾರ್ಗದಂತಾಗಿತ್ತು. ಆದರೆ 6 ರನ್​ನ ಸೋಲು ನಂ.1 ಸ್ಥಾನವನ್ನು ಕಸಿದುಕೊಂಡಿತು.

ಇತ್ತೀಚೆಗೆ ನವೀಕರಿಸಲಾದ ಏಕದಿನ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆ ಆಯಿತು. ಏಷ್ಯಾಕಪ್​ನಲ್ಲಿ ಎರಡು ಪಂದ್ಯಗಳಲ್ಲಿ ಸೋಲು ಕಂಡ ಪಾಕಿಸ್ತಾನ ತನ್ನ ಅಗ್ರ ಶ್ರೇಯಾಂಕವನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿಯಿತು. ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಇನ್ನಿಂಗ್ಸ್​​ಗಳನ್ನು ಆಡಿದ ಆಸ್ಟ್ರೇಲಿಯಾ 118 ಅಂಕದಿಂದ ನಂ.1 ಸ್ಥಾನಕ್ಕೆ ಏರಿಕೆ ಕಂಡಿತು. ಏಷ್ಯಾಕಪ್​ನಲ್ಲಿ ಸತತ ಗೆಲುವು ದಾಖಲಿಸಿದ ಭಾರತವೂ ತನ್ನ ರ್‍ಯಾಂಕಿಂಗ್​ನ್ನು ಸುಧಾರಿಸಿಕೊಂಡು 116 ಅಂಕದಿಂದ ಎರಡನೇ ಸ್ಥಾನಕ್ಕೆ ಬಂದಿದೆ. ನಿನ್ನೆ ಪಂದ್ಯವನ್ನು ಭಾರತ ಗೆದ್ದಿದ್ದರೆ ಏಕದಿನ ಕ್ರಿಕೆಟ್​ನಲ್ಲೂ ಭಾರತ ತಂಡ ನಂ.1 ತಂಡವಾಗಿರುತ್ತಿತ್ತು. ಈಗಾಗಲೇ ಭಾರತ ಟೆಸ್ಟ್​ ಮತ್ತು ಟಿ20ಯಲ್ಲಿ ಅಗ್ರಮಾನ್ಯ ತಂಡವಾಗಿದೆ.

ವಿಶ್ವಕಪ್​ಗೂ ಮುನ್ನ ನಂ.1 ಸ್ಥಾನ?: ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾ ಏಕದಿನ ಕ್ರಿಕೆಟ್​ನ ನಂ.1 ಪಟ್ಟವನ್ನು ಅಲಂಕರಿಸಬಹುದು. ಅದು ಹೇಗೆ ಅಂತಿರಾ..? ವಿಶ್ವಕಪ್​ಗೂ ಮುನ್ನ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯದ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿದರೆ ನಂ.1 ತಂಡ ಕೆಳಗಿಳಿಯಲಿದೆ. ಭಾರತ ಮತ್ತು ಆಸಿಸ್​ ನಡುವೆ ಕೇವಲ 2 ಅಂಕಗಳ ಅಂತರ ಇದೆ. ಒಂದು ಪಂದ್ಯದ ಸೋಲು – ಗೆಲುವು ಸ್ಥಾನ ಪಲ್ಲಟಕ್ಕೆ ಕಾರಣ ಆಗಲಿದೆ.

ಭಾರತ ತಂಡಕ್ಕೆ ಕಾಡಿದ ಗಾಯದ ಸಮಸ್ಯೆ.. ವಿಶ್ವಕಪ್​ ತಂಡದ ಆಟಗಾರ ಏಷ್ಯಾಕಪ್​ನಿಂದ ಹೊರಕ್ಕೆ?

Please follow and like us:

tmadmin

Leave a Reply

Your email address will not be published. Required fields are marked *

Next Post

<h1>Why Almost Everything You have Learned All About Vietnamese Women Is Inappropriate And What You Ought To Know</h1>

Sat Sep 16 , 2023
They’re born with familial obligations to search out the proper person, have children, and create a strong household. What makes Vietnamese look cute is their smaller faces like those of Japanese women. In common, they tend to have darker eyes and higher cheekbones. V-shaped jaws are the most well-liked vietnamese […]

Advertisement

Wordpress Social Share Plugin powered by Ultimatelysocial