ಒಂದೆಡೆ ಕೊರೊನಾ, ಮತ್ತೊಂದೆಡೆ ಭಾನುವಾರದ ಲಾಕ್ ಡೌನ್

ಬೆಂಗಳೂರಿನಲ್ಲಿ ಆಸ್ತಿ ಪಡೆದುಕೊಳ್ಳಬೇಕೆಂಬ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಸಹೋದರಿಯ ಗಂಡನನ್ನೇ ಮುಗಿಸಲು ಹೋಗಿದ್ದಾನೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದರಿಂದ ಮುಂದೆ ಆಗುತ್ತಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಒಂದೆಡೆ ಕೊರೊನಾ, ಮತ್ತೊಂದೆಡೆ ಭಾನುವಾರದ ಲಾಕ್ ಡೌನ್. ಇದರ ಮಧ್ಯೆ ನಗರದಲ್ಲಿ ಪೊಲೀಸರ‌ ರಿವಾಲ್ವಾರ್ ಸದ್ದು ಮಾಡಿದೆ. ಭರತ್ ಅಲಿಯಾಸ್ ಬಾಬು, ಅರುಣ್ ಕುಮಾರ್ ಅಲಿಯಾಸ್ ಕೊಳಕನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಜುಲೈ 23 ರಂದು ಹೆಸರುಘಟ್ಟ ಬಳಿ ರಾಜಶೇಖರ್ ಎಂಬುವರ ಮೇಲೆ ಆರು ಜನರ ತಂಡ ದಾಳಿ ಮಾಡಿತ್ತು. ನಂತರ ಈ ಘಟನೆ ಸಂಬಂಧ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕೆಲ ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು, ಇನ್ನೂ ಕೆಲವರ ಬಂಧನಕ್ಕೆ ಮುಂದಾಗಿದ್ರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಮೊದಲು ಸೋಲದೇವನಹಳ್ಳಿ ಇನ್​​ಸ್ಪೆಕ್ಟರ್ ಹಾಗೂ ಸಿಬ್ಬಂದಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆರೋಪಿಗಳು ಶರಣಾಗದೆ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಬಂಧಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

 

 

Please follow and like us:

Leave a Reply

Your email address will not be published. Required fields are marked *

Next Post

48 ನಿಮಿಷಗಳಲ್ಲಿ 5 ಕಿ.ಮೀ ಆಟೋ ಎಳೆದ ಭೂಪ

Sun Jul 26 , 2020
ಈಗಿನ ಕಾಲದಲ್ಲಿ ನಡೆಯುವುದೆ ಕಷ್ಟ ಅಂತಹದರಲ್ಲಿ ಆಟೋರೀಕ್ಷವನ್ನ ಕೇವಲ 48 ನಿಮಿಷದಲ್ಲಿ ತನ್ನ ತೋಳ ಬಲದಲ್ಲಿ ಎಳೆದು ಸ್ನೇಹಿತರ ಸವಾಲುನ್ನು ಮೆಟ್ಟಿ ನಿಂತಿದ್ದಾರೆ ಈ ಧೀರ ಅಮೋಘ ಸಿದ್ಧ. ಹೌದು ಇವರ ಹೆಸರಿ ಅಮೋಘಸಿದ್ಧ ವಿಜಯಪುರ ಜಿ. ಸಿಂದಗಿ ತಾ. ಹಂದಿಗನೂರು ಗ್ರಾಮದವರು.  ಕೆಎಸ್ ಆರ್ ಟಿಸಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನಾಗರ ಪಂಚಮಿ ಹಿನ್ನೆಲೆ ಗೆಳೆಯರು ಮನರಂಜನಾ  ಕ್ರಿಡೆ ಸವಲು ಹಾಕಿದ್ದರು. 1 ಗಂಟೆಯಲ್ಲಿ ಟಂಟಂ ಎಳೆಯಲು ಸವಾಲು ಹಾಕಿದ್ದರು.ಸವಾಲನ್ನು […]

Advertisement

Wordpress Social Share Plugin powered by Ultimatelysocial