ಕಾನ್ಪುರದಲ್ಲಿ ನಡೆದ ವಿಲಕ್ಷಣ ಘಟನೆ

ಕೊರೊನಾ ಬಂದ ನಂತರ ಜನರು ಹಲವು ವಿಲಕ್ಷಣ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಮಾಸ್ಕ್ ಧರಿಸದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಮೇಕೆಯನ್ನು ಕಾನ್ಪುರ ಪೊಲೀಸರು ಬಂಧಿಸಿರುವ ವಿಲಕ್ಷಣ ಘಟನೆ ನಡೆದಿದೆ. “ಕೊರೋನಾ ಬಂದ ನಂತರ ಜನರು ತಮ್ಮ ನಾಯಿಗಳಿಗೂ ಮಾಸ್ಕ್ ಧರಿಸುತ್ತಿದ್ದಾರೆ ಹಾಗಿದ್ದಾಗ ಮೇಕೆಗೆ ಏಕೆ ಮಾಸ್ಕ್ ಹಾಕಿಲ್ಲ?” ಎಂದು ಓರ್ವ ಪೊಲೀಸ್ ಸಿಬ್ಬಂದಿ ಪ್ರಶ್ನಿಸಿರುವುದು ವರದಿಯಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಹಾಸ್ಯಕ್ಕೆ ಗುರಿಯಾಗುತ್ತಿದ್ದಂತೆಯೇ ಪೊಲೀಸರು ಘಟನೆಯ ಬಗ್ಗೆ ಬೇರೆ ರೀತಿ ಹೇಳಲು ಪ್ರಾರಂಭಿಸಿದ್ದಾರೆ. “ರಸ್ತೆಯಲ್ಲಿ ಓರ್ವ ಯುವಕ ಮಾಸ್ಕ್ ಧರಿಸದೇ ಮೇಕೆಯನ್ನು ಕರೆದೊಯ್ಯುತ್ತಿದ್ದ, ಪೊಲೀಸರನ್ನು ಕಂಡೊಡನೆಯೇ ಆತ ಮೇಕೆಯನ್ನು ಬಿಟ್ಟು ಪರಾರಿಯಾದ, ಮೇಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅದನ್ನು ಮಾಲಿಕನಿಗೆ ತಲುಪಿಸಲಾಗಿದೆ” ಎಂದು ಪೊಲೀಸರು ಹೇಳುತ್ತಿದ್ದು, ಮೇಕೆಯನ್ನು ರಸ್ತೆಯಲ್ಲಿ ಅಡ್ಡಾಡಲು ಬಿಡದಂತೆ ಮಾಲಿಕನಿಗೆ ಎಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಉಗ್ರರ ಬಹುದೊಡ್ಡ ಜಾಲವನ್ನ ಪತ್ತೆ ಹಚ್ಚಿದ ಪೊಲೀಸರು

Mon Jul 27 , 2020
ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ಬಹುದೊಡ್ಡ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು ಸುಮಾರು ೫೦ ಕೋಟಿ ಬೆಲೆ ಬಾಳುವ ಮಾದಕ ದ್ರವ್ಯಗಲನ್ನ ಪೊಲೀಸರು ವಸಪಡಿಸಿಕೊಂಡಿದ್ದಾರೆ , ದುಷ್ಕರ್ಮಿಗಳಿಂದ ೧೦ ಕೆಜಿ ಬ್ರೌನ್ ಶುಗರ್, ಮದ್ದು ಗುಂಡ ಮತ್ತು ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಬಷೀರ್ ಅಹ್ಮದ್ ಶೇಕ್ ಮತ್ತು ಅಬ್ದುಲ್ ಅಮಿತ್ ಶೇಕ್ ಎಂದು ಇಬ್ಬರನ್ನು ಗುರುತಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. […]

Advertisement

Wordpress Social Share Plugin powered by Ultimatelysocial