ಕೇಂದ್ರ ಕಾರಾಗೃಹಕ್ಕೆ ತಟ್ಟಿದ ಸೋಂಕು

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಯೊಬ್ಬರಿಗೆ ಕೋವಿಡ್-೧೯ ಇರುವುದು ದೃಢಪಟ್ಟಿದೆ.
ಈ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಜೊತೆಗಿದ್ದ ನಾಲ್ವರನ್ನು ಜೈಲಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ.ಮೈಸೂರಿನಲ್ಲಿ ಈಚೆಗೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ, ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ನಂತರ ಪೊಲೀಸರಿಗೆ ಶರಣಾಗಿದ್ದ. ಬೆಂಗಳೂರಿನಲ್ಲಿದ್ದ ಕಾರಣ ಆತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೂನ್ ೩೦ರಂದು ಗಂಟಲು ದ್ರವ ಪಡೆದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಹೀಗಾಗಿ, ವಿಜಯನಗರ ಠಾಣೆಯ ಪೊಲೀಸರು ಕೂಡ ಈಗ ಆತಂಕದಲ್ಲಿದ್ದಾರೆ. ನಜರಬಾದ್ ಠಾಣೆ ಕಾನ್‌ಸ್ಟೆಬಲ್ ಒಬ್ಬರಿಗೆ ಕೋವಿಡ್ ಇರುವುದು ಗೊತ್ತಾಗಿದೆ .

Please follow and like us:

Leave a Reply

Your email address will not be published. Required fields are marked *

Next Post

ಅಮರನಾಥ ದರ್ಶನ ಪ್ರಾರಂಭ ದಿನಕ್ಕೆ ಗರಿಷ್ಠ ೫೦೦ ಯಾತ್ರಾರ್ಥಿಗಳಿಗೆ ದರ್ಶನ

Sun Jul 5 , 2020
ಅಮರನಾಥ ಯಾತ್ರಾರ್ಥಿಗಳಿಗೆ ಅಮರನಾಥೇಶ್ವರ ಆಡಳಿತ ಮಂಡಳಿ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು ಈ ತಿಂಗಳಲ್ಲಿ ಅಮರನಾಥೇಶ್ವರನ ದರ್ಶನ ಪಡೆಯಲು ದಿನಕ್ಕೆ ಗರಿಷ್ಠ 500 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಿವುದರ ಮೂಲಕ ಸರ್ಕಾರ ಅನುಮತಿ ನೀಡಲಾಗಿದೆ. ದರ್ಶನಕ್ಕೆ ಬರುವ ಎಲ್ಲಾ ಯಾತ್ರಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಮತ್ತು ಕೋವಿಡ್ 19 ಟೆಸ್ಟ್ ಕಡ್ಡಾಯ ಮಾಡಿಸಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಮರನಾಥ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಡಳಿತ ಮಂಡಳಿಗೆ ಸರ್ಕಾರ ಸೂಚನೆ ನೀಡಿದೆ. […]

Advertisement

Wordpress Social Share Plugin powered by Ultimatelysocial