ಕೇಂದ್ರ ಸರ್ಕಾರ ಅನೇಕ ಜನರ ಕನಸು ನನಸಾಗಿಸಿದೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎರಡನೇ ಅವಧಿಯ ಮೊದಲನೆ ವರ್ಷವನ್ನು ಸಾಕಷ್ಟು ಸವಾಲುಗಳ ನಡುವೆ ಯಶಸ್ವಿಯಾಗಿ ಪೂರೈಸಿದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂವಿಧಾನದ ೩೭೦ನೆ ವಿಧಿ ರದ್ದು, ಪೌರತ್ವ ತಿದ್ದುಪಡಿ ವಿಧೇಯಕ-೨೦೦೯, ತ್ರಿವಳಿ ತಲಾಕ್, ಕರ್ತಾರ್‌ಪುರ್ ಕಾರಿಡಾರ್ ಯೋಜನೆ, ಬ್ರೂರಿಯಾಂಗ್ ಒಪ್ಪಂದ, ಮೂರು ಸೇನಾ ಪಡೆಗಳಿಗೆ ಮುಖ್ಯಸ್ಥರ ನೇಮಕ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸೇರಿದಂತೆ ದೇಶದ ಜನರ ಅನೇಕ ಕನಸನ್ನು ಕೇಂದ್ರ ಸರ್ಕಾರ ನನಸಾಗಿಸಿದೆ. ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ ಯೋಜನೆಯನ್ನು ೧ ಕೋಟಿಗೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದರೆ, ಅಟಲ್ ಪೆನ್ಷನ್ ಯೋಜನೆಯಡಿ ಕಳೆದ ೫ ವರ್ಷಗಳಿಂದ ೨.೨೩ ಕೋಟಿ ಮಂದಿಯ ನೋಂದಣಿಯಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ೧೬.೫ ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸಹಾಯಧನ ನೀಡಲಾಗಿದೆ. ಅಟಲ್ ಭೂಜಲ ಯೋಜನೆಯಡಿ ೭ ರಾಜ್ಯಗಳ ೮೩೫೦ ಹಳ್ಳಿಗಳು ಪ್ರಯೋಜನ ಪಡೆದಿವೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಬಿಎಸ್‌ವೈ ವಿರುದ್ಧ ಉಗ್ರಪ್ಪ ಗರಂ

Sun Jun 14 , 2020
ರಾಜ್ಯ ಸರ್ಕಾರ ಈಗ ಜನ ಹಾಗೂ ರೈತ ವಿರೋಧಿಯಾಗಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನ ಬದುಕಿನ ಜತೆ ಹೋರಾಡುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷ ಹಾಗೂ ಮುಖಂಡು ಜನರ ಸಮಸ್ಯೆಗೆ ಸ್ಪಂದಿಸದೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದಾರೆ. ಸಿಎಂ ನಾಚಿಕೆಗೇಡಿನ ಹೇಳಿಕೆ ನೀಡುತ್ತಿದ್ದಾರೆ. ಜನಪರ, ರೈತಪರ ಕಾಯ್ದೆಯನ್ನು ತಿದ್ದಲು ಹೋದ್ರೆ ನಿಮ್ಮ ಅಧಿಕಾರ […]

Advertisement

Wordpress Social Share Plugin powered by Ultimatelysocial