ಉತ್ತರ ನೈಜೀರಿಯಾದ ಮಸೀದಿ ಮೇಲೆ ದಾಳಿ…!!!

ಉತ್ತರ ನೈಜೀರಿಯಾದ ನೈಗರ್ ರಾಜ್ಯದ ಮಝಾಕುಕಾ ಗ್ರಾಮದ ಮಸೀದಿಯಲ್ಲಿ ಸೋಮವಾರ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 18 ಜನ ಮೃತಪಟ್ಟು, 4 ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ಪ್ರದೇಶದ ಅಧ್ಯಕ್ಷ ಅಲ್ಹಾಸನ್​ ಇಸಾ ಮಾಹಿತಿ ನೀಡಿದ್ದಾರೆ. ಫುಲಾನಿ ಅಲೆಮಾರಿಗಳು ಈ ದಾಳಿ ಮಾಡಿರುವದಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ ವಾಯುವ್ಯ ಸುಕೊಟೋ ಪ್ರದೇಶದಲ್ಲಿ ದುಷ್ಕರ್ಮಿಗಳು ಇದೆ ರೀತಿ ದಾಳಿ ನಡೆಸಿದ್ದು, ಕನಿಷ್ಠ 40 ಮಂದಿ ಮೃತಪಟ್ಟಿದ್ದರು.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಪಟಾಕಿ ಅಂಗಡಿ ಸ್ಫೋಟಗೊಂಡು ಐವರ ಸಾವು

Wed Oct 27 , 2021
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ, ದುರಂತದಲ್ಲಿ ಐವರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ. ದೊಡ್ಡ ಅಂಗಡಿಯಲ್ಲಿ ಪಟಾಕಿ ಸ್ಫೋಟಗೊಂಡು,  ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದೆ. ಪಟಾಕಿ ಅಂಗಡಿ ಬಳಿಯಿದ್ದ ಬೇಕರಿಯೊಂದಕ್ಕೂ ಬೆಂಕಿ ವ್ಯಾಪಿಸಿ ಭಯಂಕರ ಶಬ್ಧದೊಂದಿಗೆ ಸಿಲಿಂಡರ್ ಸಹ ಸ್ಫೋಟಗೊಂಡಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ.   ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : […]

Advertisement

Wordpress Social Share Plugin powered by Ultimatelysocial