ಘಟಾನುಘಟಿ ಸ್ಟಾರ್ ನಟರ ಪೈಕಿ ಮಿಂಚಿದ ದೇವರಕೊಂಡ

ಇತ್ತೀಚೆಗಷ್ಟೇ  ಬಾಲಿವುಡ್  ನಟಿ  ದೀಪಿಕಾ ಪಡುಕೋಣೆ ಇನ್​ಸ್ಟಾಗ್ರಾಂನಲ್ಲಿ  ಹೊಸ  ದಾಖಲೆ  ಬರೆದಿದ್ದರು. ಬರೋಬ್ಬರಿ  50 ಮಿಲಿಯನ್​  ಫಾಲೋವರ್ಸ್  ಹೊಂದಿದ  ಪಟ್ಟಿಯಲ್ಲಿ  ಸ್ಥಾನಪಡೆದಿದ್ದರು. ಇದೀಗ  ದಕ್ಷಿಣ  ಭಾರತದ  ಖ್ಯಾತ  ನಟ  ವಿಜಯ್​ ದೇವರಕೊಂಡ  ಸಹ  ಅದೇ  ಇನ್​ಸ್ಟಾಗ್ರಾಂನಲ್ಲಿ  ದಾಖಲೆ  ಬರೆದಿದ್ದಾರೆ. ಸೌತ್​  ಸಿನಿಮಾರಂಗದಲ್ಲಿ  ಘಟಾನುಘಟಿ  ಸ್ಟಾರ್​ ನಟರಿದ್ದಾರೆ. ಸೋಷಿಯಲ್​  ಮೀಡಿಯಾದಲ್ಲಿ  ಅಪಾರ  ಪ್ರಮಾಣದ  ಫ್ಯಾನ್ ​ ಫಾಲೋವರ್ಸ್​  ಹೊಂದಿದ್ದಾರೆ. ಇದೀಗ ಅರ್ಜುನ್​ ರೆಡ್ಡಿ  ಮೂಲಕ  ಮನೆಮಾತಾದ  ವಿಜಯ್​ ದೇವರಕೊಂಡ, ಇನ್​ಸ್ಟಾಗ್ರಾಂನಲ್ಲಿ  ಬರೋಬ್ಬರಿ  8 ಮಿಲಿಯನ್​ ಫಾಲೋವರ್ಸ್  ಹೊಂದಿ, ದಕ್ಷಿಣ  ಭಾರತದ  ಸಿನಿಮಾ  ನಟರ  ಸಾಲಿನಲ್ಲಿ  ಮೊದಲ  ಪಟ್ಟಿಯಲ್ಲಿದ್ದಾರೆ. ಇನ್ನು  ಅಲ್ಲು ಅರ್ಜುನ್​ 7.6 ಮಿಲಿಯನ್​, ಮಹೇಶ್ ಬಾಬು 5.2 ಮಿಲಿಯನ್​, ಪ್ರಬಾಸ್​ 4.8 ಮಿಲಿಯನ್​, ರಾಣಾ ದಗ್ಗುಬಾಟಿ 4 ಮಿಲಿಯನ್​ ಹಿಂಬಾಲಕರನ್ನು ಹೊಂದಿದ್ದಾರೆ. ಇನ್ನು  ಸ್ಯಾಂಡಲ್​ವುಡ್​ನಲ್ಲೂ  ಹಲವು  ನಾಯಕ  ನಟರು  ಇನ್​ಸ್ಟಾಗ್ರಾಂನಲ್ಲಿ  ಮಿಲಿಯನ್​ ಪಟ್ಟಿ  ಸೇರಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

Fri Jul 17 , 2020
ರಾಜ್ಯದಲ್ಲಿ ಕೋವಿಡ್-೧೯ ಸೋಂಕು ಮತ್ತು ಲಾಕ್ ಡೌನ್ ಕಾರಣದಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬದುಕುವುದೇ ಕಷ್ಟವಾಗಿದೆ. ಇವರಿಗೆ ರಾಜ್ಯ ಸÀರ್ಕಾರ ನೆರವು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್ ಸೋಂಕು ಹಬ್ಬಿದ ನಂತರ ಲಾಕ್ಡೌನ್ ಮತ್ತು ವಹಿವಾಟುಗಳಿಲ್ಲದೆ ವಿಶೇಷವಾಗಿ ಸಣ್ಣ, ಮಧ್ಯಮ ಕೈಗಾರಿಕೆಗಳು ಬದುಕುಳಿಯುವುದೇ ಕಷ್ಟವಾಗಿದೆ. ಈ ಕೈಗಾರಿಕೆಗಳು ಕೇಂದ್ರದ ಯಾವುದೇ ಟೆಂಡರ್ […]

Advertisement

Wordpress Social Share Plugin powered by Ultimatelysocial