ಚೀನಾದಿಂದ 700 ದಶಲಕ್ಷ ಡಾಲರ್ ಸಾಲ ಮಂಜೂರು: ಪಾಕಿಸ್ತಾನ

ಸ್ಲಮಾಬಾದ್, ಫೆ.22: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ 700 ದಶಲಕ್ಷ ಡಾಲರ್ ಮೊತ್ತದ ಸಾಲವನ್ನು ಮಿತ್ರರಾಷ್ಟ್ರ ಚೀನಾ ಮಂಜೂರುಗೊಳಿಸಿದ್ದು ಈ ವಾರ ಸೆಂಟ್ರಲ್ಬ್ಯಾಂಕ್ಗೆ ವರ್ಗಾವಣೆಯಾಗಲಿದೆ ಎಂದು ಪಾಕಿಸ್ತಾನದ ವಿತ್ತಸಚಿವ ಇಷಾಕ್ ದಾರ್ ಬುಧವಾರ ಘೋಷಿಸಿದ್ದಾರೆ.

ಸಾಲ ಪಡೆಯುವ ನಿಟ್ಟಿನಲ್ಲಿ ಬೋರ್ಡ್ ಆಫ್ ಚೀನಾ ಡೆವಲಪ್ಮೆಂಟ್ ಬ್ಯಾಂಕ್(ಸಿಡಿಬಿ) ಜತೆಗಿನ ಎಲ್ಲಾ ಔಪಚಾರಿಕತೆಗಳೂ ಪೂರ್ಣಗೊಂಡಿದ್ದು ಈ ವಾರ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಖಾತೆಗೆ ಜಮೆಯಾಗುವ ನಿರೀಕ್ಷೆಯಿದೆ. ಇದರಿಂದ ವಿದೇಶಿ ವಿನಿಮಯ ದಾಸ್ತಾನು ಕೊರತೆಯ ಸಮಸ್ಯೆ ಪರಿಹಾರವಾಗಲಿದೆ ಎಂದು ವಿತ್ತಸಚಿವರು ಹೇಳಿದ್ದಾರೆ. ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ನಲ್ಲಿ ಕೇವಲ 3.2 ಶತಕೋಟಿ ಡಾಲರ್ ವಿದೇಶಿ ವಿನಿಮಯ ದಾಸ್ತಾನಿದ್ದು 3 ವಾರಗಳ ಆಮದಿಗೆ ಮಾತ್ರ ಸಾಕಾಗಬಹುದು ಎಂದು ಫೆಬ್ರವರಿ 10ರಂದು ಪಾಕ್ ಸರಕಾರ ಹೇಳಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

3 ವರ್ಷ ಮಗನೊಂದಿಗೆ ಮನೆಯೊಳಗೆಯೇ ಸ್ವಯಂ ದಿಗ್ಭಂಧನವಾಗಿದ್ದ ತಾಯಿ.!

Thu Feb 23 , 2023
ನವದೆಹಲಿ: ಕೋವಿಡ್‌ ನಿಂದ ರಕ್ಷಿಸಿಕೊಳ್ಳಲು ತಾಯಿಯೊಬ್ಬಳು ತನ್ನ 10 ವರ್ಷದ ಮಗನೊಂದಿಗೆ ಮನೆಯಲ್ಲೇ ಸ್ವಯಂ ದಿಗ್ಬಂಧನ ಮಾಡಿಕೊಂಡು ವಾಸಿಸುತ್ತಿದ್ದ ಘಟನೆ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಘಟನೆ ಹಿನ್ನೆಲೆ: ಕೋವಿಡ್‌ ಮೊದಲ ಅಲೆಯ ವೇಳೆ 35 ವರ್ಷದ ಮಹಿಳೆ, ಕೋವಿಡ್‌ ಹರಡುತ್ತಿರುವ ವೇಗದ ಭೀತಿಯಿಂದ ತನ್ನ 10 ವರ್ಷದ ಮಗನೊಂದಿಗ ಮನೆಯಲ್ಲೇ ವಾಸುತ್ತಿದ್ದರು. ಗಂಡ ಕೂಡ ತನ್ನ ಪತ್ನಿ,ಮಗನೊಂದಿಗೆ ಮನೆಯಲ್ಲೇ ವಾಸುತ್ತಿದ್ದರು. ಇದಾದ ಬಳಿಕ ಎರಡನೇ ಅಲೆಯ ವೇಳೆ ಗಂಡ ಕೆಲಸಕ್ಕೆ ಹೋದ […]

Advertisement

Wordpress Social Share Plugin powered by Ultimatelysocial