ಚಿಕ್ಕಮಗಳೂರು: ಆಸ್ತಿಗಾಗಿ ಬದುಕಿರುವಾಲೇ ವೃದ್ಧೆಯನ್ನ ಸಾಯಿಸಿದ ಸಂಬಂಧಿಕರು

 

ಚಿಕ್ಕಮಗಳೂರು : ಆಸ್ತಿಗಾಗಿ ಬದುಕಿರುವಾಗಲೇ ವೃದ್ಧೆಯ ಸಂಬಂಧಿಕರು ಮರಣ ಪತ್ರ ಸಿದ್ಧ ಮಾಡಿದ ಘಟನೆ ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ.ಸಾರಮ್ಮ ಎಂಬ ವೃದ್ಧೆ ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದು,ಬದುಕಿರುವಾಗಲೇ ಮರಣ ಪತ್ರ ನೀಡಿ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ.ಸಾರಮ್ಮ, ಸಂಬಂಧಿಕರು ಮರಣ ಪತ್ರ, ವಂಶವೃಕ್ಷ ಸೃಷ್ಟಿ ಮಾಡಿ ಆಸ್ತಿ ಕಬಳಿಸಲು ಯತ್ನ ಮಾಡಿದ್ದಾರೆ. ವೃದ್ಧೆ ಸತ್ತು ಹೋಗಿದ್ದಾರೆಂದು ಖಚಿತಪಡಿಸಿಕೊಳ್ಳದೆ, ವೃದ್ಧೆ ಬದುಕಿರೋ ಬಗ್ಗೆ ವಿಚಾರಿಸದೇ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ.ಕೋವಿಡ್ ಸಮಯದಲ್ಲಿ ಸಾರಮ್ಮ, ಮಗಳ ಮನೆಗೆ ತೆರಳಿದ್ದ ವೇಳೆ ಸಂಬಂಧಿಕರಾದ ಇ.ಟಿ.ಬಾಬು ಹಾಗೂ ಶ್ರೀಜಾ ಎಂಬುವರು ವೃದ್ಧೆ ಸಾವನಪ್ಪಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಪೌತಿ ಖಾತೆ ಬದಲಾವಣೆಗೆ ಅರ್ಜಿ ಹಾಕಿದ್ದ ಇ.ಟಿ.ಬಾಬು ಜಮೀನು ಕೊಡುವುದಿಲ್ಲ ಎಂದಾಗ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.ವೃದ್ಧೆಯ ಮರಣ ಪತ್ರ ಬಂದ ಕಾರಣ ರೇಷನ್ ಕಾರ್ಡ್ ಕೂಡ ಬಂದ್ ಆಗಿದ್ದು, ದಿಕ್ಕು ತೋಚದಂತಾಗಿದೆ. ಅಜ್ಜಿ ಸೂಕ್ತ ನ್ಯಾಯ ಒದಗಿಸುವಂತೆ ಆಳಲು ತೋಡಿಕೊಂಡಿದ್ದು, ಬಾಳೆಕೊಪ್ಪ ಸರ್ವೇ ನಂ 26 ರಲ್ಲಿರುವ ಒಂದು ಎಕರೆ 16 ಜಮೀನು ನನ್ನ ಜಮೀನು ವಾಪಸ್ ಕೊಡಿಸುವಂತೆ ಸಾರಮ್ಮ ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಲೆಯ ಹೊಟ್ಟನ್ನು ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ?

Fri Feb 4 , 2022
  ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ. ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು ಜೊತೆ ಸೇರಿಸಿ ಸ್ಕ್ರಬ್ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ.ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ.   ಅಲೋವೆರಾದಲ್ಲಿ ಶಮನಕಾರಿ ಗುಣಗಳಿವೆ ಮತ್ತು ಇದು […]

Advertisement

Wordpress Social Share Plugin powered by Ultimatelysocial