ಅತ್ಯಾಚಾರ ಸಂತ್ರಸ್ತೆ’ಯನ್ನೇ ಮದುವೆಯಾದ ಆರೋಪಿ.

ಬೆಂಗಳೂರು : ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ಮದುವೆಯಾಗಿ ಬಾಳು ನೀಡಿದ ಆರೋಪಿ ವಿರುದ್ಧದ ಪ್ರಕರಣವನ್ನು ರದ್ದು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಬೆಂಗಳೂರಿನ ಯುವತಿಯೊಬ್ಬರು ಅ.2022 ರಲ್ಲಿ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದರು.

ಹುಟ್ಟು ಹಬ್ಬದ ಆಚರಣೆಗಾಗಿ ಮನೆಗೆ ಕರೆದು ಮದ್ಯಪಾನ ಮಾಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದನು ಎಂದು ಆರೋಪಿಸಿದ್ದರು. ನಂತರ ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ , ಜೀವ ಬೆದರಿಕೆ ಆರೋಪಗಳಡಿ ಎಫ್ ಐ ಆರ್ ದಾಖಲಿಸಿದ್ದರು.

ನಂತರ ಸಂತ್ರಸ್ತೆಯನ್ನು ಆರೋಪಿ ವಿವಾಹವಾದರೂ ಕೂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿ ಪ್ರಕರಣವನ್ನು ರದ್ದುಮಾಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿದಾರರ ಪರ ವಕೀಲರ ವಾದ ಆಲಿಸಿ ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸೂಚಿಸಿ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಹಪುರ್ ನಗರದ ಬೈಪಾಸ್ ರಸ್ತೆ ಅವೈಜ್ಞಾನಿಕದಿಂದ ಕೂಡಿದೆ.

Wed Jan 18 , 2023
ಶಹಪುರ್ ನಗರದ ಹೃದಯ ಭಾಗದಿಂದ ಬೆಳೆಯುತ್ತಿರುವ ಶಹಪುರ್ ನಗರಕ್ಕೆ ಅತಿ ಹೆಚ್ಚು ವೇಗದ ಅಭಿವೃದ್ಧಿ ಆಗುತ್ತಿರುವ ನಗರವೆಂದೇ ಖ್ಯಾತಿಯಾಗಿರುವ ಶಹಪುರ್.ಇದನ್ನು ಅಭಿವೃದ್ಧಿಪಡಿಸಲು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿ ಅದಕ್ಕೆ ಸಹಕಾರ ಕೊಟ್ರೆ ಮಾತ್ರ ಅಭಿವೃದ್ಧಿ ಆಗಲು ಸಾಧ್ಯ.ಇದು ಸುಮಾರು 12 ವರ್ಷಗಳ ಹಿಂದೆ ನಮ್ಮ ಶಹಪುರ್ ನಗರಕ್ಕೆ ಸಿಗುವಂತ ಜಿಲ್ಲೆಗೆ ಸೌಭಾಗ್ಯ ಕೈ ತಪ್ಪಿ ಹೋಗಿದೆಆ ಸಂದರ್ಭದಲ್ಲಿ ನಮ್ಮ ನಗರ ಹೋರಾಟಗಾರರು ಸಾಕಷ್ಟು ಪ್ರಯತ್ನ ಪಟ್ಟರು ಸಾಧ್ಯವಿಲ್ಲ […]

Advertisement

Wordpress Social Share Plugin powered by Ultimatelysocial