ಸ್ಕಾಟ್ಲೆಂಡ್‌ನ ಪ್ರಥಮ ಸಚಿವೆ ನಿಕೋಲಾ ರಾಜೀನಾಮೆ.

ಕಳೆದ ಎಂಟು ವರ್ಷಕ್ಕೂ ಹೆಚ್ಚು ಕಾಲ ಸ್ಕಾಟ್ಲೆಂಡ್‌ನ ಪ್ರಥಮ ಸಚಿವ ಹುದ್ದೆಯಲ್ಲಿದ್ದ ನಿಕೋಲಾ ಸ್ಟರ್ಜಿಯೊನ್ ಅವರು ಅಚ್ಚರಿಯ ರೀತಿ ಎಂಬಂತೆ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್‌ನ ಪ್ರಥಮ ಸಚಿವ ಸ್ಥಾನಕ್ಕಾಗಿ ಹೊಸ ನಾಯಕನ ಹುಡುಕಾಟ ಮುಂದುವರೆದಿದೆ.ಹೊಸ ಪ್ರಥಮ ಸಚಿವ ಸ್ಥಾನಕ್ಕೆ ಆಯ್ಕೆ ನಡೆಯುವವರೆಗೂ ಸ್ಕಾಟಿಶ್ ನ್ಯಾಶನಲ್ ಪಕ್ಷದ (ಎಸ್‌ಎನ್‌ಪಿ) ನಾಯಕಿ ಕೂಡ ಆಗಿರುವ ನಿಕೋಲಾ ಅವರು ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಚ್ಚರಿಯ ರೀತಿ ಎಂಬಂತೆ ನಿಕೋಲಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಒಬ್ಬ ರಾಜಕಾರಣಿ ಉತ್ತಮ ಸೇವೆ ಸಲ್ಲಿಸಲು, ಇನ್ನೊಬ್ಬರಿಗೆ ದಾರಿ ಮಾಡಿಕೊಡುವ ಸಮಯ ಬಂದಾಗ ಒಪ್ಪಿಕೊಳ್ಳಬೇಕು. ಹುದ್ದೆಯಿಂದ ಹಿಂದಕ್ಕೆ ಸರಿಯಲು ಇದು ಸರಿಯಾದ ಸಮಯ ಎಂಬುದು ನನ್ನ ಹೃದಯ ಹಾಗೂ ತಲೆಯಲ್ಲಿ ಗೊತ್ತಾಗಿದೆ. ಅಲ್ಲದೆ ಇದು ನನಗೆ, ನನ್ನ ಪಕ್ಷಕ್ಕೆ ಮತ್ತು ನನ್ನ ದೇಶಕ್ಕೆ ಸರಿಯಾದ ನಿರ್ಧಾರವಾಗಿದೆ ಎಂದು ನಿಕೋಲಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು. ಇನ್ನು ನಿಕೋಲಾ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಎಸ್‌ಎನ್‌ಪಿಯಲ್ಲಿ ಚುರುಕಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ನಾಯಕತ್ವಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ರೂಪಿಸಲು ಎಸ್‌ಎನ್‌ಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಗುರುವಾರ ಸಂಜೆ ಸಭೆ ಸೇರಲಿದೆ. ಆದರೆ ಪಕ್ಷದಲ್ಲಿ ಯಾವುದೇ ಸ್ಪಷ್ಟ ಉತ್ತರಾಧಿಕಾರಿಯಿಲ್ಲದೆ, ಅಲ್ಲದೆ ಸುಮಾರು ೨೦ ವರ್ಷಗಳಲ್ಲಿ ಪಕ್ಷದ ಮೊದಲ ನಾಯಕತ್ವ ಸ್ಪರ್ಧೆಯು ಭವಿಷ್ಯದ ನಿರ್ದೇಶನ ಮತ್ತು ಕಾರ್ಯತಂತ್ರದ ಬಗ್ಗೆ ಚರ್ಚೆಯನ್ನು ನೋಡಬಹುದು ಎಂಬ ಮಾತು ಸದ್ಯ ಕೇಳಿ ಬರುತ್ತಿದೆ.ಯಾರು ಸಂಭಾವ್ಯ ನಾಯಕರು?ಸದ್ಯ ಸ್ಕಾಟ್ಲೆಂಡ್ ಪ್ರಥಮ ಸಚಿವ ಹುದ್ದೆಗೆ ಇದೀಗ ಹಲವರು ಸಂಭಾವ್ಯ ನಾಯಕರ ಹೆಸರು ಕೇಳಿ ಬರುತ್ತಿದೆ. ಸ್ಕಾಟ್ಲೆಂಡ್‌ನ ಉಪ ಪ್ರಥಮ ಸಚಿವರಾಗಿರುವ ಜಾನ್ ಸ್ವಿನ್ನೆ, ಹಣಕಾಸು ಕಾರ್ಯದರ್ಶಿ ಕೇಟ್ ಫೋರ್ಬ್ಸ್, ಎಸ್‌ಎನ್‌ಪಿ ವೆಸ್ಟ್ ಮಿನಿಸ್ಟರ್ ಗ್ರೂಪ್‌ನ ನಾಯಕ ಆಂಗಸ್ ರಾಬರ್ಟ್ಸನ್, ಆರೋಗ್ಯ ಕಾರ್ಯದರ್ಶಿ ಹಮ್ಜಾ ಯೂಸುಫ್, ನ್ಯಾಯ ಕಾರ್ಯದರ್ಶಿ ಕೀತ್ ಬ್ರೌನ್ ಮುಂತಾದ ನಾಯಕರು ಮುಂಚೂಣಿಯಲ್ಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Issues with Your math for kids

Wed Feb 22 , 2023
You’ll discover information about the applying process on the postgraduate diploma page that you’re interested in. Discover 53 ways to review mathematics with main Australian universities. Milton, meanwhile, begins a lot of her classes with a number talk. Number talks are a standard follow during which a instructor places a […]

Advertisement

Wordpress Social Share Plugin powered by Ultimatelysocial