ಡಬ್ಬಿಂಗ್ ಮಾಡುವುದಕ್ಕೆ ಮುಂದಾದ ಬಾಲಿವುಡ್ ,ಟಾಲಿವುಡ್

ಹ್ಯಾಟ್ರಿಕ್  ಹೀರೋ  ಶಿವರಾಜಕುಮಾರ್  ನಾಯಕತ್ವದ ‘ಭಜರಂಗಿ 2’ ಚಿತ್ರದ  ಟೀಸರ್  ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಶಿವಣ್ಣನ  ಜನ್ಮದಿನದ  ಪ್ರಯುಕ್ತ  ರಿಲೀಸ್  ಆಗಿದ್ದ  ಟೀಸರ್​ಗೆ  ಕೇವಲ ಸ್ಯಾಂಡಲ್​ವುಡ್  ಅಷ್ಟೇ  ಅಲ್ಲದೆ, ಪಕ್ಕದ  ಬಾಲಿವುಡ್, ತೆಲುಗು, ತಮಿಳು ಚಿತ್ರರಂಗಗಳಿಂದಲೂ  ಒಳ್ಳೇ  ಪ್ರತಿಕ್ರಿಯೆ  ಸಿಕ್ಕಿತ್ತು.ಇದೀಗ ಇದೇ  ಚಿತ್ರ  ಬಹುಭಾಷೆಯಲ್ಲಿ  ಬಿಡುಗಡೆ  ಆಗಲಿದೆ  ಎಂಬುದನ್ನು  ಸ್ವತಃ  ಚಿತ್ರದ ನಿರ್ವಪಕ  ಜಯಣ್ಣ  ಮತ್ತು ನಿರ್ದೇಶಕ  ಎ. ಹರ್ಷ  ಹೇಳಿಕೊಂಡಿದ್ದಾರೆ. ಯಾವಾಗ ಕನ್ನಡದ ಟೀಸರ್​ಗೆ ಎಲ್ಲೆಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಯಿತೋ, ಪರಭಾಷೆಯಲ್ಲಿಯೂ ಬಿಡುಗಡೆ ಮಾಡಬೇಕೆಂಬ ಪ್ಲಾ್ಯನ್ ನಡೆದಿದೆ. ಅದರಲ್ಲೂ ಬಾಲಿವುಡ್ ಮತ್ತು ಟಾಲಿವುಡ್​ನವರು ಟೀಸರ್ ಮೆಚ್ಚಿಕೊಂಡು, ಡಬ್ಬಿಂಗ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಮಾತುಕತೆ ನಡೆಯುತ್ತಿದೆ. ಸದ್ಯಕ್ಕೆ ನಾವು ಎಲ್ಲವನ್ನೂ ಪೆಂಡಿಂಗ್​ನಲ್ಲಿ ಇಟ್ಟಿದ್ದೇವೆ. ಎಲ್ಲವೂ ಅಂದುಕೊಂಡಂತೆ ಕೂಡಿಬಂದರೆ ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲಿದ್ದೇವೆ’ ಎನ್ನುತ್ತಾರೆ ಹರ್ಷ.

Please follow and like us:

Leave a Reply

Your email address will not be published. Required fields are marked *

Next Post

ಆರೋಪ ಸುಳ್ಳಾದರೆ ಪದ್ಮಶ್ರೀ ವಾಪಸ್

Sun Jul 19 , 2020
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ನಂತರ ಅತೀ ಹೆಚ್ಚು ಸುದ್ದಿಯಲ್ಲಿರುವವರು ಎಂದರೆ ಅದು ಕಂಗನಾ ರಣಾವತ್. ಹಿಂದಿ ಚಿತ್ರರಂಗದಲ್ಲಿ ಗುಂಪುಗಾರಿಕೆ ಮತ್ತು ಸ್ವಜನಪಕ್ಷಪಾತ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಅವರು ಕೆಲವು ದಿನಗಳ ಹಿಂದೆ ವಿವರವಾಗಿ ಮಾತಾಡಿದ್ದರು. ಹೊರಗಿನಿಂದ ಪ್ರತಿಭಾವಂತರನ್ನು ಹೇಗೆ ಇಲ್ಲಿ ವ್ಯವಸ್ಥಿತವಾಗಿ ತುಳಿದು, ಕೆಲಸ ಇಲ್ಲದಂತೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಬಾಲಿವುಡ್​ನ ಕೆಲವು ಪ್ರಭಾವಿಗಳ ಕಾಟ ತಾಳಲಾರದೆ ಸುಶಾಂತ್ […]

Advertisement

Wordpress Social Share Plugin powered by Ultimatelysocial