ಡಿಎಚ್‌ಎಫ್‌ಎಲ್‌ನ್ನು ಆರೋಪಿಸಿದ ಪಿಎನ್‌ಬಿ

ಬ್ಯಾಂಕೇತರ ಹಣಕಾಸು ಸಂಸ್ಥೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ೩,೬೮೮.೫೮ ಕೋಟಿ ವಂಚಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆರೋಪಿಸಿದೆ. ಈ ಸಂಬAಧ ಆರ್‌ಬಿಐಗೆ ಅದು ಮಾಹಿತಿ ನೀಡಿದೆ. ಮುಂಬಯಿನ ದೊಡ್ಡ ಕಾರ್ಪೊರೇಟ್ ಶಾಖೆಯಲ್ಲಿನ ಡಿಎಚ್‌ಎಫ್‌ಎಲ್‌ನ ಖಾತೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ವರದಿ ಮಾಡಿದ ನಾಲ್ಕನೇ ಹಗರಣವಿದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗಳು ಕೂಡ ಈ ಸಂಸ್ಥೆಯ ಖಾತೆಯನ್ನು ಈಗಾಗಲೇ “ಫ್ರಾಡ್ ಅಕೌಂಟ್’’ ಪಟ್ಟಿಗೆ ಸೇರಿಸಿವೆ. ಡಿಎಚ್‌ಎಫ್‌ಎಲ್, ವಿವಿಧ ಬ್ಯಾಂಕ್ ಗಳಿAದ ಪಡೆದಿರುವ ಸಾಲಕ್ಕೆ ಸಂಬAಧಿಸಿದAತೆ ಭಾರತೀಯ ದಿವಾಳಿತನದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಜಾರಿ ನಿರ್ದೇಶನಾಲಯಗಳು ಕೂಡ ಕಂಪನಿಯ ಅವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿವೆ.

Please follow and like us:

Leave a Reply

Your email address will not be published. Required fields are marked *

Next Post

ಭದ್ರತಾ ಪಡೆ ಎನ್ ಕೌಂಟರ್‌ಗೆ ಇಬ್ಬರು ಉಗ್ರರು ಬಲಿ

Sat Jul 11 , 2020
ಗಡಿ ನಿಯಂತ್ರಣ ರೇಖೆ ಸಮೀಪ ಭದ್ರತಾ ಪಡೆಯ ಎನ್ ಕೌಂಟರ್‌ಗೆ ಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ, ಜಮ್ಮುಕಾಶ್ಮೀರ್ ಬಾರಾಮುಲ್ಲಾದ ನೌಗಾಮ್ ಸೆಕ್ಟರ್‌ನಲ್ಲಿ ನಡೆದಿದೆ. ಸೇನಾ ವಕ್ತಾರರ ಮಾಹಿತಿ ಪ್ರಕಾರ, ಇಂದು ನಸುಕಿನ ವೇಳೆ ನೌಗಾಮ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆ ಸಮೀಪ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಈ ವೇಳೆ ಭದ್ರತಾ ಪಡೆ ನಡೆಸಿದ ಹೊಂಚು ದಾಳಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಯಿತು ಎಂದು ವಿವರಿಸಿದೆ. ಉಗ್ರರ ಬಳಿ ಇದ್ದ ಎರಡು […]

Advertisement

Wordpress Social Share Plugin powered by Ultimatelysocial