ತೆರಿಗೆ ಲೆಕ್ಕಾಚಾರ ತಲೆಬಿಸಿಯೇ ಇಲ್ಲಿದೆ ಮಾಹಿತಿ ಮುಂದೆ ಓದಿ…

ಪ್ರತಿ ವರ್ಷವೂ ಕೂಡಾ ನಾವು ಆದಾಯ ತೆರಿಗೆಯನ್ನು ಪಾವತಿ ಮಾಡುವುದು ಅತೀ ಮುಖ್ಯವಾಗುತ್ತದೆ. ಸರ್ಕಾರವು ನಮ್ಮ ತೆರಿಗೆಯ ಮೇಲೆಯೇ ನಿಂತಿರುತ್ತದೆ. ನಾವು ಪಾವತಿ ಮಾಡುವ ತೆರಿಗೆಯಿಂದಲೇ ನಾವು ಸರ್ಕಾರದ ಖಜಾನೆಯು ಭರ್ತಿಯಾಗುತ್ತದೆ. ಆದರೆ ತೆರಿಗೆಯನ್ನು ಪಾವತಿ ಮಾಡುವ ಸರಳ ವಿಧಾನ ಯಾವುದು ಎಂಬುವುದನ್ನು ನಾವು ಎಂದಿಗೂ ಹುಡುಕುತ್ತಾ ಇರಬಹುದು?.

ಅದಕ್ಕೆ ಸುಲಭವಾದ ದಾರಿಯನ್ನು ಟಿಪ್ಸ್ ಅನ್ನು ನಾವಿಲ್ಲಿ ನೀಡಿದ್ದೇವೆ.

ಹೌದು, ತೆರಿಗೆ ಲೆಕ್ಕಾಚಾರ ಮಾಡುವುದು ಕೊಂಚ ಕಷ್ಟ ಹೌದು. ತೆರಿಗೆ ಲೆಕ್ಕಾಚಾರದ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುತ್ತದೆ. ತೆರಿಗೆ ಲೆಕ್ಕಾಚಾರವು ಅರ್ಥವೇ ಆಗದೆ, ತೆಲೆಕೆಡಿಸಿಕೊಳ್ಳುವವರು ಹಲವಾರು ಮಂದಿ ಇದ್ದಾರೆ. ತೆರಿಗೆ ಲೆಕ್ಕಾಚಾರವನ್ನು ಹೇಗೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ…

ತೆರಿಗೆ ಲೆಕ್ಕಾಚಾರದ ವೇಳೆ ಈ ಅಂಶ ನೆನಪಿರಲಿ

1. ತೆರಿಗೆ ಆದಾಯವನ್ನು ನಿರ್ಧಾರ ಮಾಡಿ: ತೆರಿಗೆಗೆ ಒಳಪಡುವ ಎಷ್ಟು ಆದಾಯವನ್ನು ನೀವು ಹೊಂದಿದ್ದೀರಿ ಎಂದು ತಿಳಿದಿರಬೇಕಾಗುತ್ತದೆ. ನಿಮ್ಮ ತೆರಿಗೆ ಆದಾಯವು, ಒಟ್ಟು ಆದಾಯ – ತೆರಿಗೆ ವಿನಾಯಿರಿ ಅಥವಾ ತೆರಿಗೆ ಕಡಿತ ಆಗಿದೆ. ನಿಮ್ಮ ಉದ್ಯೋಗದ ಆದಾಯ, ಹೂಡಿಕೆ ಆದಾಯ, ಇತರೆ ವಿಧದ ಆದಾಯವು ಇದರಲ್ಲಿ ಸೇರ್ಪಡೆಯಾಗುತ್ತದೆ.

2. ತೆರಿಗೆ ದರವನ್ನು ನಿರ್ಧಾರ ಮಾಡಿ: ನೀವು ಎಷ್ಟು ತೆರಿಗೆಯನ್ನು ಪಾವತಿ ಮಾಡಬೇಕು ಎಂಬುವುದು ತೆರಿಗೆ ದರವಾಗಿದೆ. ನಿಮ್ಮ ಆದಾಯ, ಫೈಲಿಂಗ್ ಸ್ಟೇಟಸ್, ಇತರೆ ಅಂಶಗಳ ಆಧಾರದಲ್ಲಿ ತೆರಿಗೆ ದರ ಬದಲಾವಣೆಯಾಗುತ್ತದೆ.

3. ತೆರಿಗೆ ಹೊಣೆಗಾರಿಕೆ ಲೆಕ್ಕಾಚಾರ: ತೆರಿಗೆ ದರದಿಂದ ನಿಮ್ಮ ಒಟ್ಟು ತೆರಿಗೆ ಆದಾಯವನ್ನು ಗುಣಾಕಾರ ಮಾಡಿದಾಗ ತೆರಿಗೆ ಲೆಕ್ಕಾಚಾರ ಲಭ್ಯವಾಗಲಿದೆ.

4. ತೆರಿಗೆ ಕಡಿತ ಮತ್ತು ಸಾಲ: ತೆರಿಗೆ ಕಡಿತ ಮತ್ತು ಕ್ರೆಡಿಟ್ ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ. ತೆರಿಗೆ ಕಡಿತ ಎಂಬುವುದು ನಿಮ್ಮ ತೆರಿಗೆಗೆ ಒಳಪಡುವ ಆದಾಯದಿಂದ ಕಳೆಯಬಹುದಾದ ಅಂಶವಾಗಿದೆ. ಆದರೆ ಕ್ರೆಡಿಟ್‌ಗಳು ತೆರಿಗೆ ಹೊರೆಯಾಗಿದೆ.

5. ರಿಟರ್ನ್ ಅನ್ನು ಫೈಲ್ ಮಾಡಿ: ನಿಮ್ಮ ತೆರಿಗೆ ಎಷ್ಟು ಎಂದು ಲೆಕ್ಕಾಚಾರ ಮಾಡಿದ ಬಳಿಕ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಬಹುದಾಗಿದೆ. ನಿಮ್ಮ ತೆರಿಗೆ ರಿಟರ್ನ್ ಆದಾಯ, ತೆರಿಗೆ ಕಡಿತ, ಕ್ರೆಡಿಟ್ಸ್, ತೆರಿಗೆ ಹೊಣೆ ಎಲ್ಲವೂ ಸೇರ್ಪಡೆಯಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಷೇರು ಮಾರುಕಟ್ಟೆಯು ಬುಧವಾರ ಭಾರೀ ಇಳಿಕೆ ಕಂಡಿದೆ ̤

Thu Feb 23 , 2023
ಷೇರು ಮಾರುಕಟ್ಟೆಯು ಬುಧವಾರ ಭಾರೀ ಇಳಿಕೆ ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಸುಮಾರು ಶೇಕಡ 1.60ರಷ್ಟು ಕುಸಿದಿದೆ. ಫೆಬ್ರವರಿ 22ರಂದು ಸ್ಟಾಕ್ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 927.74 ಅಂಕ ಅಥವಾ ಶೇಕಡ 1.53ರಷ್ಟು ಕುಸಿದಿದ್ದು, 59,744.98ಕ್ಕೆ ತಲುಪಿದೆ. ನಿಫ್ಟಿ 272.40 ಅಂಕ ಅಥವಾ ಶೇಕಡ 1.53ರಷ್ಟು ಇಳಿದು 17,554.30ಕ್ಕೆ ತಲುಪಿದೆ. 928 ಷೇರುಗಳು ಏರಿಕೆಯಾದರೆ, 2451 ಷೇರುಗಳು ಕುಸಿತ ಕಂದಿದೆ, 127 ಷೇರುಗಳು ಸ್ಥಿರವಾಗಿದೆ. ಎಲ್ಲ ಸೆಕ್ಟರ್‌ಗಳು ರೆಡ್‌ ಜೋನ್‌ನಲ್ಲಿದ್ದು, ಶೇಕಡ […]

Advertisement

Wordpress Social Share Plugin powered by Ultimatelysocial