ದುಬೆಗಿತ್ತು ಮಾಸಿಕ ಕೋಟಿ ರೂ. ಆದಾಯ

ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ಪಾತಕಿ ವಿಕಾಸ್ ದುಬೆ ಅಕ್ರಮ ಆಸ್ತಿ ಹಾಗೂ ಅವ್ಯವಹಾರ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಈತನ ಅಸ್ತಿಯನ್ನು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ. ದುಬೆ ತಿಂಗಳಿಗೆ ಕೋಟಿ ರೂ.ಆದಾಯ ಗಳಿಸುತ್ತಿದ್ದನು ಎಂದು ತಿಳಿದು ಬಂದಿದ್ದು, ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದಾನೆ, ಹೇಗೆ ವ್ಯಯಿಸಿದ್ದಾನೆ ಎಂಬುದನ್ನು ಇ.ಡಿ. ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ೬೦ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಕುಖ್ಯಾತ ರೌಡಿ ತಿಂಗಳಿಗೆ ೯೦ ಲಕ್ಷ ರೂ.ನಿಂದ ೧.೨ ಕೋಟಿ ರೂ.ವರೆಗೆ ಆದಾಯ ಗಳಿಸುತ್ತಿದ್ದನು. ಈತ ಮದ್ಯ ವ್ಯಸನಿಯಾಗಿರಲಿಲ್ಲ. ಆಡಂಬರದ ಬದುಕು ನಡೆಸುತ್ತಿರಲಿಲ್ಲ. ಸರಳವಾದ ಬಟ್ಟೆ ಧರಿಸುತ್ತಿದ್ದ. ಸಾಮಾನ್ಯನಂತೆ ಜೀವನ ನಡೆಸುತ್ತಿದ್ದ. ಬ್ಯಾಂಕ್‌ಗಳಲ್ಲೂ ಕೂಡ ದೊಡ್ಡ ಮಟ್ಟದ ವಹಿವಾಟು ನಡೆಸಿರುವುದು ಕಂಡು ಬಂದಿಲ್ಲ. ಹೀಗಾಗಿ ಅತ ಹಣವನ್ನು ಎಲ್ಲಿ, ಹೇಗೆ ಹೂಡಿಕೆ ಮಾಡಿದ್ದನ್ನು ಎಂಬುದನ್ನು ಪತ್ತೆಹಚ್ಚುವುದು ಸವಾಲಾಗಿದೆ. ದುಬೆ ಆಪ್ತರು, ಸಹಚರರು ಹಾಗೂ ಈತ ಸಂಪರ್ಕ ಹೊಂದಿದ್ದ ಉದ್ಯಮಿಗಳ ಬಗ್ಗೆ ಇ.ಡಿ. ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿದು ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಮೊದಲ ಬಾರಿ ೩೦ ಸಾವಿರಕ್ಕಿಂತ ಅಧಿಕ ಸೋಂಕು ಪತ್ತೆ

Thu Jul 16 , 2020
ದೇಶದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 32,695 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು , ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,70,169ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 606 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.  ಈ ವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 24,915ಕ್ಕೆ ತಲುಪಿದೆ. ಮತ್ತು ಒಂದೇದಿನದಲ್ಲಿ 21,415 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 6,12,815ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ್ನೂ 3,31,146 […]

Advertisement

Wordpress Social Share Plugin powered by Ultimatelysocial