ಶೀಘ್ರವೇ ಬ್ಯಾಂಕುಗಳಲ್ಲಿ 41,177 ಹುದ್ದೆಗಳ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ,

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ದೇಶದ 12 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 41,177 ಹುದ್ದೆಗಳು ಖಾಲಿ ಇದ್ದು, ಈ ವರ್ಷವೇ ಈ ಹುದ್ದೆಗಳ ನೇಮಕ ನಡೆಯಲಿದೆ.

ಬ್ಯಾಂಕುಗಳಲ್ಲಿ ಖಾಲಿ ಇರುವ 41,177 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ನಾನಾ ನೇಮಕಾತಿ ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿ ಪ್ರಕಟಿಸಿದೆ.

ಐಬಿಪಿಎಸ್ 12 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 11 ಬ್ಯಾಂಕ್ ಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.ಐಬಿಪಿಎಸ್ ದೇಶದ ವಿವಿಧ ಬ್ಯಾಂಕುಗಳಲ್ಲಿನ ಪ್ರೊಬೆಷನರಿ ಆಫೀಸರ್\ಮ್ಯಾನೇಜ್ ಮೆಂಟ್ ಟ್ರೇನಿ, ಕ್ಲರಿಕಲ್ ಕೇಡರ್ ನ ಹುದ್ದೆಗಳು ಹಾಗೂ ಸ್ಪೆಷಲಿಸ್ಟ್ ಆಫೀಸರ್ ನೇಮಕಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಿದೆ. ಅಲ್ಲದೇ ದೇಶದ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಆಫೀಸರ್ ಹಾಗೂ ಆಫೀಸರ್ ಅಸಿಸ್ಟೆಂಟ್ಸ್ ನೇಮಕಕ್ಕೂ ಪರೀಕ್ಷೆ ನಡೆಸಲಾಗುವುದು ಎಂದು ಐಬಿಪಿಎಸ್ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬೈ: ತೆಲುಗು ಸಿನಿಮಾ ಕಥೆಗಳಿಗೆ ಬಾಲಿವುಡ್​ ಮಂದಿ ಫಿದಾ ಆಗುತ್ತಿದ್ದಾರೆ.

Tue Feb 8 , 2022
ಮುಂಬೈ:ತೆಲುಗು ಸಿನಿಮಾ ಕಥೆಗಳಿಗೆ ಬಾಲಿವುಡ್​ ಮಂದಿ ಫಿದಾ ಆಗುತ್ತಿದ್ದಾರೆ. ಅಲ್ಲಿನ ಜನ ತೆಲುಗು ಸಿನಿಮಾಗಳನ್ನ ಇಷ್ಟ ಪಟ್ಟು ನೋಡ್ತಿದ್ದಾರೆ. ಅದರಿಂದಾಗಿ ಬಾಲಿವುಡ್​ ನಟರು ಸಹ ಈಗಟಾಲಿವುಡ್ ಸಿನಿಮಾಗಳ ಮೇಲೆ ಕಣ್ಣು ಇಟ್ಟಿದ್ದಾರೆ.​ಈಗಾಗಲೇ ಹಲವು ಸಿನಿಮಾಗಳನ್ನು ಬಾಲಿವುಡ್​ಗೆ ರಿಮೇಕ್​ ಮಾಡಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಗೆಲ್ಲೋಕೆ ಇದು ಸುಲಭ ತಂತ್ರ ಎಂಬುದನ್ನು ಬಾಲಿವುಡ್​ ನಿರ್ಮಾಪಕರು ಕಂಡುಕೊಂಡಿದ್ದಾರೆ. ಹೀಗಾಗಿ, ದಕ್ಷಿಣ ಭಾರತದ ಸೂಪರ್​ ಹಿಟ್​ ಚಿತ್ರಗಳನ್ನು ರಿಮೇಕ್​ ಮಾಡೋಕೆ ಅವರು […]

Advertisement

Wordpress Social Share Plugin powered by Ultimatelysocial