ವಾಹನ ಚಾಲಕರಿಗೆ ರಸ್ತೆ ಸಚಿವಾಲಯದಿಂದ ಗುಡ್ ನ್ಯೂಸ್

ವಾಹನ ಚಾಲಕರಿಗೆ ರಸ್ತೆ ಸಚಿವಾಲಯದಿಂದ ಗುಡ್ ನ್ಯೂಸ್: ಸುರಕ್ಷತೆಗೆ ನ್ಯಾವಿಗೇಷನ್ ಅಪ್ಲಿಕೇಶನ್ ಪ್ರಾರಂಭ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವಾಲಯ(MoRTH), ಐಐಟಿ ಮದ್ರಾಸ್ ಮತ್ತು ಡಿಜಿಟಲ್ ಟೆಕ್ ಕಂಪನಿ MapmyIndia ದೊಂದಿಗೆ ಚಾಲಕ ಮತ್ತು ರಸ್ತೆ ಸುರಕ್ಷತೆ ತಂತ್ರಜ್ಞಾನಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂರು ಸೇರಿ ನಾಗರಿಕರಿಗಾಗಿ ಉಚಿತವಾಗಿ ಬಳಸಲು ನ್ಯಾವಿಗೇಷನ್ ಅಪ್ಲಿಕೇಶನ್ ಪ್ರಾರಂಭಿಸಿವೆ.

ಇದು ರಸ್ತೆಯಲ್ಲಿರುವಾಗ ಮುಂಬರುವ ಅಪಘಾತ, ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಿದೆ.

ನ್ಯಾವಿಗೇಷನ್ ಅಪ್ಲಿಕೇಶನ್ ಸೇವೆಯು ಮುಂಬರುವ ಅಪಘಾತ ಪೀಡಿತ ವಲಯಗಳು, ಸ್ಪೀಡ್ ಬ್ರೇಕರ್‌ಗಳು, ತಿರುವುಗಳು ಮತ್ತು ಗುಂಡಿಗಳು ಸೇರಿ ಇತರ ಅಪಾಯಗಳ ಬಗ್ಗೆ ಚಾಲಕರಿಗೆ ಧ್ವನಿ ಮತ್ತು ದೃಶ್ಯ ಎಚ್ಚರಿಕೆಗಳನ್ನು ಒದಗಿಸುತ್ತದೆ. ದೇಶದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಅಪಘಾತಗಳು ಮತ್ತು ಸಾವು ನೋವು ಕಡಿಮೆ ಮಾಡಲು ರಸ್ತೆ ಸಾರಿಗೆ ಸಚಿವಾಲಯದ ಕೈಗೊಂಡ ಯೋಜನೆಯ ಒಂದು ಭಾಗ ಇದಾಗಿದೆ.

MaymyIndia ಅಭಿವೃದ್ಧಿಪಡಿಸಿದ ನ್ಯಾವಿಗೇಷನ್ ಸೇವಾ ಅಪ್ಲಿಕೇಶನ್, ‘MOVE’ 2020 ರಲ್ಲಿ ಸರ್ಕಾರದ ಆತ್ಮನಿರ್ಭರ್ ಆಯಪ್ ಇನ್ನೋವೇಶನ್ ಚಾಲೆಂಜ್ ಅನ್ನು ಗೆದ್ದಿದೆ. ಈ ಸೇವೆಯನ್ನು ನಾಗರಿಕರು ಮತ್ತು ಅಧಿಕಾರಿಗಳು ನಕ್ಷೆಯಲ್ಲಿ ಅಪಘಾತಗಳು, ಅಸುರಕ್ಷಿತ ಪ್ರದೇಶಗಳು, ರಸ್ತೆ ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ವರದಿ ಮಾಡಲು ಮತ್ತು ಪ್ರಸಾರ ಮಾಡಲು ಬಳಸಬಹುದು. ಇತರ ಬಳಕೆದಾರರಿಗೆ ಸಹಾಯ ಮಾಡಲು. ಡೇಟಾವನ್ನು IIT ಮದ್ರಾಸ್ ಮತ್ತು MapmyIndia ವಿಶ್ಲೇಷಿಸುತ್ತದೆ. ಭವಿಷ್ಯದಲ್ಲಿ ರಸ್ತೆ ಪರಿಸ್ಥಿತಿ ಸುಧಾರಿಸಲು ಸರ್ಕಾರವೂ ಬಳಸುತ್ತದೆ.

ಕಳೆದ ತಿಂಗಳು, ರಸ್ತೆ ಸಚಿವಾಲಯವು ವಿಶ್ವಬ್ಯಾಂಕ್‌ನಿಂದ ಧನಸಹಾಯದೊಂದಿಗೆ ಐಐಟಿ ಮದ್ರಾಸ್‌ನ ಸಂಶೋಧಕರು ರಚಿಸಿದ ಡೇಟಾ ಚಾಲಿತ ರಸ್ತೆ ಸುರಕ್ಷತೆ ಮಾದರಿಯನ್ನು ಅಧಿಕೃತವಾಗಿ ಅಳವಡಿಸಿಕೊಂಡಿದೆ. 32 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆಗಳನ್ನು ಸುರಕ್ಷಿತವಾಗಿಸಲು ಮತ್ತು ತುರ್ತು ಪ್ರತಿಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಲು ಸಂಸ್ಥೆಯು ಅಭಿವೃದ್ಧಿಪಡಿಸಿದ ಇಂಟಿಗ್ರೇಟೆಡ್ ರಸ್ತೆ ಅಪಘಾತ ಡೇಟಾಬೇಸ್ (iRAD) ಮಾದರಿಯನ್ನು ಬಳಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೀವಂತ ಇರುವವರನ್ನು ಮಾತನಾಡಿಸಿ, ನಾನು ಜೀವಂತ ಇಲ್ಲ: ರಮೇಶ್‌ ಕುಮಾರ್‌ ಬೇಸರ

Mon Dec 20 , 2021
ತಾವಾಡಿದ ಮಾತುಗಳು ರಾಷ್ಟ್ರಾದ್ಯಂತ ಪ್ರತಿಧ್ವನಿಸಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದಾರೆ. ಅವರ ಕೋಪ ಇನ್ನೂ ತಣ್ಣಿದಿಲ್ಲ.ಸುವರ್ಣಸೌಧಕ್ಕೆ ಬಂದ ಅವರನ್ನು ಎಂಇಎಸ್‌ ಪುಂಡಾಟಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು, ಮಾಧ್ಯಮಗಳ ಮುಂದೆ ಬಂದು ಅವರು ಕೈ ಮುಗಿದು ಒಳ ಹೋದರು.ಈ ಸಂದರ್ಭದಲ್ಲಿ ಅವರು ‘ ಜೀವಂತ ಇರುವವರನ್ನು ಮಾತನಾಡಿಸಿ, ನಾನು ಜೀವಂತ ಇಲ್ಲ. ನಾಲ್ಕುದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ’ […]

Advertisement

Wordpress Social Share Plugin powered by Ultimatelysocial