ದೆಹಲಿ : ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ : ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ವಶ!

 

 

2002ರ ಗೋಧ್ರಾ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಬಿಬಿಸಿಯ ದೆಹಲಿ ಕಚೇರಿ ಮೆಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಕಚೇರಿಯಲ್ಲಿ ಬಳಸಲಾಗುತ್ತಿದ್ದ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಮೂಲದ ಅತ್ಯಂತ ಜನಪ್ರಿಯ ಪ್ರಸಾರ ಸಂಸ್ಥೆಯಾಗಿರುವ ಬಿಬಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದ ವ್ಯವಹಾರದಲ್ಲಿ ಅಕ್ರಮ ಎಸಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

 

ಗೋಧ್ರಾ ಹತ್ಯಾಕಾಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ಸರಣಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಪ್ರಸಾರ ನಿಷೇಧಕ್ಕೆ ಕೇಂದ್ರ ಮುಂದಾಗಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ನಿಷೇಧಕ್ಕೆ ಸುಪ್ರೀಂಕೋರ್ಟ್ ಆಕ್ಷೇಪವ್ಯಕ್ತಪಡಿಸಿತ್ತು. ಯಾವುದೋ ಒಂದು ವರದಿಯಿಂದ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಬಿಬಿಸಿ ಪತ್ರಕರ್ತರನ್ನು ಕಚೇರಿಗೆ ಕರೆದೊಯ್ಯಲಾಗಿದ್ದು, ದಾಳಿ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚನೆ ನೀಡಲಾಗಿದೆ.

ಹಣದ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದೃಢಪಡಿಸಿಕೊಳ್ಳಲು ನಾವು ಪರಿಶೀಲನೆ ನಡೆಸಿದ್ಧೇವೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್‌ಐಸಿ ಕನ್ಯಾದಾನ್ ಪಾಲಿಸಿ: 121 ರೂ. ಪಾವತಿಸಿ, 27 ಲಕ್ಷ ರೂ ಪಡೆಯಿರಿ

Thu Feb 16 , 2023
ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ಸಮಾಜದ ಎಲ್ಲಾ ವರ್ಗಗಳಿಗೂ ಸರಿ ಹೊಂದುವ ಹಲವು ಯೋಜನೆಗಳನ್ನು ಹೊಂದಿದೆ. ಎಲ್‌ಐಸಿ ಪಾಲಿಸಿ ನಿಮ್ಮ ಎಲ್ಲಾ ಅಗತ್ಯ ಗಳನ್ನು ಪೂರೈಸುತ್ತದೆ ಎಂದರೆ ತಪ್ಪಾಗಲಾರದು. ಇವುಗಳಲ್ಲಿ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯವಾಗುವ ಪಾಲಿಸಿಗಳಿದ್ದು, ಇದರಿಂದಲೇ ಎಲ್‌ಐಸಿ ಪಾಲಿಸಿಗಳು ಜನಪ್ರಿಯವಾಗಿದೆ. ಮಕ್ಕಳ ವಿದ್ಯಾಭ್ಯಾಸ, ವಿವಾಹಕ್ಕಾಗಿಯೇ ವಿನ್ಯಾಸಗೊಳಿಸಿರುವಂತಹ ಹಲವು ಪಾಲಿಸಿಗಳಿವೆ. ಇಂತಹ ಪಾಲಿಸಿಗಳ ಪೈಕಿ “ಎಲ್‌ಐಸಿ ಕನ್ಯಾದಾನ” ಪಾಲಿಸಿಯೂ ಒಂದು. ಭಾರತದಲ್ಲಿ ಮದುವೆಯ ಬಜೆಟ್ ಸಾಮಾನ್ಯವಾಗಿ ಲಕ್ಷಗಟ್ಟಲೆ ಇರುತ್ತದೆ. […]

Advertisement

Wordpress Social Share Plugin powered by Ultimatelysocial