ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು- ಸಚಿವ ಬಿ.ಸಿ.ಪಾಟೀಲ್

ಯಾವುದೇ ಮಕ್ಕಳು ಕೋವಿಡ್‌ನಿಂದ ಭಯಪಡಬಾರದು. ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮೂರನೇ ಪರೀಕ್ಷೆ ಬರೆಯುತ್ತಿದ್ದು, ಹಿರೇಕೆರೂರಿನ ಕೆ.ಎಸ್.ಪಾಟೀಲ್ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಬೇಕು. ಒಂದುವೇಳೆ ವಿದ್ಯಾರ್ಥಿಗಳಲ್ಲಿ ಏನಾದರೂ ಆರೋಗ್ಯದ ಸಮಸ್ಯೆ ಕಂಡುಬAದಲ್ಲಿ ಮೇಲ್ವಿಚಾರಕರು ಅಧಿಕಾರಿಗಳ ಗಮನಕ್ಕೆ ತರಬೇಕು. ಮಕ್ಕಳು ಸಹ ಮೇಲ್ವಿಚಾರಕರಿಗೆ ತಿಳಿಸಬೇಕು. ವಿದ್ಯಾರ್ಥಿಗಳು ಅಂಜದೇ ಹೆದರದೇ ಧೈರ್ಯವಾಗಿ ಪರೀಕ್ಷೆ ಬರೆಯಬೇಕು. ಪರೀಕ್ಷೆ ಮುಗಿದ ಬಳಿಕ ಗುಂಪಾಗಿ ಓಡಾಡುವುದಾಗಲೀ ಒಂದೆಡೆ ಸೇರದೇ ನೇರವಾಗಿ ತಮ್ಮತಮ್ಮ ನಿವಾಸಗಳಿಗೆ ಅಥವಾ ತಂಗಿರುವ ಸ್ಥಳಗಳಿಗೆ ಸಾಮಾಜಿಕ ಅಂತರದಲ್ಲಿಯೇ ಸಾಗಬೇಕು. ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಮಕ್ಕಳ ಪರೀಕ್ಷೆಗೆ ಶುಭಕೋರಿದರು.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ತಡೆಗಟ್ಟಲು ಪೌರ ಕಾರ್ಮಿಕರ ಪಾತ್ರ ಅಪಾರ

Mon Jun 29 , 2020
ಕೆಳಮಟ್ಟದ ಕಾಯಿಲೇ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪೌರ ಕಾರ್ಮಿಕರ ಪಾತ್ರ ಅಪಾರ ಎಂದು ನಗರ ಸಭೆಯಾ ಆಯುಕ್ತ ಕಾಂತರಾಜು ಹೇಳಿದ್ದಾರೆ. ನಗರಸಭೆ ಆಯೋಜಿಸಿದ್ದ ಅರಸೀಕೆರೆ ತಾಲ್ಲೂಕು ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಪೌರ ಕಾರ್ಮಿಕರಿಗೆ ಎನರ್ಜಿ ಡ್ರಿಂಕ್ï ಮತ್ತು ಮಾಸ್ಕ್ ವಿತರಣಾ ಮಾಡಿ ಬಳಿಕ ಮಾತನಾಡಿ ಅವರು, ಪೌರ ಕಾರ್ಮಿಕರ ಸೇವೆ ಗುರತಿದ ರೆಡ್‌ಕ್ರಾಸ್ ಸಂಸ್ಥೆಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭ ದಲ್ಲಿ ತಾಲ್ಲೂಕು ಕಾರ್ಯನಿರತ […]

Advertisement

Wordpress Social Share Plugin powered by Ultimatelysocial