ತೆಲುಗು ಚಿತ್ರರಂಗದ ಖ್ಯಾತ ಪೊಷಕರ ನಟಿಯರಲ್ಲೊಬ್ಬರಾದ ಪ್ರಗತಿ ಶಾಕಿಂಗ್ ವಿಷಯವನ್ನು ಹೊರಹಾಕಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ, ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ. ಕಿರುತೆರೆಯಲ್ಲಿಯೂ ಹೆಸರು ಮಾಡಿರುವ ಪ್ರಗತಿ ದೊಡ್ಡ ಹಾಸ್ಯ ನಟರೊಬ್ಬರ ಮೇಲೆ ಅಪಾದನೆ ಹೊರಿಸಿದ್ದಾರೆ. ಪ್ರಗತಿ ಹೇಳಿರುವ ವಿಷಯ ಪ್ರಸ್ತುತ ಸಂಚಲನ ಸೃಷ್ಟಿಸಿದ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆ ಹಿರಿಯ ನಟ ಯಾರು ಎಂಬ ಚರ್ಚೆ ಆರಂಭವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತೆಲುಗು ಸಿನಿ ರಂಗದಲ್ಲಿ ಹೆಸರು ಮಾಡಿರುವ ಖ್ಯಾತ ಹಾಸ್ಯ ನಟ ನನ್ನೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸಿದ್ದರು. ಚಿತ್ರೀಕರಣ ನಡೆಯಬೇಕಾದರೆ ಒಮ್ಮೆ ಆತ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ, ಆತನ ಮಾತುಗಳೂ ಸಹ ಅಸಭ್ಯವಾಗಿತ್ತು. ಆತನ ನಡತೆ ಮೊದಲಿನಂತೆ ಇರಲಿಲ್ಲ. ಚಿತ್ರೀಕರಣ ಮುಗಿದ ಕೂಡಲೇ ಕ್ಯಾರಾವ್ಯಾನ್ ಗೆ ತೆರಳಿ, ನಿಮ್ಮ ಮಾತು, ನಿಮ್ಮ ವರ್ತನೆ ಸ್ವಲ್ಪವೂ ಸರಿಯಿಲ್ಲ, ಹೀಗೆ ಮಾಡಿದರೆ ಅದು ನಿಮ್ಮ ಘನತೆಗೆ ತಕ್ಕುದಾದುದಲ್ಲ, ಇನ್ನೊಮ್ಮೆ ನನ್ನ ಬಳಿ ಹೀಗೆ ವರ್ತಿಸಬೇಡಿ ಎಂದು ಎಚ್ಚರಿಕೆ ನೀಡಿದೆ. ಆ ಕ್ಷಣದಲ್ಲಿ ಅವರು ಮೌನವಾಗಿಬಿಟ್ಟರು. ಆ ಘಟನೆ ನಡೆದ ನಂತರ ಅದೇ ನಟ ನನ್ನ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳನ್ನು ಹರಡಲು ಪ್ರಾರಂಭಿಸಿದ. ಪ್ರಗತಿಗೆ ದುರಹಂಕಾರ, ಆಕೆಗೆ ನಟನೆ ಬರುವುದಿಲ್ಲ ಎಂದು ಏನೇನೋ ಸುದ್ದಿಗಳನ್ನು ಹರಡಿಸಿದ. ಪ್ರಗತಿ ಹೇಳುತ್ತಿರುವ ಆ ಸ್ಟಾರ್ ಕಾಮಿಡಿಯನ್ ಯಾರು ಎಂಬ ಚರ್ಚೆ ಈಗ ಪ್ರಾರಂಭವಾಗಿದೆ. ತೆಲುಗು ಚಿತ್ರರಂಗದಲ್ಲಿ ಹಲವರು ಸ್ಟಾರ್ ಕಾಮಿಡಿಯನ್ಗಳಿದ್ದಾರೆ. ಬ್ರಹ್ಮಾನಂದ್, ಆಲಿ, ದಿವಂಗತ ವೇಣುಗೋಪಾಲ್, ಸಪ್ತಗಿರಿ, ವೆನ್ನಿಲ ಕಿಶೋರ್ ಹೀಗೆ ಪಟ್ಟಿ ಬೆಳೆಯುತ್ತದೆ. ಇವರಲ್ಲಿ ಯಾರೆಂಬ ಕುತೂಹಲ ಮೂಡಿದೆ.
ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ ಹಾಸ್ಯನಟ…!
Please follow and like us: