ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ

 

ಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಂಬೈ ಪೊಲೀಸರು ನ್ಯಾಯಾಲಯಕ್ಕೆ 524 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಆರೋಪಿ ಶೆಜಾನ್ ಖಾನ್ ಹಾಗೂ ನಟಿ ತುನಿಶಾ ಶರ್ಮಾ ನಡುವಿನ ವಾಟ್ಸಾಪ್ ಚಾಟ್ ಸೇರಿದಂತೆ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ.

 

ತುನಿಶಾ ಶರ್ಮಾ ಜೊತೆಗೆ ಅಭಿನಯಿಸಿದ್ದ ಸಹ ನಟರು ಸೇರಿದಂತೆ ಒಟ್ಟು 31 ಮಂದಿಯನ್ನು ಸಾಕ್ಷಿಯನ್ನಾಗಿ ಪೊಲೀಸರು ಪ್ರಸ್ತಾಪಿಸಿದ್ದು, ತುನಿಶಾ ಶರ್ಮಾ ಹಾಗೂ ಶೆಜಾನ್ ಖಾನ್ ನಡುವೆ ಹತ್ತು ನಿಮಿಷಗಳ ಕಾಲ ನಡೆದಿದ್ದ ಮೊಬೈಲ್ ಸಂಭಾಷಣೆ ಕುರಿತೂ ಮಾಹಿತಿ ನೀಡಿದ್ದಾರೆ. ಇದಾದ ಬಳಿಕವೇ ತುನಿಶಾ ಶರ್ಮಾ ಆತ್ಮಹತ್ಯೆ ನಿರ್ಧಾರ ಕೈಗೊಂಡರೆಂದು ಹೇಳಲಾಗಿದೆ.

ಡಿಸೆಂಬರ್ 24, 2022 ರಂದು ನಟಿ ತುನಿಶಾ ಶರ್ಮಾ ಮೇಕಪ್ ರೂಮಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಪುತ್ರಿಯ ಸಾವಿಗೆ ನಟ ಶೆಜಾನ್ ಖಾನ್ ಕಾರಣ ಎಂದು ಆಕೆಯ ತಾಯಿ ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಶೆಜಾನ್ ನನ್ನು ಬಂಧಿಸಿದ್ದ ಪೊಲೀಸರು ಇದೀಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮೀನ ರಾಶಿ ಭವಿಷ್ಯ.

Mon Feb 20 , 2023
ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ವ್ಯಾಪರದಲ್ಲಿ ಪ್ರಯೋಜನ ಇಂದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು. ನಿಮ್ಮ ಮನೆಯ ಪರಿಸರದಲ್ಲಿ ಒಳ್ಳೆಯ ಬದಲಾವಣೆಗಳನ್ನು ಮಾಡುತ್ತೀರಿ. ಇಂದು, ನೀವು ಮತ್ತು ನಿಮ್ಮ ಪ್ರೀತಿ ಸಂಗಾತಿ ಪ್ರೀತಿಯ ಸಾಗರದಲ್ಲಿ ತೇಲುತ್ತೀರಿ ಮತ್ತು ಪ್ರೀತಿಯ ಔನ್ನತ್ಯವನ್ನು ಅನುಭವಿಸುತ್ತೀರಿ. ಇಂದು ವಿಶ್ರಾಂತಿ ಪಡೆಯಲು ಸಮಯವಿಲ್ಲ ಬಾಕಿಯಿರುವ ಕೆಲಸಗಳು ನಿಮ್ಮನ್ನು ವ್ಯಸ್ತವಾಗಿಡುತ್ತವೆ. ಜನರು ನಿಮ್ಮ ಮನೆಯ ಬಗ್ಗೆ ಏನು ಯೋಚಿಸುತ್ತಾರೆ […]

Advertisement

Wordpress Social Share Plugin powered by Ultimatelysocial