ನಿದ್ದೆಗೆ ರಾಮಬಾಣ ಏನ್ ಗೋತ್ತ? ಒಮ್ಮೆ ಟೈ ಮಾಡಿ

ಟೀ ಕುಡಿಯೋದ್ರಿಂದ ತಲೆನೋವು ಹೋಗುತ್ತೆ, ರಿಲ್ಯಾಕ್ಸ್ ಆಗುತ್ತೆ ಅನ್ನೋ ಕಾರಣಕ್ಕಾಗಿ ಹಲವರು ಚಹಾ ಕುಡಿಯವುದನ್ನು ರೂಢಿ ಮಾಡಿಕೊಂಡಿರುತ್ತಾರೆ.
ಟೀಯಲ್ಲಿ ಮಿಲ್ಕ್ ಟೀ, ಜಿಂಜರ್ ಟೀ, ಮಸಾಲೆ ಟೀ, ಬ್ಲ್ಯಾಕ್ ಟೀ ಎಂದು ಹಲವು ವೆರೈಟಿ ಸಹ ಇರುವ ಕಾರಣ ಇಷ್ಟವಿರುವುದನ್ನು ತಯಾರಿಸಿ ಕುಡಿಯಲು ಸಾಧ್ಯವಾಗುತ್ತದೆ. ಇವಿಷ್ಟೇ ಅಲ್ಲದೆ ಇಲ್ಲೊಂದು ಸ್ಪೆಷಲ್ ಟೀ ಇದೆ. ಅದುವೇ ಮುಲ್ಲೀನ್ ಟೀ. ಇದನ್ನು ಕುಡಿಯೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.
ಮುಲ್ಲೀನ್ ಟೀ ತಯಾರಿಸಲು ಮೊದಲಿಗೆ, 1.5 ಕಪ್ ನೀರನ್ನು ಕುದಿಸಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀ ಚಮಚ ಒಣಗಿದ ಮುಲ್ಲೀನ್ ಟೀ ಎಲೆಗಳನ್ನು ಸೇರಿಸಿ 10-15 ನಿಮಿಷಗಳ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಇದನ್ನು ಸೋಸಿಕೊಂಡು 1 ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿಯಬೇಕು. ಮುಲ್ಲೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಉಸಿರಾಟ
ಮುಲ್ಲೀನ್ ಚಹಾ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಮುಖ್ಯವಾಗಿ ಈ ಮುಲ್ಲೀನ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಮುಲ್ಲೀನ್ ಟೀಯ ಸೇವನೆ ಶೀತ, ಕೆಮ್ಮು ಮತ್ತು ಬ್ರಾಂಕೈಟಿಸ್ನಂತಹ ಉಸಿರಾಟದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ಅಸ್ತಮಾ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ.
ಒತ್ತಡ
ದಿನಕ್ಕೆ ಎರಡು ಕಪ್ಗಳಷ್ಟು ಮುಲ್ಲೀನ್ ಟೀ ಸೇವಿಸುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ಈ ಚಹಾ ಸೇವನೆ ನಿದ್ದೆ ಯ ಸಮಸ್ಯೆಯನ್ನು ಸಹ ಸುಧಾರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ನೈಸರ್ಗಿಕ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ.
ಜೀರ್ಣಕ್ರಿಯೆ
ತಜ್ಞರ ಪ್ರಕಾರ, ಊಟದ ನಂತರ ಮುಲ್ಲೀನ್ ಚಹಾವನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅತಿಸಾರ ಮತ್ತು ಮಲಬದ್ಧತೆ ಸಮಸ್ಯೆಯನ್ನು ಶಮನಗೊಳಿಸುತ್ತದೆ.
ಚರ್ಮ
ಮುಲ್ಲೀನ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಇದು ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ಮುಖದಲ್ಲಿ ಉಂಟಾಗುವ ಗುಳ್ಳೆಗಳು, ಗಾಯಗಳು ಮತ್ತು ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಲಿತ ಪರ ಸಂಘಟನೆಗಳಿಂದ ಬಸವಕಲ್ಯಾಣ ನಗರದಲ್ಲಿ ಪ್ರತಿಭಟನೆ.

Sat Jan 29 , 2022
ಡಾ.ಬಿ.ಆರ್ ಅಂಬೆಡ್ಕರ್ ಅವರ ಭಾವಚಿತ್ರಕ್ಕೆ ಹಾಗು ಸಂವಿಧಾನಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾದಿಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಬಸವಕಲ್ಯಾಣ ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು..ಪ್ರತಿಭಟನೆ ವೆಳೆ ಮಲ್ಲಿಕಾರ್ಜುನ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಭಟನೆ ಮಾಡಿದರು.. ಮಾತನಾಡಿದ ಪ್ರತಿಭಟನಾಕಾರರು ಕೂಡಲೆ ರಾಜ್ಯ ಸರ್ಕಾರ ಮಲ್ಲಿಕಾರ್ಜುನ ಗೌಡ ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಿ ಬಂಧನ ಮಾಡಬೆಕು.ನ್ಯಾಯ ಸ್ಥಾನದಲ್ಲಿ ನಿಂತು ಕಾನೂನು ಕಾಪಾಡುವವರೆ […]

Advertisement

Wordpress Social Share Plugin powered by Ultimatelysocial