ಪಶ್ಚಿಮ ಬಂಗಾಳ: ಆಸ್ಪತ್ರೆಯಲ್ಲಿ ಬೆಂಕಿ, ಕೋವಿಡ್ ರೋಗಿ ಸಾವು

ಬರ್ದ್ವಾನ್: ಪಶ್ಚಿಮ ಬಂಗಾಳದ ಬರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡು, ಕೋವಿಡ್ ರೋಗಿಯೊಬ್ಬರು ಮೃತಪಟ್ಟಿದ್ದಾರೆ.ಮೃತ ರೋಗಿಯನ್ನು ಸಂಧ್ಯಾ ರಾಯ್ ( 60) ಎಂದು ಗುರುತಿಸಲಾಗಿದೆ.ಇವರು ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ವಾರ್ಡ್ ನಲ್ಲಿ ಬೆಳಗ್ಗೆ 4 ಗಂಟೆ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಇತರ ರೋಗಿಗಳನ್ನು ಬೇರೆ ವಾರ್ಡ್ ಗಳಿಗೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಯಿತು. ಅಗ್ನಿಶಾಮಕ ಸಿಬ್ಬಂದಿ ಆಸ್ಪತ್ರೆಗೆ ಬರುವ ಮುನ್ನವೇ ಆಸ್ಪತ್ರೆಯಲ್ಲಿನ ಸಿಬ್ಬಂದಿಯೇ ಬೆಂಕಿ ನಂದಿಸಿದ್ದಾಗಿ ತಿಳಿದುಬಂದಿದೆ.ಆಸ್ಪತ್ರೆಯಲ್ಲಿ ಬೆಂಕಿಯಿಂದಾದ ಹಾನಿ ಕುರಿತ ತನಿಖೆಗಾಗಿ ಐವರು ಸದಸ್ಯರನ್ನೊಳಗೊಂಡ ತಂಡವೊಂದನ್ನು ರಚಿಸಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕ ತಪಸ್ ಕುಮಾರ್ ಘೋಷ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

TEAM INDIA:ರೋಹಿತ್ ಶರ್ಮಾ ನಾಯಕನಾಗುತ್ತಿದ್ದಂತೇ,ಸ್ಪಿನ್ನರ್ ಕುಲದೀಪ್ ಯಾದವ್ ಈಗ ಕಮ್ ಬ್ಯಾಕ್;

Sat Jan 29 , 2022
 ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಹೆಣಗಾಡುತ್ತಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಈಗ ಕಮ್ ಬ್ಯಾಕ್ ಮಾಡಿದ್ದಾರೆ. ರೋಹಿತ್ ಶರ್ಮಾ ಟೀಂ ಇಂಡಿಯಾಗೆ ನಾಯಕರಾಗುತ್ತಿದ್ದಂತೇ ರಿಸ್ಟೀ ಸ್ಪಿನ್ನರ್ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ಮತ್ತೆ ಟೀಂ ಇಂಡಿಯಾದಲ್ಲಿ ಕುಲ್-ಚಾ (ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್) ಜೋಡಿಯ ಯುಗ ಆರಂಭವಾಗಿದೆ. ಕುಲದೀಪ್ ಯಾದವ್ ತಂಡಕ್ಕೆ ಪುನರಾಗಮನವಾದ ಸುದ್ದಿ ಕೇಳುತ್ತಿದ್ದಂತೇ ಟೀಂ ಇಂಡಿಯಾ ಫ್ಯಾನ್ಸ್ ವಿವಿಧ ಮೆಮೆಗಳ ಮೂಲಕ ತಮಾಷೆ ಮಾಡಿದ್ದಾರೆ. ತಂಡದಿಂದ ತಮ್ಮನ್ನು […]

Advertisement

Wordpress Social Share Plugin powered by Ultimatelysocial