TEAM INDIA:ರೋಹಿತ್ ಶರ್ಮಾ ನಾಯಕನಾಗುತ್ತಿದ್ದಂತೇ,ಸ್ಪಿನ್ನರ್ ಕುಲದೀಪ್ ಯಾದವ್ ಈಗ ಕಮ್ ಬ್ಯಾಕ್;

 ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಹೆಣಗಾಡುತ್ತಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಈಗ ಕಮ್ ಬ್ಯಾಕ್ ಮಾಡಿದ್ದಾರೆ.

ರೋಹಿತ್ ಶರ್ಮಾ ಟೀಂ ಇಂಡಿಯಾಗೆ ನಾಯಕರಾಗುತ್ತಿದ್ದಂತೇ ರಿಸ್ಟೀ ಸ್ಪಿನ್ನರ್ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ಮತ್ತೆ ಟೀಂ ಇಂಡಿಯಾದಲ್ಲಿ ಕುಲ್-ಚಾ (ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್) ಜೋಡಿಯ ಯುಗ ಆರಂಭವಾಗಿದೆ.
ಕುಲದೀಪ್ ಯಾದವ್ ತಂಡಕ್ಕೆ ಪುನರಾಗಮನವಾದ ಸುದ್ದಿ ಕೇಳುತ್ತಿದ್ದಂತೇ ಟೀಂ ಇಂಡಿಯಾ ಫ್ಯಾನ್ಸ್ ವಿವಿಧ ಮೆಮೆಗಳ ಮೂಲಕ ತಮಾಷೆ ಮಾಡಿದ್ದಾರೆ. ತಂಡದಿಂದ ತಮ್ಮನ್ನು ಹೊರಗಿಟ್ಟಿದ್ದಕ್ಕೆ ಕುಲದೀಪ್ ತೀವ್ರ ಬೇಸರಗೊಂಡಿದ್ದರು. ಈ ಬಗ್ಗೆ ಹಲವು ಬಾರಿ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಈಗ ತಂಡಕ್ಕೆ ವಾಪಸಾತಿಯಾಗಿದ್ದು, ಮತ್ತೆ ಸ್ಥಾನ ಖಚಿತಪಡಿಸಿಕೊಳ್ಳಲು ಅವಕಾಶವೊಂದು ಸಿಕ್ಕಂತಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL:ಐಪಿಎಲ್ ಜರ್ನಿಗೆ ಗುಡ್ ಬೈ ಹೇಳಿದ ಎಂ.ಎಸ್.ಧೋನಿ;

Sat Jan 29 , 2022
ಮಿಸ್ಟರ್ ಕೂಲ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥಿ ಎಂ.ಎಸ್.ಧೋನಿ ಸಿಎಸ್ ಕೆ ತಂಡಕ್ಕೆ ಗುಡ್ ಬೈ ಹೇಳಿ ಐಪಿಎಲ್ ಜರ್ನಿಗೆ ಪೂರ್ಣ ವಿರಾಮ ಇಡಲಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವರ್ಷದ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ರಿಟೈನ್ಡ್ ಪ್ಲೇಯರ್ಸ್ ಭಾಗವಾಗಿ ರವೀಂದ್ರ ಜಡೇಜಾಗಾಗಿ ಧೋನಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದು, ಈ ಸೀಜನ್ ನಂತರ ಧೋನಿ ಐಪಿಎಲ್ ಗೆ ಬೈ ಬೈ ಹೇಳಿದ್ದಾರೆ ಅನ್ನೋ ವಾರ್ತೆಗಳಿಗೆ […]

Advertisement

Wordpress Social Share Plugin powered by Ultimatelysocial