IPL:ಐಪಿಎಲ್ ಜರ್ನಿಗೆ ಗುಡ್ ಬೈ ಹೇಳಿದ ಎಂ.ಎಸ್.ಧೋನಿ;

ಮಿಸ್ಟರ್ ಕೂಲ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥಿ ಎಂ.ಎಸ್.ಧೋನಿ ಸಿಎಸ್ ಕೆ ತಂಡಕ್ಕೆ ಗುಡ್ ಬೈ ಹೇಳಿ ಐಪಿಎಲ್ ಜರ್ನಿಗೆ ಪೂರ್ಣ ವಿರಾಮ ಇಡಲಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವರ್ಷದ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ರಿಟೈನ್ಡ್ ಪ್ಲೇಯರ್ಸ್ ಭಾಗವಾಗಿ ರವೀಂದ್ರ ಜಡೇಜಾಗಾಗಿ ಧೋನಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದು, ಈ ಸೀಜನ್ ನಂತರ ಧೋನಿ ಐಪಿಎಲ್ ಗೆ ಬೈ ಬೈ ಹೇಳಿದ್ದಾರೆ ಅನ್ನೋ ವಾರ್ತೆಗಳಿಗೆ ಪುಷ್ಠಿ ನೀಡಿವೆ.

ಕ್ಯಾಪ್ಟನ್ ಆಗಿ ತನ್ನ ಉತ್ತರಾಧಿಕಾರಿಯಾಗಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಜಡೇಜಾಗೆ ಇದೆ ಎಂದು ಭಾವಿಸಿರುವ ಧೋನಿ, ಅವರಿಗೇ ತಂಡದ ಸಾರಥ್ಯ ವಹಿಸುವ ಯೋಜನೆಯಲ್ಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಇದಕ್ಕಾಗಿ ಫ್ರಾಂಚೈಸಿ ಜೊತೆ ಧೋನಿ ಮಾತನಾಡಿದ್ದಾರಂತೆ.

ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನು ಉಂಟು ಮಾಡಿದೆ. ಯಾಕಂದರೇ ಚೆನ್ನೈ ತಂಡಕ್ಕೆ ಈ ಪಾಟಿ ಕ್ರೇಜ್ ಬರಲು ಧೋನಿಯೇ ಕಾರಣ. ಇಂಡಿಯನ್ ಪ್ರಿಮಿಯರ್ ಲೀಗ್ ಶುರುವಾದಾಗಿನಿಂದಲೂ ಧೋನಿ ಸಿಎಸ್ ಕೆ ತಂಡದ ಭಾಗವಾಗಿದ್ದಾರೆ.

ಎಲ್ಲಾ ಸೀಸಲ್ ಗಳಲ್ಲೂ ತಂಡವನ್ನು ಮುನ್ನಡೆಸಿರುವ ಧೋನಿ ನಾಲ್ಕು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.

ಒಂಭತ್ತು ಬಾರಿ ತಂಡವನ್ನು ಅಂತಿಮ ಹಂತಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದಲ್ಲದೇ ಐಪಿಎಲ್ ಉಳಿದ ತಂಡಗಳಿಗೆ ಹೋಲಿಕೆ ಮಾಡಿದ್ರೆ, ಚೆನ್ನೈ ತಂಡದ ಗೆಲುವಿನ ಸರಾಸರಿ ಕೂಡ ಹೆಚ್ಚಾಗಿದೆ. ಹೀಗಾಗಿಯೇ ಚೆನ್ನೈ ತಂಡಕ್ಕೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ.

ಆದ್ರೆ ಧೋನಿ ಭವಿಷ್ಯದ ಕಾರಣಕ್ಕಾಗಿ ಚೆನ್ನೈ ತಂಡದ ಸಾರಥ್ಯವನ್ನು ಜಡೇಜಾಗೆ ನೀಡಲಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ.

ಆದರೆ CSK ಅಧಿಕಾರಿಗಳು ಈ ವಾದವನ್ನು ತಳ್ಳಿ ಹಾಕಿದ್ದಾರೆ. ಈ ಸೀಸಲ್ ನಲ್ಲಿ ಧೋನಿಯೇ ನಮ್ಮ ಕ್ಯಾಪ್ಟನ್ ಎಂದಿದ್ದಾರೆ. ಅಸಲಿಗೆ ಕ್ಯಾಪ್ಟನ್ಸಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸಮಯ ಎಲ್ಲವೂ ಒಂದೊಂದಾಗಿ ನಡೆಯುತ್ತದೆ. ಸದ್ಯಕ್ಕೆ ಧೋನಿಯೇ ನಮ್ಮ ನಾಯಕ.

ಅವರು ತಂಡಕ್ಕಾಗಿ ತುಂಬಾ ಮಾಡಿದ್ದಾರೆ. ಅವರು ಬಯಸಿದಾಗ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ತಿಳಿಸಿದ್ದಾರೆ. ಇದಲ್ಲದೇ ದೋನಿ ನಿರ್ಣಯಗಳನ್ನು ಯಾರು ಅಂದಾಜಿಸಲು ಸಾಧ್ಯವಿಲ್ಲ. ಜಡೇಜಾಗೋಸ್ಕರ ರಿಟೈನ್ಷನ್ ನಲ್ಲಿ ತಮ್ಮ ಪ್ರಾಧಾನ್ಯವನ್ನ ತಗ್ಗಿಸಿಕೊಂಡಿದ್ದಾರೆ. ಅವರಿನ್ನೂ ಫಿಟ್ ಆಗಿದ್ದಾರೆ. ನಮಗೆ ಇನ್ನೊಂದು ಟೈಟಲ್ ತಂದುಕೊಡುತ್ತಾರೆ ಎಂದು ಸಿಎಸ್ ಕೆ ತಂಡದ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗಳನ್ನೆ ದಾನ ಮಾಡಿದ ತಂದೆ‌; ಹೆಣ್ಣು ಆಸ್ತಿಯಲ್ಲ ಎಂದ ಬಾಂಬೆ ಹೈಕೋರ್ಟ್..!

Sat Jan 29 , 2022
ಹೆಣ್ಣು ಮಗುವನ್ನ ದೇಣಿಗೆ ನೀಡಲು ಆಕೆ ಯಾವುದೇ ಆಸ್ತಿಯಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಅಭಿಪ್ರಾಯಪಟ್ಟಿದ್ದು, ವ್ಯಕ್ತಿಯೊಬ್ಬ ತನ್ನ 17 ವರ್ಷದ ಮಗಳನ್ನು ‘ದಾನ’ದಲ್ಲಿ ನೀಡಿದ್ದ ಪ್ರಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಸ್ವಯಂಘೋಷಿತ ದೇವಮಾನವ ಶಂಕೇಶ್ವರ ಢಕ್ನೆ ಮತ್ತು ಆತನ ಶಿಷ್ಯ ಸೋಪಾನ್ ಧಾಂಕೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ವಿಭಾ ಕಂಕಣವಾಡಿ ಅವರ ಏಕ ಪೀಠ […]

Advertisement

Wordpress Social Share Plugin powered by Ultimatelysocial