ಶಾಲಿನಿ ಮೂರ್ತಿ ಬರಹಗಾರ್ತಿ, ಕಥಾವಾಚಕಿ.

 

ಜನವರಿ 22, ಶಾಲಿನಿ ಅವರ ಜನ್ಮದಿನ. ಉಡುಪಿಯವರಾದ ಅವರು ಪ್ರಸಕ್ತದಲ್ಲಿ ಬೆಂಗಳೂರು ನಿವಾಸಿ.
ಶಾಲಿನಿ ಮೂರ್ತಿ ಅವರು ಉದ್ಯಮಗಳಲ್ಲಿ ಪಾಲುಗಾರ್ತಿಯಾಗಿ ಹೆಲ್ತ್‌ಕೇರ್, ಅಗ್ರಿಟೆಕ್ ಉಕರಣಗಳು, ಜಲನಿರ್ವಹಣಾ ‌ಉಪಕರಣಗಳು ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಂತಾದ ಹಲವು ತಂತ್ರಜ್ಞಾನ ಉತ್ಪಾದನೆ ಮತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಪಾತ್ರವಹಿಸಿದ್ದವರು. ಅವರು 12 ವರ್ಷಗಳ ಕಾಲ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಉದ್ಯಮಗಳ ಸಂಘದ ಟ್ರಸ್ಟಿಯಾಗಿದ್ದರು. ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗಳು ಇವರ ಆ ಜವಾಬ್ದಾರಿ ನಿರ್ವಹಣೆಯ ಕ್ಷೇತ್ರವಾಗಿತ್ತು.
ಹಲವಾರು ವಲಯಗಳಲ್ಲಿ “ಹಸಿರು ಮಹಿಳೆ” ಎಂದು ಪ್ರಸಿದ್ಧರಾದ ಶಾಲಿನಿ ಮೂರ್ತಿ ಅವರು ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸುತ್ತಮುತ್ತ 15,000 ಮರಗಳನ್ನು ನೆಡುವ ಜವಾಬ್ದಾರಿಯನ್ನು ನಿರ್ವಹಿಸಿದವರು. ಪರಿಸರ, ಮಾನವತೆಯ ಸಹಾನುಭೂತಿ ಮತ್ತು ಶುಚಿತ್ವದ ಆದರ್ಶಗಳೊಂದಿಗೆ ಹೊಂದಿಕೆಯಾಗುವ ಯಾವುದೇ ಚಟುವಟಿಕೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಳ್ಳುವುದು ಇವರಲ್ಲಿನ ಸದಾಶಯ.
ಪಾಕತಜ್ಞೆಯಾದ ಶಾಲಿನಿ ಮೂರ್ತಿ ಅವರಿಗೆ, ತಮ್ಮಲ್ಲಿನ ಪಾಕಪ್ರೀತಿ ಮತ್ತು ತಮ್ಮ ಊರಾದ ಕರಾವಳಿ ಪ್ರದೇಶದ ಉಡುಪಿಯ ಮೇಲಿನ ಪ್ರೀತಿ ‘ಬಾಳ್ಗಾ’ ಎಂಬ ನವ ಅತಿಥಿ ಸತ್ಕಾರ ಯೋಜನೆಯನ್ನು ರೂಪಿಸಲು ಪ್ರೇರಿಸಿತು. ಇದು ಅನೇಕ ಸಮೂಹಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಶಾಲಿನಿ ಮೂರ್ತಿ ಅವರ ಬರಹಗಳಲ್ಲಿ ಪ್ರಕೃತಿ ಪ್ರೇಮಕ್ಕೆ ಆದ್ಯಸ್ಥಾನ. ಪ್ರಕೃತಿ ಪ್ರೇಮ, ಪ್ರವಾಸ ಹಾಗೂ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತಾದ ಅವರ ಬರಹಗಳು ನಿರಂತರ ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಮೂಡಿಬರುತ್ತಿವೆ. ‘ಅಜಾತಶತ್ರು’ ಎಂಬುದು ಅವರು ದಿವಂಗತ ಡಾ ಯು ಚಿತ್ತರಂಜನ್ ಅವರ ಮೇಲೆ ಮೂಡಿಸಿರುವ ಕೃತಿ.
ಶಾಲಿನಿ ಮೂರ್ತಿ ಅವರು ತಾವು ರೂಪಿಸಿರುವ ‘ಶಾಲಿನಿ ಆಂಟಿಯ ಕಥಾತೋರಣ’ ಯೂಟ್ಯೂಬ್ ವಿಡಿಯೋ ಸರಮಾಲೆಯಲ್ಲಿ ವಿಶೇಷವಾಗಿ ಮಕ್ಕಳನ್ನು ಮನದಲ್ಲಿಟ್ಟು ಅನೇಕ ಕಥಾನಕಗಳನ್ನು ರೂಪಿಸಿ ಪ್ರಸ್ತುತಪಡಿಸುತ್ತ ಬಂದಿದ್ದಾರೆ. ಅವು ಪುಸ್ತಕಗಳಾಗಿಯೂ ಮೂಡಿ ಜನಪ್ರಿಯಗೊಂಡಿವೆ.
ಶಾಲಿನಿ ಮೂರ್ತಿ ಅವರು ‘ಕಥೆಗಳ ತೋರಣ’ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಪುಸ್ತಕ ಬಹುಮಾನವಲ್ಲದೆ ಅನೇಕ ಸಂಘ ಸಂಸ್ಥೆಗಳ ಗೌರವಗಳು ಇವರಿಗೆ ಸಂದಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಥಿಚ್ ನಾತ್ ಹಾನ್ ಒಬ್ಬ ಸಮೃದ್ಧ ಲೇಖಕ ಮತ್ತು ಶಾಂತಿ ಕಾರ್ಯಕರ್ತರಾಗಿದ್ದರು.

Sun Jan 22 , 2023
  Mindfulness ಎಂಬುದು ಇಂದಿನ ಯುಗದ ಪ್ರಖ್ಯಾತ ನುಡಿ. ಅರಿವು, ಜಾಗೃತಿ,‍ ಧ್ಯಾನ, ಮೆಡಿಟೇಷನ್, ಝೆನ್, ಸಾವಧಾನ ಇತ್ಯಾದಿಗಳ ಸಮೀಪದ – ಒಂದು ಸ್ವರೂಪದ ಚಿಂತನೆ ಇದೆಂದು ಹೇಳಬಹುದೇನೊ! ಆದರೆ ಸಿಹಿ ಎಂಬುದು ಪದವಲ್ಲ, ಅದೊಂದು ಅನುಭವ. ಅಂತೆಯೇ mindfulness ಎಂಬುದು ಕೂಡಾ ಅನುಭವದ ಸ್ಥಿತಿ. ಪದವಲ್ಲ. ಅನುಭವಿಗಳ ಅನುಭವ ಮಾತ್ರಾ ಅದನ್ನು ಬಲ್ಲದು. ನಾವು ಹೇಳುವುದು ಪದ ಮಾತ್ರಾ. ವಿಶ್ವದಲ್ಲಿ ಅನೇಕ ಜನ mindfulness ಅನುಭವದ ಪ್ರಯೋಜನ ಪಡೆದಿದ್ದಾರೆ. […]

Advertisement

Wordpress Social Share Plugin powered by Ultimatelysocial