ಪುಷ್ಪ-2 ಸಿನಿಮಾ ಕಿರುತಾರೆ​ ಡೇಟ್​ ಫಿಕ್ಸ್​!

ಹೈದರಾಬಾದ್​:ಪುಷ್ಪ’ ಸಿನಿಮಾ ಅಲ್ಲು ಅರ್ಜುನ್​ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಕೊಟ್ಟಿದೆ. ಅವರು ಊಹಿಸದ ರೀತಿಯಲ್ಲಿ ಈ ಸಿನಿಮಾ ಕಲೆಕ್ಷನ್​ ಮಾಡಿದೆ. ಅದರಲ್ಲೂ ಬಾಲಿವುಡ್​ ಒಂದರಲ್ಲೇ ಈ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ.ಇದರಿಂದ ಚಿತ್ರತಂಡಕ್ಕೆ ಹೊಸ ಹುರುಪು ಸಿಕ್ಕಿದೆ. ‘ಪುಷ್ಪ 2’ ಚಿತ್ರವನ್ನೂ ಹೆಚ್ಚು ಕಾಳಜಿ ವಹಿಸಿ ಶೂಟ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಈಗ ಈ ಚಿತ್ರದ ರಿಲೀಸ್​ ಡೇಟ್​ ಬಗ್ಗೆ ಹೊಸ ಅಪ್​ಡೇಟ್​ ಒಂದು ಕೇಳಿ ಬರುತ್ತಿದೆ. ‘ಪುಷ್ಪ ಪಾರ್ಟ್​ 1’ ಚಿತ್ರ 2021ರ ಡಿಸೆಂಬರ್ 17ಕ್ಕೆ ಬಿಡುಗಡೆ ಆಗಿ ಯಶಸ್ವಿ ಆಯಿತು. ಈಗ ಮತ್ತೆ ಡಿಸೆಂಬರ್​ 17ರ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ. ಅಂದರೆ, 2022ರ ಡಿಸೆಂಬರ್​ 17ರಂದು ಎರಡನೇ ಪಾರ್ಟ್​ ರಿಲೀಸ್​ ಮಾಡಲು ಪ್ಲ್ಯಾನ್​ ರೂಪಿಸಿದೆ ಎಂಬ ಮಾತುಗಳು ಕೇಳಿಬಂದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಈಗಾಗಲೇ ಪುಷ್ಪ ಪಾರ್ಟ್​-2 ಸಹ ಸ್ವಲ್ಪ ಭಾಗ ಸಿನಿಮಾ ಶೂಟಿಂಗ್​ ಆಗಿದ್ದು ಅದರ ಜೊತೆಗೆ ಉಳಿದ ಎಲ್ಲಾ ಭಾಗವನ್ನೂ ಆದಷಚ್ಟು ಬೇಗ ಶೂಟ್​ ಮಾಡಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ. ಸಿನಿಮಾವನ್ನು 2022ರ ಡಿಸೆಂಬರ್​ನಲ್ಲೇ ತೆರೆಗೆ ತರಲು ಪ್ಲ್ಯಾನ್​ ರೂಪಿಸಿದ್ದು ಹೌದಾದಲ್ಲಿ ಸಿನಿಮಾ ತಂಡಕ್ಕೆ ಉಳಿದಿದ್ದು ಕೇವಲ 10 ತಿಂಗಳು ಮಾತ್ರ. ಆ ಹತ್ತು ತಿಂಗಳಲ್ಲಿ ಶೂಟಿಂಗ್​ ಪೂರ್ಣಗೊಳ್ಳಬೇಕು. ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಮುಗಿಯಬೇಕು. ಇದರ ಜತೆಗೆ ಪ್ರಚಾರದ ಕಾರ್ಯ ಕೂಡ ನಡೆಯಬೇಕು. ಇದು ಚಿತ್ರತಂಡದ ಪಾಲಿಗೆ ನಿಜಕ್ಕೂ ಚಾಲೆಂಜಿಂಗ್​. ಇದನ್ನು ಚಿತ್ರತಂಡ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡ :ಆಕಸ್ಮಿಕ ಬೆಂಕಿ ತಗುಲಿ 11 ರೈತರಿಗೆ ಸೇರಿದ ಹತ್ತಾರು ಎಕರೆಯಲ್ಲಿದ್ದ ಕಬ್ಬು ಬೆಂಕಿಗಾಹುತಿ

Wed Feb 2 , 2022
ಧಾರವಾಡ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಬಳಿ ಅಪಾರ ಪ್ರಮಾಣದ ಬೆಳೆ ಬೆಂಕಿಗಾಹುತಿಯಾಗಿದೆ,ಆಕಸ್ಮಿಕ ಬೆಂಕಿ ತಗುಲಿ 6 ಎಕರೆ ಪ್ರದೇಶದಲ್ಲಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ.ಗ್ರಾಮದ 11 ರೈತರಿಗೆ ಸೇರಿದ ಕಬ್ಬು ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ನಂದಿಸಲು ಸಾಧ್ಯವಾಗದೇ ಹತ್ತಾರು ಎಕರೆ ಪ್ರದೇಶದಲ್ಲಿದ್ದ ಬೆಳೆ ಬೆಂಕಿಗಾಹುತಿಯಾಗಿದೆ.ಲಕ್ಷಾಂತರ ರೂ. ನಷ್ಟವುಂಟಾಗಿದೆ. ಕೈಗೆ ಬಂದ ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial