ಪ್ರಕಾಶ್ ಟ್ರಾವೆಲ್ಸ್​ ಮಾಲೀಕ ಕಾಣೆ: ಕಾರು,ಮೊಬೈಲ್ ಸೇತುವೆ ಬಳಿ ಪತ್ತೆ.|ಶಿವಮೊಗ್ಗ|

ಶಿವಮೊಗ್ಗ: ಪ್ರಕಾಶ್ ಟ್ರಾವೆಲ್ಸ್​ಬಸ್ ನ ಮಾಲೀಕರಾದ ಪ್ರಕಾಶ್ ಎಂಬುವರು ಕಾಣೆಯಾಗಿದ್ದು, ಅವರ ಕಾರು ಹಾಗೂ ಮೊಬೈಲ್ ಹೊಸನಗರದ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿದೆ.

ಸಾಗರ ನಿವಾಸಿಯಾಗಿರುವ ಪ್ರಕಾಶ್, ಮೊನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಮನೆಗೆ ವಾಪಸ್ ಆಗಿರಲಿಲ್ಲ. ಮೊಬೈಲ್ ಮಾತ್ರ ರಿಂಗ್ ಆಗ್ತಾ ಇತ್ತು.‌ ಇನ್ನು ಕಾರು ಬೆಳಗ್ಗೆಯಿಂದ ಪಟಗುಪ್ಪೆ ಸೇತುವೆ ಮೇಲೆ‌ ನಿಂತಿದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಾರು ಹಾಗೂ ಮೊಬೈಲ್ ಸಾಗರದ ಪ್ರಕಾಶ್ ರದ್ದು ಎಂದು ತಿಳಿದು ಬಂದಿದೆ. ಕಾರು ಪತ್ತೆಯಾಗಿದೆಯಾದ್ರೂ ಮಾಲೀಕ ಪ್ರಕಾಶ್ ಪತ್ತೆಯಾಗಿಲ್ಲ.‌ ಈ ಕುರಿತು ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ನಿರ್ಮಾಪಕ ಉಮಾಪತಿಗೆ ಕೊಲೆ ಬೆದರಿಕೆ ಕೇಸ್​: ದರ್ಶನ್ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್​​​.|Umapathy Srinivas|

Sun Jan 23 , 2022
ಬೆಂಗಳೂರು: ನಿರ್ಮಾಪಕ ಉಮಾಪತಿ ಅವರಿಗೆ ಕೊಲೆ ಬೆದರಿಕೆ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಮತ್ತು ಸಂಜಯ್ ಬಂಧಿತ ಆರೋಪಿಗಳು. ಆರೋಪಿಗಳು ಕಳೆದ ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದರು. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳು ಸುಂಕದಕಟ್ಟೆಯ ಬಾರ್​ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಏಕಾಏಕಿ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಪ್ರಾಥಮಿಕ ವಿಚಾರಣೆ ಮುಗಿಸಿ ಜಯನಗರ ಪೊಲೀಸರ […]

Advertisement

Wordpress Social Share Plugin powered by Ultimatelysocial