ಪ್ರಥಮದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ ರನ್ನಬೆಳಗಲಿಯ ಚಿದಾನಂದ ಕಲ್ಲಪ್ಪ

 

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣದ ಡಾ. ಚಿದಾನಂದ ಕಲ್ಲಪ್ಪ ಕುಂಬಾರ ಅವರು ಮೆಡಿಕಲ್ ವಿಭಾಗದ ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ರನ್ನಬೆಳಗಲಿ ಪಟ್ಟಣದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದ್ದಾರೆ.ಚಿದಾನಂದ ಅವರು ರನ್ನಬೆಳಗಲಿ ಬಡಕುಟುಂಬದ ಕಲ್ಲಪ್ಪ ಮತ್ತು ಕಸ್ತೂರಿ ಕುಂಬಾರ ದಂಪತಿಗಳ ಎರಡನೇ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ (1998) ತಾಯಿಯನ್ನು ಕಳೆದುಕೊಂಡವರು. ಇವರ ತಂದೆ ಕಲ್ಲಪ್ಪ ಅವರು ನಿತ್ಯ ಕೂಲಿ ಕೆಲಸಕ್ಕೆ ಹೋಗಿ ಇವರಿಗೆ ಶಿಕ್ಷಣವನ್ನು ಕೊಡಿಸಿದ್ದಾರೆ. ಡಾ.ಚಿದಾನಂದ ಅವರ ತಂದೆ ಇಂದಿಗೂ ಕೂಲಿಕೆಲಸ ಮಾಡುತ್ತಾರೆ. ಹಿರಿಯ ಸಹೋದರ ಪರಮಾನಂದ ಮಹಾಲಿಂಗಪುರ ಪಟ್ಟಣದಲ್ಲಿ ಟೇಲರಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.ಹುಬ್ಬಳ್ಳಿ ಕೆಎಮ್ ಸಿ ಯಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದರು. ಎಂಬಿಬಿಎಸ್ ನಲ್ಲಿ ಕರ್ನಾಟಕ ರಾಜ್ಯಕ್ಕೆ 806 ನೇ ಸ್ಥಾನವನ್ನು ಗಳಿಸಿದ್ದರು. ದೆಹಲಿಯ AIMS ನಲ್ಲಿ ವಿಧ್ಯಾಭ್ಯಾಸ ಮಾಡಿ ಎಂಡಿ (ಔಷಧ) ಪದವಿಯಲ್ಲಿ ದೇಶಕ್ಕೆ 300 ನೇ ರ್ಯಾಂಕ್ ಪಡೆದುಕೊಂಡಿದ್ದರು.ಕಳೆದ ಎರಡು ವರ್ಷದಿಂದ ಹೈದರಾಬಾದ್ ನ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಚಿದಾನಂದ ಅವರು 2021 ನೇ ಸಾಲಿನ ಸುಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ  ಎಂ ಡಿ  ಗ್ಯಾಸ್ಟ್ರೋಎಂಟರಾಲಜಿ  ಮತ್ತು  ಎಂ ಡಿ. ರಕ್ತಶಾಸ್ತ್ರಜ್ಞ    ಎರಡು ವಿಭಾಗದಲ್ಲಿ ಭಾರತ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದುಕೊಂಡು ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ.ಸಾಧಿಸುವ ಛಲ, ಸತತ ಅಧ್ಯಯನ, ಕಠಿಣ ಪರಿಶ್ರಮ ಪಡುವವರಿಗೆ ಬಡತನ ಎಂದಿಗೂ ಅಡ್ಡಿಯಾಗುವದಿಲ್ಲ ಎಂಬುವದಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣದ ಡಾ. ಚಿದಾನಂದ ಕಲ್ಲಪ್ಪ ಕುಂಬಾರ ಅವರು ಸಾಕ್ಷೀಯಾಗಿದ್ದಾರೆ. ಡಾ. ಚಿದಾನಂದ ಕುಂಬಾರ ಅವರ ವೈದ್ಯಕೀಯ ಕ್ಷೇತ್ರದ ಈ ಸಾಧನೆಗೆ ರನ್ನಬೆಳಗಲಿ ಪಟ್ಟಣದ ಹಿರಿಯರು, ಸಾರ್ವಜನಿಕರು, ಕುಂಬಾರ ಕುಟುಂಬದ ಸದಸ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IND vs WI: ವೈಟ್-ಬಾಲ್ ಸರಣಿಯ ODI ಲೆಗ್‌ಗಾಗಿ ಪ್ರವಾಸಿಗರು ಅಹಮದಾಬಾದ್‌ಗೆ ಆಗಮಿಸಿದ್ದಾರೆ

Wed Feb 2 , 2022
ಭಾರತ ಮತ್ತು ವೆಸ್ಟ್ ಇಂಡೀಸ್ ಫೆಬ್ರವರಿಯಲ್ಲಿ ಪ್ರಾರಂಭವಾಗುವ ಮೂರು ODI ಮತ್ತು ಮೂರು T20I ಗಳಲ್ಲಿ ಲಾಕ್ ಆಗಲಿವೆ.ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯು ಮುಚ್ಚಿದ ಬಾಗಿಲುಗಳ ಹಿಂದೆ ನಡೆಯಲಿದೆ”ಬಾರ್ಬಡೋಸ್‌ನಿಂದ ಸುದೀರ್ಘ ಒಂದೆರಡು ದಿನಗಳ ಪ್ರಯಾಣದ ನಂತರ, #MenInMaroon ಭಾರತಕ್ಕೆ ಆಗಮಿಸಿದ್ದಾರೆ.”ಭಾರತದ ವಿರುದ್ಧದ ವೈಟ್ ಬಾಲ್ ಸರಣಿಗೆ ಮುನ್ನ, ಕೀರನ್ ಪೊಲಾರ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಪ್ರವಾಸದ ODI ಲೆಗ್‌ಗಾಗಿ ಅಹಮದಾಬಾದ್‌ಗೆ ಆಗಮಿಸಿದೆ. ಭಾರತ […]

Advertisement

Wordpress Social Share Plugin powered by Ultimatelysocial