ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ: ಇಂಥಾ ಕಾಲದಲ್ಲಿ ಲಕ್ಷಾಂತರ ರೂಪಾಯಿ ಕೈಗೆ ಸಿಕ್ಕರೂ ಮರಳಿ ಕೊಡುವವರು ಯಾರಾದರೂ ಇರ್ತಾರಾ ?

100-200 ರೂಪಾಯಿಗಳಿಗೆ ಕೊಲೆ ನಡೆಯುವ ಕಾಲ ಇದು. ಇಂಥಾ ಕಾಲದಲ್ಲಿ ಲಕ್ಷಾಂತರ ರೂಪಾಯಿ ಕೈಗೆ ಸಿಕ್ಕರೂ ಮರಳಿ ಕೊಡುವವರು ಯಾರಾದರೂ ಇರ್ತಾರಾ ? ಚಾನ್ಸೇ ಇಲ್ಲ ಅಂತ ಹೇಳೋದಕ್ಕೆನೇ ಹೋಗ್ಬೇಡಿ. ಅಂಥವರೂ ನಮ್ಮ ನಿಮ್ಮ ನಡುವೆ ಇದ್ದಾರೆ. ಆಗಾಗ ಅವರ ಸುದ್ದಿಗಳು ಮಾಧ್ಯಮದಲ್ಲಿ ಕೇಳಿ ಬರ್ತಾನೆ ಇವೆ.

ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ಇ- ರಿಕ್ಷಾ ಚಾಲಕರೊಬ್ಬರಿಗೆ 25 ಲಕ್ಷ ರೂಪಾಯಿ ಇರುವ ಬ್ಯಾಗೊಂದು ಸಿಕ್ಕಿದ್ದು. ಅವರು ಅದನ್ನ ನೇರವಾಗಿ ಪೊಲೀಸರಿಗೆ ತಂದು ಕೊಟ್ಟಿದ್ದಾರೆ. ಅವರು ಮಾಡಿರುವ ಈ ಕೆಲಸ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ, ಜೊತೆಗೆ ಮೆಚ್ಚುಗೆಯನ್ನ ಕೂಡ ಸೂಚಿಸಿದ್ದಾರೆ.

ಇ-ರಿಕ್ಷಾ ಚಾಲಕ ಆಸ್ ಮೊಹಮ್ಮದ್ ಬೆಳಿಗ್ಗೆ 10 ಗಂಟೆ ಸುಮಾರಿಗೆ, ಮೋದಿ ನಗರ ಪೊಲೀಸ್ ಠಾಣೆಯ ಬಡಾವಣೆಯ ಬಳಿ ಹೋಗುತ್ತಿದ್ದಾಗ, ಅವರಿಗೆ ರಸ್ತೆ ಪಕ್ಕದಲ್ಲಿ ಬಿದ್ದಿರುವ ಬ್ಯಾಗ್‌ ಒಂದು ಸಿಕ್ಕಿದೆ. ಆ ಚೀಲ ಪರೀಕ್ಷಿಸಿದಾಗ ಅದು ಗರಿ-ಗರಿ ನೋಟಿನಿಂದ ತುಂಬಿತ್ತು. ತಕ್ಷಣವೇ ಆಸ್ ಮೊಹಮ್ಮದ್ ತಮ್ಮ ಸೋದರಳಿಯನನ್ನ ಕರೆದು, ಅವರಿಬ್ಬರೂ ಸೇರಿ ಹತ್ತಿರದ ಮೋದಿನಗರ ಪೊಲೀಸ್ ಸ್ಟೆಷನ್‌ಗೆ ಆ 25 ಲಕ್ಷ ರೂಪಾಯಿ ಹಣದ ಚೀಲವನ್ನ ಕೊಟ್ಟಿದ್ದಾರೆ.

ಆಸ್‌ ಮೊಹಮ್ಮದ್‌ ಇ-ರಿಕ್ಷಾ ಚಾಲಕ. ಆತನಿಗೂ ಹಣದ ಅವಶ್ಯಕತೆ ಇರುತ್ತೆ. ಆತ ಮನಸ್ಸು ಮಾಡಿದರೆ, ಆ ಹಣದ ಚೀಲವನ್ನ ಮನೆಗೆ ತೆಗೆದುಕೊಂಡು ಹೋಗಬಹುದಿತ್ತು. ಆದರೆ ಆತ ಹಾಗೆ ಮಾಡದೇ ಪ್ರಾಮಾಣಿಕತನದಿಂದ, ಆ ಚೀಲದಲ್ಲಿರುವ ಹಣವನ್ನ ಎಣಿಸದೇ ಪೊಲೀಸರಿಗೆ ತಂದು ಕೊಟ್ಟಿದ್ದಾರೆ. ಆತನ ಈ ಪ್ರಾಮಾಣಿಕತನ ಸಮಾಜಕ್ಕೆ ಮಾದರಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆ ನಂತರ ಆಸ್ ಮೊಹಮ್ಮದ್ ಅವರಿಗೆ ಇದೇ ಪೊಲೀಸ್ ಸ್ಟೆಷನ್‌ನಲ್ಲಿ ಸನ್ಮಾನ ಮಾಡಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಯಾಡಗಿ ತಾಲೂಕು ಅತ್ತಿ ಕಟ್ಟಿ ಗ್ರಾಮದಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ

Sat Feb 11 , 2023
ಬ್ಯಾಡಗಿ ತಾಲೂಕು ಅತ್ತಿ ಕಟ್ಟಿ ಗ್ರಾಮದಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ ಸಮಾವೇಶಗಳ ಆಯೋಜನೆ ವಿಚಾರ ಬರುವ ದಿನಗಳಲ್ಲಿ ಎಲ್ಲಾ ಹಿರಿಯರ ಜೊತೆ ಚರ್ಚೆ ಮಾಡುತ್ತೇವೆ ಚರ್ಚೆ ಮಾಡಿ ಸಮಾವೇಶಗಳ ಆಯೋಜನೆ ಬಗೆಗೆ ಚರ್ಚೆ ಮಾಡುವೆ ರೈತ ಮೋರ್ಚಾ, ಎಸ್ ಸಿ ಮೋರ್ಚಾ, ಎಲ್ಲಾ ಮೋರ್ಚಾಗಳ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳ ಆಯೋಜನೆ ಮಾಡೋದಿದೆ ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಈ ನಿಟ್ಟಿನಲ್ಲಿ ನಾವೆಲ್ಲಾ ಕುಳಿತು ಚರ್ಚೆ […]

Advertisement

Wordpress Social Share Plugin powered by Ultimatelysocial