ಮೆಟ್ರೋದಲ್ಲಿ ಬಂದು “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಸಿನಿಮಾ ನೋಡಿದ ಶಿಕ್ಷಣ ಮಂತ್ರಿ ನಾಗೇಶ್!

ಜನಪ್ರಿಯ ಹೀರೋಗಳ ಸಿನಿಮಾಗೆ ಹೋಗಲು ತಡವಾದಾಗ ಅಭಿಮಾನಿಗಳು ಆಟೋ, ಬೈಕ್, ಓ ಲಾ ಹಿಡಿದು ಬರುವುದು ಸಾಮಾನ್ಯ. ಆದರೆ ಮಂತ್ರಿ ಒಬ್ಬರು ಸಿನಿಮಾಗೆ ಬೇಗ ಹೋಗಲು ಮೆಟ್ರೋ ಸಂಚಾರ ಬಳಸಿದ್ದು ಅಚ್ಚರಿಯ ಸಂಗತಿ.
ಮಕ್ಕಳು ಮತ್ತು ಪೇರೆಂಟ್ಸ್ ಮೊಬೈಲ್ ಚಟದ ಬಗ್ಗೆ ಬಂದಿರುವ ಚಿತ್ರ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ದಿನೇ ದಿನೇ ಜನಪ್ರಿಯ ಆಗುತ್ತಿದೆ ಎಂಬುದು ಗಮಿಸಬೇಕಾದ ವಿಷಯ. ಮಧುಚಂದ್ರ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರದಲ್ಲಿ ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅವರು ನಟಿಸಿದ್ದಾರೆ. ಚಿತ್ರ ಸಂಪೂರ್ಣ ಕಾಮಿಡಿ ಇದ್ದರೂ ಜನರನ್ನ ಮೊಬೈಲ್ ಚಟದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯಶಸ್ವಿ ಆಗಿದೆ. ಅದಕ್ಕೆ ಸಾಮಾಜಿಕ ಕಳಕಳಿ ಇದೆ ಎಂಬ ಕಾರಣಕ್ಕೆ ಸರ್ಕಾರ ಅದನ್ನು ಬೆಂಬಲಿಸುವ ಉದ್ದೇಶದಿಂದ ಮಾನ್ಯ ಶಿಕ್ಷಣ ಮಂತ್ರಿ ನಾಗೇಶ್ ಸಿನಿಮಾ ನೋಡಲು ಮಲ್ಲೇಶ್ವರಂ ಮಂತ್ರಿ ಮಾಲ್ ಗೆ ಬಂದರು.
ಸಿನಿಮಾ ನೋಡಿದ ಕೂಡಲೇ ಅವರು ಅದ್ಭುತವಾದ ಪ್ರತಿಕ್ರಿಯೆ ನೀಡಿದರು. ಈ ಸಿನಿಮಾವನ್ನು ಮಕ್ಕಳು ತಮ್ಮ ತಂದೆ ತಾಯಿಗಳ ಜೊತೆಯಲ್ಲಿ ತಪ್ಪದೇ ನೋಡಿ ಎಂದು ತಿಳಿಸಿ, ಜೊತೆಗೆ ಎಲ್ಲಾ ಶಾಲಾ ಮಕ್ಕಳಿಗೆ ಈ ಸಿನಿಮಾ ನೋಡಲು ಶಿಕ್ಷಕರು ಪ್ರೇರೇಪಿಸುವ ಮೂಲಕ ಅವರ ಮೊಬೈಲ್ ಚಟದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಎಂದು ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್‌ಗೆ ಮತ್ತೊಂದು ಬಿಗ್‌ ಶಾಕ್‌:

Wed May 25 , 2022
  ಬೆಂಗಳೂರು: ಜೆಡಿಎಸ್‌ ಪಾರ್ಟಿಯಲ್ಲಿರುವ ಕೆಲವು ಮಂದಿ ನೀಡುತ್ತಿರುವ ಹೇಳಿಕೆಗಳು ಡ್ಯಾಮೇಜ್‌ ಮಾಡಿರುವುದು ಮುಂದುವರೆಯುತ್ತಿದೆ. ಈ ನಡುವೆ ತಮ್ಮ ವ್ಯಂಗ್ಯ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುವ ಸದ್ಯ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಹೊರೆ ಹೊತ್ತಿರುವ ಸಿಎಂ ಇಬ್ರಾಹಿಂ ಹೇಳಿಕೆ ಮತ್ತೆ ಪಾರ್ಟಿಗೆ ಮುಜುಗರವನ್ನು ತಂದಿದೆ. ಹೌದು, ವಿಧಾನಸೌಧದಲ್ಲಿ ಸಿ.ಎಂ ಇಬ್ರಾಹಿಂ ಮಾತನಾಡುತ್ತ, ರಾಜ್ಯದಲ್ಲಿ ಇರುವುದು ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರ ಇದಾಗಿದ್ದು, ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರವನ್ನು ಕಿತ್ತು ಹಾಕಬೇಕು […]

Advertisement

Wordpress Social Share Plugin powered by Ultimatelysocial