ಫೆಬ್ರವರಿ 24ರಂದು ಬೆಂಗಳೂರಿನ ಯಾವ ಮುಖ್ಯ ಚಿತ್ರಮಂದಿರದಲ್ಲಿ ಯಾವ ಚಿತ್ರ?

ಇಂದು ಫೆಬ್ರವರಿ ತಿಂಗಳ ಅಂತಿಮ ಶುಕ್ರವಾರ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಸಹ ವಿವಿಧ ಭಾಷೆಗಳ ಹಲವಾರು ಸಿನಿಮಾಗಳು ತೆರೆಗೆ ಬಂದಿವೆ. ಗೌಳಿ ಹಾಗೂ ಸೌತ್ ಇಂಡಿಯನ್ ಹೀರೊ ಸೇರಿದಂತೆ ಕನ್ನಡದ ಬರೋಬ್ಬರಿ ಒಂಬತ್ತು ಚಿತ್ರಗಳು ಇಂದು ತೆರೆಗೆ ಬಂದಿವೆ. ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ ಸೆಲ್ಫಿ ಚಿತ್ರ ತೆರೆಗೆ ಬಂದಿದೆ.ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಇಂದು ಕನ್ನಡಮಾತ್ರವಲ್ಲದೇ ಪರ ಭಾಷಾ ಚಿತ್ರಗಳು ಸಹ ನೇರ ಬಿಡುಗಡೆ ಕಂಡಿವೆ. ಅದರಲ್ಲಿಯೂ ಸಿನಿಮಾಗಳಿಗೆ ದೊಡ್ಡ ಮಾರ್ಕೆಟ್ ಆಗಿರುವ ಬೆಂಗಳೂರಿನಲ್ಲಿ ಈ ಎಲ್ಲಾ ಚಿತ್ರಗಳೂ ಸಹ ತೆರೆ ಕಂಡಿದ್ದು, ಹೆಚ್ಚುಪ್ರದರ್ಶನಗಳನ್ನುಪಡೆದುಕೊಳ್ಳುವುದರಲ್ಲಿ ಪೈಪೋಟಿ ಏರ್ಪಟ್ಟಿದೆ.ಹೀಗೆ ಹೊಸ ಚಿತ್ರಗಳು ತೆರೆಗೆ ಬಂದಿದ್ದರೂ ಸಹ ಈ ಹಿಂದೆ ತೆರೆಕಂಡಿದ್ದ ಪಠಾಣ್, ಲವ್ ಬರ್ಡ್ಸ್, ಆಂಟ್‌ ಮ್ಯಾನ್ ಹಾಗೂ ವಾತಿ ಚಿತ್ರಗಳು ಹೆಚ್ಚು ಸಂಖ್ಯೆಯ ಶೋಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಳೆದ ತಿಂಗಳ ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಬೆಂಗಳೂರಿನಲ್ಲಿನ ತನ್ನ ಮುಖ್ಯ ಚಿತ್ರಮಂದಿರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೌದು, ಮೊನ್ನೆಯಷ್ಟೇ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಕ್ರಾಂತಿ ಚಿತ್ರ ಬಿಡುಗಡೆಗೊಂಡಿದ್ದರೂ ಸಹ ಇನ್ನೂ ಮುಖ್ಯ ಚಿತ್ರಮಂದಿರವನ್ನು ಕಳೆದುಕೊಳ್ಳದೇ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಹಾಗಾದರೆ ಇಂದು ( ಫೆಬ್ರವರಿ 24 ) ಬೆಂಗಳೂರಿನ ಯಾವ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ವಿವರ ಈ ಕೆಳಕಂಡಂತಿದೆ.ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಜೂಲಿಯಟ್ 2 ( ಕನ್ನಡ ) – ನಾಲ್ಕು ಪ್ರದರ್ಶನಗಳುಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಗೌಳಿ ( ಕನ್ನಡ ) ನಾಲ್ಕು ಪ್ರದರ್ಶನಗಳುಅನುಪಮಾ ಚಿತ್ರಮಂದಿರ : ಕ್ರಾಂತಿ ( ಕನ್ನಡ ) ನಾಲ್ಕು ಪ್ರದರ್ಶನಗಳುಭೂಮಿಕಾ ಚಿತ್ರಮಂದಿರ: ಕ್ಯಾಂಪಸ್ ಕ್ರಾಂತಿ ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಸರ್ ( ತೆಲುಗು ) ಮೂರು ಪ್ರದರ್ಶನಗಳುತ್ರಿವೇಣಿ ಚಿತ್ರಮಂದಿರ : ಹೊಟ್ಟೆಪಾಡು ( ಕನ್ನಡ ) ನಾಲ್ಕು ಪ್ರದರ್ಶನಗಳುವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: 1975 ( ಕನ್ನಡ ) ಎರಡು ಪ್ರದರ್ಶನಗಳು, ಗೌಳಿ ( ಕನ್ನಡ ) ನಾಲ್ಕು ಪ್ರದರ್ಶನಗಳು, ವಿಧಿ 370 ( ಕನ್ನಡ ) ಎರಡು ಪ್ರದರ್ಶನಗಳು ಹಾಗೂ ಜೂಲಿಯಟ್ 2 ( ಕನ್ನಡ ) ಒಂದು ಪ್ರದರ್ಶನ.vಊರ್ವಶಿ ಚಿತ್ರಮಂದಿರ: ಗೌಳಿ ( ಕನ್ನಡ ) ಎರಡು ಪ್ರದರ್ಶನಗಳು ಮತ್ತು ಸೆಲ್ಫಿ ( ಹಿಂದಿ ) ಎರಡು ಪ್ರದರ್ಶನಗಳುಇನ್ನು ಇಂದು ( ಫೆಬ್ರವರಿ 24 ) ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಟಾಪ್ 5 ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..1. ಸೆಲ್ಫಿ – 222 ಪ್ರದರ್ಶನಗಳು2. ಗೌಳಿ – 193 ಪ್ರದರ್ಶನಗಳು3. ವಾತಿ / ಸರ್ – 191 ಪ್ರದರ್ಶನಗಳು4. ಆಂಟ್ ಮ್ಯಾನ್ – 156 ಪ್ರದರ್ಶನಗಳು5. ಪಠಾಣ್ – 76 ಪ್ರದರ್ಶನಗಳು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯರ ಹೃದಯ ಗೆದ್ದ ತಾಂಜೇನಿಯಾದ ಈ ವ್ಯಕ್ತಿ

Sat Feb 25 , 2023
ತಾಂಜೇನಿಯಾ ಮೂಲದ Instagram ಇನ್ ಫ್ಲುಯೆನ್ಸರ್ ಕಿಲಿ ಪಾಲ್‌ ನಂತರ ಮತ್ತೊಬ್ಬರು ಭಾರತೀಯರ ಹೃದಯ ಗೆದ್ದಿದ್ದಾರೆ.ಅಂದ ಹಾಗೆ, ನೆಟಿಜನ್‌ಗಳು ತಮ್ಮ ಸಾಮಾಜಿಕ ಮಾಧ್ಯಮ ಫೀಡ್‌ ಗೆ ತಾಂಜೇನಿಯಾದ ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಂಡಿದ್ದಾರೆ. ಸ್ನೈಪರ್ ಓಲೆ ಸೈಟ್ಲುನ ರೀಲ್‌ಗಳು ಅನೇಕ ಭಾರತೀಯರು ಸೇರಿದಂತೆ Instagram ನಲ್ಲಿ ವೀಕ್ಷಕರ ಮೆಚ್ಚುಗೆ ಪಡೆದಿವೆ.ಕಿಲಿ ಪಾಲ್ ಮತ್ತು ಅವರ ಸಹೋದರಿ ನೀಮಾ ಅವರಂತೆಯೇ ಕಂಟೆಂಟ್ ಅನ್ನು ರಚಿಸುವ ತಾಂಜೇನಿಯಾದವರಾದ ಸೈಟ್ಲು ಅವರು ಇತ್ತೀಚೆಗೆ Instagram ರೀಲ್‌ […]

Advertisement

Wordpress Social Share Plugin powered by Ultimatelysocial