ಫೆ. 1ರಿಂದ ಬಾಗಿಲು ತೆರೆಯಲಿದೆ ಪುರಿ ಜಗನ್ನಾಥ ದೇವಾಲಯ

ಕೋವಿಡ್‌ ಕಾರಣದಿಂದ ಜ.31ರವರೆಗೆ ಬಂದ್‌ ಆಗಿರುವ ಪುರಿ ಜಗನ್ನಾಥ ದೇವಾಲಯ ಫೆ.1ರಿಂದ ತೆರೆಯಲಿದೆ. ಈ ಬಗ್ಗೆ ಪುರಿಯ ಜಿಲ್ಲಾಧಿಕಾರಿ ಸಮರ್ಥ್‌ ವರ್ಮಾ ಮಾಹಿತಿ ನೀಡಿದ್ದು, ಕೋವಿಡ್‌ ಮೂರನೇ ಅಲೆ ಭೀತಿಯಿಂದ ದೇಶದ ಬಹುತೇಕ ದೇವಾಲಯಗಳು ಬಂದ್‌ ಆಗಿದ್ದವು.ಅದರಲ್ಲಿ ಪುರಿ ಜಗನ್ನಾಥ ದೇವಾಲಯವೂ ಒಂದು.ಆದರೆ ಈಗ ಕೋವಿಡ್‌ ನಿಯಮ ಸಡಿಲಿಕೆಯಿಂದ ಭಕ್ತರಿಗೆ ಫೆ.1ರಿಂದ ಜಗನ್ನಾಥನ ದರ್ಶನ ಸಿಗಲಿದೆ ಎಂದರು.ಮುಂದಿನ ದಿನಗಳಲ್ಲಿಯೂ ದೇವಸ್ತಾನದಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸಲಿದ್ದು, ಪ್ರತಿ ಭಾನುವಾರ ಸ್ಯಾನಿಟೈಸೇಷನ್‌ ಗಾಗಿ ದೇವಸ್ಥಾನ ಬಂದ್‌ ಮಾಡಲಾಗುವುದು.ಇನ್ನು ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್‌ ಲಸಿಕೆ ಹಾಗೂ 72 ಗಂಟೆಯೊಳಗಿನ ಆರ್ಟಿಪಿಸಿಆರ್‌ ವರದಿ ತರಬೇಕು ಎಂದರು.ರಾಜ್ಯದಲ್ಲಿ ಹಾಗೂ ದೇವಸ್ಥಾನದ ಸಿಬ್ಬಂದಿಯಲ್ಲಿ ಕೋವಿಡ್‌ ಪತ್ತೆಯಾದ ಕಾರಣ ಜ.10ರಿಂದ ಜ.31ರವರೆಗೆ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಟುಂಬದಿಂದ ಪುನೀತ್ ರಾಜ್ ಕುಮಾರ್ ಪುಣ್ಯತಿಥಿ ಕಾರ್ಯ

Sat Jan 29 , 2022
ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರು ತಿಂಗಳು ಕಳೆದಿದ್ದು, ಇಂದು ರಾಜ್ ಕುಟುಂಬ ಪುಣ್ಯ ತಿಥಿ ಕಾರ್ಯ ನೆರವೇರಿಸಲಿದ್ದಾರೆ.ಅಪ್ಪು ಸಮಾಧಿ ಬಳಿ ಕುಟುಂಬಸ್ಥರು ಇಂದು ಮೂರನೇ ತಿಂಗಳ ಪುಣ್ಯ ತಿಥಿ ಕಾ ರ್ಯ ನೆರವೇರಿಸಲಿದ್ದು, ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳನ್ನೂ ನಡೆಸಲಿದ್ದಾರೆ.ಇದರಂತೆ, 500 ಸಸಿಗಳನ್ನು ಅಭಿ ಮಾ ನಿಗಳಿಗೆ ನೀಡಲಾಗುತ್ತದೆ. ಹಾಗೆಯೇ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಪ್ಪು ಸಮಾದಿ ಎದುರು ಸ್ಕಿಲ್ […]

Advertisement

Wordpress Social Share Plugin powered by Ultimatelysocial